loading...
ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತಕ್ಕೆ ಹಾಸನದ ಯೋಧ ಹುತಾತ್ಮರಾಗಿದ್ದಾರೆ. ಜಮ್ಮುಕಾಶ್ಮೀರದ ಗುರೆಜ್ ಸೆಕ್ಟರ್ನಲ್ಲಿ ಗುರುವಾರ ಹಿಮಕುಸಿತ ಸಂಭವಿಸಿದ್ದು. ಹಿಮದ ಅಡಿಯಲ್ಲಿ ಸಿಲುಕಿ ಯೋಧ ಸಂದೀಪ್ ಶೆಟ್ಟಿ ಹುತಾತ್ಮರಾಗಿದ್ದಾರೆ.
ಹಾಸನದ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿಯ ವೀರ ಯೋಧ ಸಂದೀಪ್ ಶೆಟ್ಟಿ (24) ಸೇರಿ ಭಾರತೀಯ ಸೇನೆಯ 14 ಯೋಧರು ಹಿಮಕುಸಿತದಿಂದ ಹುತಾತ್ಮರಾಗಿದ್ದಾರೆ. ದುರ್ದೈವ ಎಂದರೆ ಯೋಧ ಸಂದೀಪ್ ಶೆಟ್ಟಿ ಅವರ ಮದುವೆ ಇದೇ ಫೆ.22ರಂದು ನಡೆಯಬೇಕಿತ್ತು. ಈಗ ಯೋಧ ಸಂದೀಪ್ ಶೆಟ್ಟಿ ಅವರ ಮರಣದಿಂದಾಗಿ ಇಡೀ ಗ್ರಾಮ ಶೋಕದಲ್ಲಿ ಮಡುಗಟ್ಟಿದೆ.
ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಹಿಮಪಾತದ ಮುನ್ನೆಚ್ಚರಿಕೆ ನೀಡಲಾಗಿತ್ತು. ಭಾರೀ ಹಿಮಪಾತದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಮುಚ್ಚಿಹೋಗಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಡಬೇಕಾದ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿಕನ್ನಡಿಗ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸೇರಿದಂತೆ 19 ಮದ್ರಾಸ್ ರೆಜಿಮೆಂಟ್‌ಗೆ ಸೇರಿದ 10 ಯೋಧರು ಮೃತಪಟ್ಟಿದ್ದರು. ಹನುಮಂತಪ್ಪ ಕೊಪ್ಪದ್ ಎಂಟು ದಿನಗಳ ಕಾಲ ಹಿಮದಡಿಯಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ಹೊರತೆಗೆಯುವಾಗ ಜೀವಂತವಾಗಿದ್ದರೂ ನಂತರ ಮೃತಪಟ್ಟಿದ್ದರು.
loading...
Post a Comment