Veerakesari 11:51
ಕೆಲವರಿಗೆ ಇದೊಂದು ಸಮಸ್ಯೆ. ಸಮಸ್ಯೆ ಎನ್ನುವುದಕ್ಕಿಂತ ಕಿರಿ ಕಿರಿ. ಅದುವೇ ಬಾಯಿ ಹುಣ್ಣು. ತಿನ್ನಲೂ ಆಗದೇ ಮಾತನಾಡಲೂ ಆಗದೇ ಸಣ್ಣ ಹುಣ್ಣು ವಿಪರೀತ ನೋವು ಕೊಡುತ್ತದೆ. ಇದನ್ನು ಪರಿಹರಿಸಲು ಕೆಲವು ಮನೆ ಔಷಧಗಳಿವೆ. ಅವು ಯಾವುವೆಂದು ನೋಡೋಣ.   

ಬಾಯಿ ಹುಣ್ಣಿಗೆ ಪ್ರಮುಖ ಕಾರಣ, ಉಷ್ಣ, ಒತ್ತಡ, ಆಹಾರದ ಅಲರ್ಜಿ,  ಔಷಧಿಗಳ ಅಲರ್ಜಿ ಮುಂತಾದವು. ಇದಕ್ಕೆ ಕೆಲವರು ಬಿ ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯ. ಅದರ ಹೊರತಾಗಿ ನಾವು ಮನೆಯಲ್ಲೇ ಕೆಲವು ಸಿಂಪಲ್ ಮದ್ದು ಮಾಡಬಹುದು.

ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಸೇವಿಸಬಹುದು. ಇಲ್ಲದಿದ್ದರೆ ತಣ್ಣಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಅದೂ ಅಲ್ಲದಿದ್ದರೆ ಕೊತ್ತಂಬರಿ ಕಾಳನ್ನು ನೆನೆ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಇದಲ್ಲದಿದ್ದರೆ, ಮೆಂತೆ ಕಾಳನ್ನು ರಾತ್ರಿ ಮಲಗುವ ಮೊದಲ ಬಾಯಿಯಲ್ಲಿ ಹಾಕಿ ಸ್ವಲ್ಪ ಹತ್ತು ಜಗಿದು ನುಂಗಬೇಕು. 

ಕುಚ್ಚಿಲು ಅಕ್ಕಿ ತೊಳೆದ ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಕೂಡಾ ಬಾಯಿ ಹುಣ್ಣಿಗೆ ಪರಿಹಾರ. ಸೀಬೆಕಾಯಿ ಗಿಡ ಮನೆಯ ಹಿತ್ತಲಲ್ಲಿದ್ದರೆ, ಅದರ ಚಿಗುರು ಎಲೆಯನ್ನು ಬಾಯಿಯಲ್ಲಿ ಹಾಕಿ ರಸ ನುಂಗಬಹುದು. ಇದೇ ರೀತಿ ಮಲಗುವ ಮೊದಲು ಬಾಯಿ ಹುಣ್ಣಿರುವ ಜಾಗಕ್ಕೆ ತುಪ್ಪ ಸವರಿ ಮಲಗಿದರೆ ಬೆಳಿಗ್ಗಿನ ಹೊತ್ತಿಗೆ ಬಾಯಿ ಹುಣ್ಣು ಮಂಗ ಮಾಯ. ತುಳಸಿ ಎಲೆಯನ್ನು ಜಗಿಯುವುದರಿಂದ ಬಾಯಿ ಹುಣ್ಣು ಮಾತ್ರವಲ್ಲ, ಶೀತಕ್ಕೆ ಕೂಡಾ ಪರಿಹಾರ ನೀಡುತ್ತದೆ.

Source - webdunia.com

Post a Comment

Powered by Blogger.