loading...
ಅಂತೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ದೇಶಭಕ್ತರಿಗೆ ಸಾವೇ ಗತಿ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ. ಇದುವರೆಗೂ ಕೇರಳ ಮೂಲದ ಮತಾಂಧ ಸುಪಾರಿ ಹಂತಕರನ್ನು ಬಳಸಿ ಹಿಂದು ಸಂಘಟನೆಗಳ ಮುಖಂಡರ ತಲೆ ತೆಗೆಸುತ್ತಿದ್ದ ಕಾಂಗ್ರೆಸ್ ಪ್ರೇರಿತ ಗೂಂಡಾಗಳು ಪೊಲೀಸರನ್ನು ಬಳಸಿಕೊಂಡು ಮಾಧ್ಯಮ ಸಲಹೆಗಾರನ ಸಲಹೆಯ ಮೇರೆಗೆ ಸಾಮಾಜಿಕ ಮಾಧ್ಯಮದಲ್ಲಿನ ರಾಷ್ಟ್ರವಾದಿಗಳನ್ನು ಜೈಲಿಗೆ ತಳ್ಳುವ ಕೆಲಸ ಮಾಡಿತ್ತು. ಈಗ ಅದರ ಮುಂದುವರೆದ ಭಾಗವಾಗಿ ದೇಶವನ್ನು ಪ್ರೀತಿಸುವ ವಿದ್ಯಾರ್ಥಿಗಳನ್ನೂ ಬಿಡದೇ ತಮ್ಮ ಪಕ್ಷದ ಮರಿಗೂಂಡಾ ಪಡೆಯಾದ ಎನ್ ಎಸ್ ಐ ಯು ಧಾಂಡಿಗರಿಂದ ಬೆದರಿಕೆ ಹಾಕಿಸಿ ಪೊಲೀಸರಿಂದ ಕೇಸು ಹಾಕಿಸಿ ಇನ್ನೂ ಅರಳದ ಮುಗ್ಧ ಜೀವವೊಂದನ್ನು ಬಲಿ ತೆಗೆದುಕೊಂಡುಬಿಟ್ಟಿದ್ದಾರೆ. ತಮ್ಮ ಅಧಿಕಾರಮದದಿಂದ ಎಳೆಯ ಪ್ರಾಯದ ರಾಷ್ಟ್ರಭಕ್ತ ವಿದ್ಯಾರ್ಥಿ ಸಂಘಟನೆಗೆ ಸೇರಿದ ಎಬಿವಿಪಿಯ ವಿದ್ಯಾರ್ಥಿಯೊಬ್ಬನನ್ನು ಯಮಪುರಿಗೆ ಅಟ್ಟಿಬಿಟ್ಟಿದ್ದಾರೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಈ ಮುಘಲ್ ಸರ್ಕಾರವೇ ಈ ಸಾವಿಗೆ ನೇರ ಹೊಣೆಯಾಗಿರುವುದು ಕರ್ನಾಟಕದ ದುರಂತವೇ ಸರಿ.
ನಿಮ್ಮ ಅಭಿಪ್ರಾಯ ತಿಳಿಸಿ :
ನಿಮ್ಮ ಅಭಿಪ್ರಾಯ ತಿಳಿಸಿ :
ನಡೆದಿದ್ದೇನು..???
ಎಬಿವಿಪಿ ಒಂದು ರಾಷ್ಟ್ರಭಕ್ತ ವಿದ್ಯಾರ್ಥಿ ಸಂಘಟನೆ. ಸೈನಿಕರನ್ನು ಗೌರವಿಸಲು ಹಿಂದಿನಿಂದಲೂ ಬೇರೆ ಬೇರೆ ಕಾಲೇಜುಗಳಲ್ಲಿ "ಯೋಧ ನಮನ" ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ. ಅದೇ ರೀತಿ ಶೃಂಗೇರಿಯ ಖಾಸಗಿ ಕಾಲೇಜೊಂದರಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಎನ್ ಎಸ್ ಎಸ್ ವಿದ್ಯಾರ್ಥಿಗಳು ನಿರ್ಧರಿಸಿ ಎಬಿವಿಪಿಯ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು ಕಾಂಗ್ರೆಸ್ ಮರಿ ರೌಡಿಗಳ ಸಂಘವಾದ ಯೂತ್ ಕಾಂಗ್ರೆಸ್ (NSUI) ನವರನ್ನು ಕೆರಳಿಸಿತ್ತು. ಸಾಲದ್ದಕ್ಕೆ ಭಾಷಣಕ್ಕೆ ಕರೆಸುತ್ತಿರುವ ವಿಷಯ ಕೇಳಿ ಇನ್ನೂ ಕೆಂಡಾಮಂಡಲವಾದರು. ಕೂಡಲೇ ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ವಿದ್ಯಾರ್ಥಿ ಮುಖಂಡರಿಗೆ ಬೆದರಿಕೆ ಕರೆಗಳು ಹೋದವು. ಕಾರ್ಯಕ್ರಮ ನಿಲ್ಲದಿದ್ದರೆ ಮುಂದಾಗುವ ಭೀಕರ ಪ್ರತಿಕ್ರಿಯೆಯ ಬಗ್ಗೆ ಕಮ್ಯುನಿಸ್ಟ್ ಮಾದರಿಯಲ್ಲಿ ಎಚ್ಚರಿಕೆ ನೀಡಿದರು. ಸೈನಿಕರನ್ನು ಸನ್ಮಾನಿಸಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು ಅಂತ ಯಾರೂ ಈ ರೌಡಿಗಳ ಮಾತಿಗೆ ಬೆದರಿಕೆಗೆ ಸೊಪ್ಪು ಹಾಕಲಿಲ್ಲ. ಇದರಿಂದ ಕೆರಳದ ಯೂತ್ ಕಾಂಗ್ರೆಸ್ ನ ರೌಡಿಗಳು ಬೇರೆ ಊರುಗಳಿಂದ ಜನರನ್ನು ಕರೆಸಿ ಕಾಲೇಜಿನ ಮುಂದೆ ಪ್ರತಿಭಟನೆ ಮಾಡಿಸಿತು. ಇದರಿಂದ ಮನನೊಂದ ಪ್ರಾಂಶುಪಾಲರು ಇಲ್ಲದ ಸಮಸ್ಯೆ ಸೃಷ್ಟಿಸುವುದಕ್ಕೆ ಅವಕಾಶ ಕೊಡುವುದು ಬೇಡವೆಂದು ಕಾರ್ಯಕ್ರಮವನ್ನು ರದ್ದುಗೊಳಿಸಿದರು.
ಆದರೆ ವಿಷಯವನ್ನು ಇಷ್ಟಕ್ಕೇ ಬಿಡದ ನರರಾಕ್ಷಸರಾದ ಯೂತ್ ಕಾಂಗ್ರೆಸ್ ನ ರೌಡಿಗಳು ಕಾಲೇಜಿನ ನಾಲ್ಕು ಜನ ವಿದ್ಯಾರ್ಥಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಎಷ್ಟೆ ಆದರೂ ದೂರು ಕೊಟ್ಟವರು ಆಡಳಿತ ಪಕ್ಷದವರು ತಾನೇ ಪೊಲೀಸರು ಹಿಂದೆ ಮುಂದೆ ಯೋಚಿಸದೇ ಅರಿಯದ ಹುಡುಗರ ಮೇಲೆ ಎಫ್ ಐ ಆರ್ ದಾಖಲು ಮಾಡಿದರು. ಇದರಿಂದ ಭಯಪಟ್ಟ ಅಭಿಷೇಕ್ ಎಂಬ 21 ವರ್ಷದ ವಿದ್ಯಾರ್ಥಿ ತನ್ನ ಸಾವಿಗೆ ಕಾರಣವೇನೆಂಬುದನ್ನು ಬರೆದಿಟ್ಟು ನೇಣು ಹಾಕಿಕೊಂಡು ಸಾವಿಗೆ ಶರಣಾದ. ಈ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದರೆ ಈ ಕಾಂಗ್ರೆಸ್ ಗೂಂಡಾಗಳು ಮತ್ತು ಪೊಲಿಸರು ಅವನನ್ನು ಅದೆಷ್ಟು ಹೆದರಿಸಿದ್ದಿರಬೇಕು ನೀವೇ ಯೋಚಿಸಿ. ಈ ರಾಜ್ಯದ ದೌರ್ಭಾಗ್ಯಪೂರ್ಣ ಮುಖ್ಯಮಂತ್ರಿಯವರು ಆ ಹುಡುಗನ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟಿದ್ದ ಅವನ ತಂದೆ ತಾಯಿಯರ ಪುತ್ರ ಶೋಕವನ್ನು ಅರ್ಥಮಾಡಿಕೊಂಡು ಅವನ ಸಾವಿಗೆ ಕಾರಣರಾದ ತಮ್ಮ ಚೇಲಾಗಳಾದ ಯೂತ್ ಕಾಂಗ್ರೆಸ್ ನ ಮರಿ ರೌಡಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸಿ ನ್ಯಾಯ ಕೊಡಿಸುತ್ತಾರೋ ಇಲ್ಲ ಸತ್ತವನು ಎಬಿವಿಪಿ ಯ ಕಾರ್ಯಕರ್ತ ಎಂಬ ಕಾರಣಕ್ಕಾಗಿ ತಮ್ಮ ಹಳೆಯ ಕೋಮುವಾದಿ ಡೈಲಾಗ್ ಹೊಡೆಯುತ್ತಾ ಗೂಂಡಾ ಕಾಂಗ್ರೆಸ್ ನ ಯೂತ್ ವಿಂಗಿನ ಕೊಲೆಗಡುಕರನ್ನು ಬಂಧಿಸಿ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುತ್ತಾರೋ ಕಾದು ನೋಡಬೇಕಿದೆ.
ಆದರೆ ಇದೆಲ್ಲದರ ನಡುವೆ ಕಾಂಗ್ರೆಸ್ ನ ಗೂಂಡಾಗಿರಿಯು ನೆರೆಯ ಕೇರಳದ ಕಮ್ಯುನಿಸ್ಟ್ ಮಾದರಿಯ ಗೂಂಡಾಗಿರಿಯನ್ನು ಅನುಕರಿಸುತ್ತಿರುವುದು ಮಾತ್ರ ಕರ್ನಾಟಕದ ಜನತೆಯ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ಮುಂದೊಂದು ದಿನ ಈ ಸರ್ಕಾರದ ಆಡಳಿತದಲ್ಲಿ ತ್ರಿವರ್ಣ ಧ್ವಜ ಹಾರಿಸಿದವರ ಕೈ ಕತ್ತರಿಸಿದರೂ ಅಚ್ಚರಿಪಡುವಂತಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗುತ್ತಿರುವುದಂತೂ ನಿಜ.
loading...
Post a Comment