Veerakesari 01:37
loading...
ಭಾರತೀಯ ಸೇನೆಯ ಯೋಧರ ಬಹು ದಿನದ ಬೇಡಿಕೆ ಈಡುರುವ ಕಾಲ ಸನ್ನಿಹಿತವಾಗಿದೆ. ಗುಂಡು ನಿರೋಧಕ ಹೆಲ್ಮೆಟ್ ಬೇಕು ಎಂಬುದು ಯೋಧರ ಬಹುದಿನದ ಬೇಡಿಕೆಯಾಗಿತ್ತು. ಈಗ ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಲು ಮುಂದೆ ಬಂದಿದ್ದು ಅದಾಗಲೇ ಹೆಲ್ಮೆಟ್ ತಯಾರಿಕೆಗೆ ಕಾನ್ಪುರ ಮೂಲದ ಎಂಕೆಯು ಇಂಡಸ್ಟ್ರೀಸ್ ಎಂಬ ಸಂಸ್ಥೆಯೊಂದಿಗೆ 180 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಎಂಕೆಯು ಇಂಡಸ್ಟ್ರೀಸ್ 1,58,279 ಹೆಲ್ಮೆಟ್ ಗಳನ್ನು ತಯಾರಿಸಿ ಭಾರತೀಯ ಸೇನೆಗೆ ಹಸ್ತಾಂತರಿಸಲಿದೆ.

ಕಳೆದ ಸಪ್ಟೆಂಬರ್ ನಲ್ಲೆ ಎಂಕೆಯು ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.ಈಗ ಎಂಕೆಯು ಸಂಸ್ಥೆ ಹೆಲ್ಮೆಟ್ ತಯಾರಿಕೆಯನ್ನು ಆರಂಭಿಸಿದೆ. ಮುಂದಿನ ಮೂರುವರ್ಷಗಳಲ್ಲಿ ಹಂತಹಂತವಾಗಿ ಸಂಸ್ಥೆ ಹೆಲ್ಮೆಟ್ ಗಳನ್ನು ಸೇನೆಗೆ ಹಸ್ತಾಂತರಿಸಲಿದೆ.

ಎಂಕೆಯು ಸಂಸ್ಥೆ ಅಂತರಾಷ್ಟ್ರೀಯ ಗುಣಮಟ್ಟದ ಸೇನಾ ಪರಿಕರ ತಯಾರಿಸುವ ಸಂಸ್ಥೆಯಾಗಿದ್ದು, ವಿಶ್ವದ ಹಲವೆಡೆ ಸೇನಾ ಪರಿಕರಗಳನ್ನು ರಫ್ತು ಮಾಡುತ್ತಿದೆ. ಈಗ ಸೇನೆಗೆ ತಯಾರಿಸುತ್ತಿರುವ ಅತ್ಯಾಧುನಿಕ ಹಲ್ಮೆಟ್ಗಳು ವಿಶ್ವ ದರ್ಜೆಯಿಂದ ಕೂಡಿರಲಿದ್ದು ರಾತ್ರಿ ಕಾರ್ಯಾಚರಣೆಗೆ ಟೆಲಿಸ್ಕೋಪ್ ಗಳು,ನೈಟ್ ವಿಷನ್ ವ್ಯವಸ್ಥೆ, ಕಮ್ಯುನಿಕೇಶನ್ ವ್ಯವಸ್ಥೆ ಅಳವಡಿಸಬಹುದಾಗಿದೆ. ಜೊತೆಗೆ ಈಗ ಸೇನೆ ಬಳಸುತ್ತಿರುವ ಹೆಲ್ಮೆಟ್ ಗಳಿಗಿಂತ ತುಂಬಾ ಹಗುರ ಮತ್ತು ಕಠಿಣವಾಗಿರಲಿದೆ.

ಕಳೆದ ಆಗಸ್ಟ್ ನಲ್ಲಿ ನೌಹಟ್ಟಾ ದಲ್ಲಿ ಸೇನೆಯ ಮೇಲೆ ನಡೆದ ಉಗ್ರದಾಳಿ ವೇಳೆ ಉಗ್ರ ಸಿಡಿಸಿದ ಗುಂಡು ಯೋಧ ಪ್ರಮೋದ್ ಕುಮಾರ್ ತಲೆಗೆ ಸಿಡಿದು ಹುತಾತ್ಮರಾಗಿದ್ದರು.ಈ ಘಟನೆಯ ನಂತರ ಬುಲೆಟ್ ಫ್ರೂಫ್ ಹೆಲ್ಮೆಟ್ ಖರೀದಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಬಂದಿತ್ತು. ಈಗ ಸೇನೆಗೆ ಕೇಂದ್ರ ಸರ್ಕಾರ ಬುಲೆಟ್ ಪ್ರೂಫ್ ಹೆಲ್ಮೆಟ್ ಖರೀದಿಗೆ ಮುಂದಾಗಿರೋದು ತುಂಬಾ ಉತ್ತಮ ಬೆಳವಣಿಗೆಯಾಗಿದೆ.
loading...

Post a Comment

Powered by Blogger.