Veerakesari 02:35
loading...
"ಪಾಕಿಸ್ತಾನ ಇಸ್ಲಾಂನ ಅತೀ ದೊಡ್ಡ ಶತ್ರು"
ಈ ಮಾತನ್ನು ನಾವು ಹೇಳ್ತಾ ಇಲ್ಲಾ ದೇಶ ವಿಭಜನೆ ಸಂದರ್ಭ ಸೋಕಾಲ್ಡ್ ಕೆಲ ಸ್ವಾತಂತ್ರ್ಯ ಹೋರಾಟಗಾರರ* ಕುತಂತ್ರದಿಂದ ಪಾಕಿಸ್ತಾನದಲ್ಲಿ ವಿಲೀನಗೊಂಡು ಅಂದಿನಿಂದಲೂ ಪ್ರತ್ಯೇಕ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನದ ಮಹಿಳೆಯೊಬ್ಬರು ಹೇಳ್ತಾ ಇದ್ದಾರೆ. 

ಪಾಕಿಸ್ತಾನ 30ಲಕ್ಷಕ್ಕೂ ಅಧಿಕ ಬಂಗಾಲಿ ಮುಸಲ್ಮಾನರನ್ನು ಹತ್ಯೆ ಮಾಡಿತ್ತು, 40ಲಕ್ಷ ಅಪ್ಘಾನಿ ಮುಸಲ್ಮಾನರನ್ನು ಹತ್ಯೆ ಮಾಡಿತ್ತು, ಪಾಕಿಸ್ತಾನಕ್ಕೂ ಇಸ್ಲಾಂ ಗೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನದಲ್ಲಿ ಇಸ್ಲಾಂ ನ ಹೆಸರಲ್ಲಿ ಅಮಾಯಕರ ರಕ್ತಪಾತ ನಡೆಯುತ್ತೆ, ಬಲೂಚಿಸ್ತಾನದ ಪ್ರಜೆಗಳನ್ನು ಅಪಹರಿಸಿ ಅವರ ಅಂಗಾಂಗಳನ್ನು ಮಾರಲಾಗುತ್ತೆ, ಆತಂಕವಾದವನ್ನು ಹರಡಲಾಗುತ್ತಿದೆ. ಅದೇ ಇಸ್ಲಾಂನಲ್ಲಿ ಹೇಳಲಾಗುವ ಶಾಂತಿ ಎಂಬ ಪದ ನಿಜವಾಗಿಯೂ ಅನುಸರಿಸುತ್ತಿರುವ ದೇಶ ಎಂದರೆ ಅದು ಹಿಂದುಸ್ತಾನ ಮಾತ್ರ.

ಬಲುಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ನರಹತ್ಯೆಗಳನ್ನು ಅವರು ಈ ವೀಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ. ಅನ್ನ ಆಹಾರ ನೀಡದೆ ಬಲೂಚ್ ಗಳನ್ನು ಹತ್ಯೆ ಮಾಡಲಾಗುತ್ತಿದೆ, ಮಹಿಳೆಯರ ಶೀಲ ಹರಣ ಮಾಡಲಾಗುತ್ತಿದೆ,  ಮನೆಮಠಗಳನ್ನು ಬೆಂಕಿಹಚ್ಚಿ ಸುಡಲಾಗುತ್ತಿದೆ. ಸ್ವಾತಂತ್ರ್ಯ ಕೇಳಿದ ಬಲೂಚ್ ಗಳನ್ನು ಅಪಹರಿಸಿ ಕೊಲೆಮಾಡಿ ಹೆಣಗಳನ್ನು ಅಲ್ಲಲ್ಲಿ ಎಸೆದು ಹೋಗುತ್ತಾರೆ, ಕುಡಿಯುವ ನೀರಿಗೆ ವಿಷ ಮಿಶ್ರಣ ಮಾಡುತ್ತಾರೆ, ಕೆಮಿಕಲ್ ವೆಪನ್ ಬಳಸುತ್ತಾರೆ. ಪ್ರಾಣಿಗಳಿಗಿಂತ ಕಡೆಯಾಗಿ ಬಲೂಚ್ ಗಳನ್ನು ಪಾಕಿಸ್ತಾನ ಸೇನೆ ನಡೆಸಿಕೊಳ್ಳುತ್ತಿದೆ. 

ಇದಕ್ಕೆ ಎಲ್ಲಾ ದೇಶಗಳು ಕೈಜೋಡಿಸಿ ಪಾಕಿಸ್ತಾನಕ್ಕೆ ದಿಗ್ಬಂಧನ ಹಾಕಬೇಕು, ಪಾಕಿಸ್ತಾನಕ್ಕೆ ವಿದೇಶಗಳಿಂದ ಹರಿದುಬರುವ ಹಣವನ್ನು ತಡೆಯಬೇಕು, ಯುದ್ದಾಯುಧಗಳನ್ನು ಪಾಕಿಸ್ತಾನಕ್ಕೆ ನೀಡಬಾರದು. ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಭಯೋತ್ಪಾದನೆಯನ್ನು ವಿಶ್ವಕ್ಕೆ ಹರಡುತ್ತಿದೆ. ಪಾಕಿಸ್ತಾನದೊಂದಿಗೆ ವ್ಯವಹಾರ ತಡೆಹಿಡಿದು ಆರ್ಥಿಕ ದಿಗ್ಭಂಧನ ಹಾಕಿದರೆ ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನ ಮುಚ್ಚಿಹೋಗಲಿದೆ.

ಶೇರ್ ಮಾಡಿ, ಪಾಕಿಸ್ತಾನದ ನೈಜ ಮುಖ ಜಗಜ್ಜಾಹೀರು ಆಗಲಿ. ಪಾಕಿಸ್ತಾನವನ್ನು ಸ್ವರ್ಗ ಎಂದವರಿಗೆ ಪಾಕಿಸ್ತಾನದ ನರಕ ದರ್ಶನವಾಗಲಿ.
ವೀಡಿಯೋ ನೋಡಿ :
loading...

Post a Comment

Powered by Blogger.