loading...
ಬುಧವಾರ ಪ್ರೋ ರಸ್ಲಿಂಗ್ ಲೀಗ್ ನ ಸೆಮಿಪೈನಲ್ ಪಂದ್ಯಾಟಕ್ಕೆ ಮೊದಲು ನಡೆದ ಕುಸ್ತಿ ಪಂದ್ಯಾಟದಲ್ಲಿ ಯೋಗ ಗುರು ಸ್ವಾಮಿ ಬಾಬಾ ರಾಮ್ ದೇವ್ ಅವರು ಬೀಜಿಂಗ್ ಓಲಿಂಪಿಕ್ ನಲ್ಲಿ ಬೆಳ್ಳಿ ಪದಕ ವಿಜೇತ ಆಂಡ್ರೆ ಸ್ಟಾಡ್ನಿಕ್ ಅವರನ್ನು 12-0 ಅಂತರದಿಂದ ಸೋಲಿಸಿದ್ದಾರೆ.
ಇದೊಂದು ಪ್ರೆಂಡ್ಲಿ ಕುಸ್ತಿ ಪಂದ್ಯಾಟವಾಗಿದ್ದು ಬಾಬಾ ರಾಮ್ ದೇವ್ ಅವರೇ ಸ್ಟಾಡ್ನಿಕ್ ರನ್ನು ಪಂಥಕ್ಕೆ ಆಹ್ವಾನಿಸಿದ್ದರು.ಭಾರತೀಯ ಯೋಗದ ತಾಕತ್ತು ಏನು ಎಂಬುದನ್ನು ಜಗತ್ತಿಗೆ ತೋರಿಸುವುದು ರಾಮ್ ದೇವ್ ಬಯಕೆಯಾಗಿತ್ತು.
ಪಂದ್ಯಾಟದ ಪ್ರಾರಂಭದಿಂದಲೂ ರಾಮ್ ದೇವ್ ಅವರೇ ಮೇಲುಗೈ ಸಾಧಿಸಿದ್ದು ಕೊನೆಗೂ ಒಲಿಂಪಿಕ್ ಸಿಲ್ವರ್ ಪದಕ ವಿಜೇತ ಸ್ಟಾಡ್ನಿಕ್ ಅವರನ್ನು 12-0 ಅಂತರದಿಂದ ಸೋಲಿಸಿದರು.
loading...
Post a Comment