loading...
ನಾವು ತಿಳಿದ ಹಾಗೆ ಜನರು ವಿದ್ಯೆ ಕಲಿತಷ್ಟು, ತಂತ್ರಜ್ಞಾನ ಬೆಳೆದಷ್ಟು ಅಂಧಕಾರದಿಂದ ಹೊರಬರುತ್ತಾರೆ, ಬುದ್ದಿವಂತರಾಗುತ್ತಾರೆ ಆದರೆ ಇಲ್ಲೊಬ್ಬ ಆಸಾಮಿ ವಿದ್ಯೆ ಕಲಿತು ಬ್ಯಾಂಕ್ ಮ್ಯಾನೇಜರ್ ಎಂಬ ಉನ್ನತ ಹುದ್ದೆಯಲ್ಲಿದ್ದರೂ ತನ್ನ ತಲೆಯಿಂದ ಜಾತಿ ಬೇಧ, ದಲಿತ ಬಲ್ಲಿದ ಎಂಬ ಅನಿಷ್ಟವನ್ನು ಹೊರಹಾಕಿಲ್ಲ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಐಡಿಹಳ್ಳಿಯ ಎಸ್’ಬಿ’ಎಮ್ ಬ್ಯಾಂಕ್ ನ ಮ್ಯಾನೇಜರ್ ಆಗಿರುವ ರಂಜಿತ್ ಎಂಬಾತ ಬ್ಯಾಂಕ್ ಗೆ ಬರುವ ಸ್ಥಳೀಯ ಜನರನ್ನು ದಲಿತರೆಂಬ ಕಾರಣವೊಡ್ಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕಿಗೆ ಬರುವ ಸ್ಥಳೀಯರ ಪಾಸ್ ಬುಕ್ ಕೈಯಲ್ಲಿ ಮುಟ್ಟದೆ ಅದಕ್ಕೆ ಪ್ರತ್ಯೇಕವಾದ ಪೆನ್ ಪೇಪರ್ ಬಳಸಿ ಪರಿಶೀಲಿಸುತ್ತಾನೆ, ಈ ಬಗ್ಗೆ ವಿಚಾರಿಸಿದರೆ ನೀವೆಲ್ಲ ಸರಿಇಲ್ಲ ಅಸಹ್ಯ ಎಂದು ಅಸಭ್ಯವಾಗಿ ವರ್ತಿಸುತ್ತಾನೆ. ಈ ಬಗ್ಗೆ ಗ್ರಾಹಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರಂಜಿತ್ ನ ಕಪಿಚೇಷ್ಟೆಯನ್ನು ಸೆರೆಹಿಡಿದಿದ್ದಾರೆ.
ಜನರ ಮಧ್ಯೆ ದಲಿತ ಬಲ್ಲಿದ ಎಂಬ ವಿಷಕಾರೋ ಇಂತಹ ನಾಲಾಯಕ್ ಗಳು ಆ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಆದಷ್ಟು ಬೇಗ ಕರ್ನಾಟಕ ಸರ್ಕಾರ ಆತನನ್ನು ಮ್ಯಾನೇಜರ್ ಹುದ್ದೆಯಿಂದ ಕೆಳಗಿಳಿಸಿ ಆ ಜಾಗಕ್ಕೆ ಜನರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸುವ ಅಧಿಕಾರಿಯನ್ನು ನೇಮಿಸಬೇಕು ಎಂಬುದು ನಮ್ಮ ಆಶಯ.
ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪೋವರೆಗೆ ಶೇರ್ ಮಾಡಿ.
loading...
Post a Comment