loading...
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಿಹಾದಿಗಳ ವಿರುದ್ದ ತಮ್ಮ ಬತ್ತಳಿಕೆಯಿಂದ ಒಂದೊಂದೇ ಬಹ್ಮಾಸ್ತ್ರಗಳನ್ನು ಬಳಸಲು ಶುರುಮಾಡಿದ್ದಾರೆ. ಮುಂದಿನ ಒಂದು ತಿಂಗಳವರೆಗೆ ಏಳು ಇಸ್ಲಾಮಿಕ್ ದೇಶಗಳಿಂದ ಪ್ರವಾಸಿಗರು ತಮ್ಮ ದೇಶಕ್ಕೆ ಬರುವುದನ್ನು ತಡೆ ಹಿಡಿದಿದ್ದಾರೆ ಅಷ್ಟೇ ಅಲ್ಲದೆ ಇಸ್ಲಾಮಿಕ್ ದೇಶಗಳಿಂದ ಅಮೇರಿಕಾಗೆ ನಿರಾಶ್ರಿತರ ಒಳಬರುವಿಕೆಯನ್ನು ತಡೆಹಿಡಿಯಲಾಗಿದೆ.
ಇಸ್ಲಾಮಿಕ್ ದೇಶಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯ, ಸಿರಿಯಾ, ಯೆಮೆನ್ ಹಾಗೂ ಸೂಡಾನ್ ದೇಶಗಳ ಮೇಲೆ ಈ ನಿಶೇಧ ಹೇರಲಾಗಿದೆ. ಇಸ್ಲಾಮಿಕ್ ಉಗ್ರರ ಅಮೇರಿಕಾ ಪ್ರವೇಶ ತಡೆದು ಮೂಲ ಅಮೇರಿಕರನ್ನು ಭಯೋತ್ಪಾದಕ ದಾಳಿಗಳಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಈ ಕ್ರಮವನ್ನು ಅಮೇರಿಕಾ ಮಿತ್ರ ರಾಷ್ಟ್ರಗಳು ಹೊಗಳಿದ್ದು ಟ್ರಂಪ್ ಅವರ ಈ ಕ್ರಮ ಇಸ್ಲಾಂ ದೇಶಗಳ ಭಯೋತ್ಪಾದಕರು ಮತ್ತು ಭಯೋತ್ಪಾದನೆ ಚಟುವಟಿಕೆಗೆ ಭಾರೀ ಪೆಟ್ಟು ನೀಡಲಿದೆ ಎಂದಿದ್ದಾರೆ.
ಈಗಾಗಲೇ ಯುರೋಪ್ ರಾಷ್ಟ್ರಗಳು ಇಸ್ಲಾಮಿಕ್ ರಾಷ್ಟ್ರಗಳಿಂದ ನಿರಾಶ್ರಿತರನ್ನು ಒಳಬಿಟ್ಟುಕೊಂಡು ಜಿಹಾದಿಗಳಿಂದ ಭಾರೀ ರಕ್ತಪಾತಗಳನ್ನು ಅನುಭವಿಸುತ್ತಿದೆ. ಅಮೇರಿಕಾ ಈ ರೀತಿ ಇಸ್ಲಾಮಿಕ್ ಭಯೋತ್ಪಾಕರ ದಾಳಿಗೊಳಗಾಗಬಾರದು ಎಂಬುದು ಟ್ರಂಪ್ ಈ ಕ್ರಮ ಕೈಗೊಳ್ಳಲು ಕಾರಣ. ಮುಸ್ಲಿಂ ನಿರಾಶ್ರಿತರ ಬದಲು ಯುದ್ದಪೀಡಿತ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತೊಂದರೆಗೆ ಸಿಲುಕಿರುವ ಕ್ರಿಶ್ಚಿಯನ್ ನಿರಾಶ್ರಿತರಿಗೆ ಅಮೆರಿಕಾದಲ್ಲಿ ಮೂಲಸೌಕರ್ಯ ಒದಗಿಸುವುದಾಗಿ ಟ್ರಂಪ್ ಹೇಳಿದ್ದಾರೆ.
loading...
Post a Comment