loading...
ಕೆನಡಾದಲ್ಲಿ ಅಮೆಜಾನ್ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಭಾರತೀಯ ರಾಷ್ಟ್ರಧ್ವಜ ಹೋಲುವ ಡೋರ್ ಮ್ಯಾಟ್ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವಿರುದ್ಧ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಕೆಂಡಾಮಂಡಲವಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ "ಭಾರತೀಯ ರಾಷ್ಟ್ರಧ್ವಜಕ್ಕೆ ಅವಮಾನವಾಗುವಂತಹ ಉತ್ಪನ್ನಗಳನ್ನು ಮಾರಿದ್ದಕ್ಕಾಗಿ ಸುಷ್ಮಾ ಸ್ವರಾಜ್ ಭಾರತೀಯರಲ್ಲಿ ಬೇಷರತ್ ಕ್ಷಮೆ ಕೇಳಬೇಕು ಹಾಗೂ ಅಂತಹ ಉತ್ಪನ್ನಗಳನ್ನು ತನ್ನ ಆನ್ಲೈನ್ ಮಾರುಕಟ್ಟೆಯಿಂದ ಹಿಂಪಡೆಯಬೇಕು. ಒಂದು ವೇಳೆ ಅಮೆಜಾನ್ ಹೀಗೆ ಮಾಡದೆ ಹೋದರೆ ಅಮೆಜಾನ್ ಅಧಿಕಾರಿಗಳಿಗೆ ಭಾರತೀಯ ವೀಸಾ ನಿರಾಕರಿಸಲಾಗುವುದು ಹಾಗೂ ಈಗ ಇರೋ ವೀಸಾಗಳನ್ನು ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಕೆನಾಡದಲ್ಲಿ ಭಾರತಿಯ ತ್ರಿವರ್ಣ ಧ್ವಜ ವಿರುವ ಡೋರ್ ಮ್ಯಾಟ್ ಗಳ ಮಾರಾಟ ಮಾಡಲಾಗುತ್ತಿದೆ ಎಂದು ಭಾರತೀಯ ಮೂಲದ ಕೆನಡ ನಿವಾಸಿಗಳು ಟ್ವೀಟ್ ಮಾಡಿ ಸುಷ್ಮಾಸ್ವರಾಜ್ ಅವರಿಗೆ ಮಾಹಿತಿ ನೀಡಿದ್ದರು.
ಅಮೆಜಾನ್ ಕಂಪನಿ ಹಿಂದೊಮ್ಮೆ ಹಿಂದೂ ದೇವತೆಗಳಿಗೆ ಅವಮಾನವಾಗುವಂತಹ ಉತ್ಪನ್ನಗಳನ್ನು ಮಾರಾಟ ಮಾಡಿ ಭಾರತೀಯರಿಂದ ಛೀಮಾರಿ ಹಾಕಿಸಿಕೊಂಡಿತ್ತು. ಆ ಸಮಯದಲ್ಲೇ ಅಮೆಜಾನ್ ಉತ್ಪನ್ನ ಖರೀದಿಸದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿತ್ತು. ಈಗ ಮತ್ತೆ ಭಾರತೀಯ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡೋ ಮೂಲಕ ಮತ್ತೆ ತನ್ನ ಹಿಂದಿನ ಚಾಳಿ ಮುಂದುವರೆದೆ.
#BoycottAmazon
loading...
Post a Comment