loading...
ಜಿಹಾದಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಸೇರಲು ಅಣಿಯಾಗಿದ್ದ ಕೇರಳ ಮೂಲದ ಇಬ್ಬರು ಮುಸ್ಲಿಂ ಯುವಕರನ್ನು ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಯಾಸ್ಮೀನ್ ಮಹಮ್ಮದ್ ಜಹೀದ್ ಮತ್ತು ಅಬ್ದುಲ್ ರಶೀದ್ ಅಬ್ದುಲ್ಲಾ ಎಂಬಿಬ್ಬರನ್ನು ಭಾರತೀಯ ದಂಡ ಸಂಹಿತೆ ಕಲಂ 120-ಬಿ ಮತ್ತು 125, 38, 39 ಮತ್ತು 40 ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಕುರಿತು ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಂದಿತರಲ್ಲಿ ಅಬ್ದುಲ್ ರಶೀದ್ ಮುಖ್ಯ ಆರೋಪಿಯಾಗಿದ್ದು ಕೇರಳದಲ್ಲಿ ಯುವರನ್ನು ಐಸಿಸ್ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸುತ್ತಿದ್ದ. ಅಲ್ಲದೆ, ಕುಟುಂಬಸ್ಥರಿಂದ ದೂರಾಗಿದ್ದ ಈತ ಕಾಸರಗೋಡಿನಲ್ಲಿದ್ದುಕೊಂಡೇ ಇಸಿಸ್ ಗೆ ಸೇರ್ಪಡೆಗೊಳ್ಳಲು ಯತ್ನ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ರಶೀದ್ ಉಗ್ರ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಕಾಸರಗೋಡಿನಲ್ಲಿ ತರಗತಿಗಳನ್ನುನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
loading...
Post a Comment