Veerakesari 21:01
loading...
​ಭಾರತದ ಸೇನಾ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಜನವರಿ 15ರಂದು ಆಚರಿಸಲಾಗುತ್ತದೆ. ಸೇನಾ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಎಲ್ಲಾ ಸೈನಿಕರು, ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗೆ ಶುಭಾಶಯ ಕೋರಿದ್ದಾರೆ.
''ಎಲ್ಲಾ ಸೈನಿಕರು, ಹಿರಿಯರು ಮತ್ತು ಅವರ ಕುಟುಂಬದವರಿಗೆ ಸೇನಾ ದಿನದ ಶುಭಾಶಯಗಳು. ಭಾರತೀಯ ಸೇನೆಯ ಧೈರ್ಯ ಮತ್ತು ಅತ್ಯಮೂಲ್ಯ ಸೇವೆಗಳಿಗೆ ಪ್ರಣಾಮಗಳು'' ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಯೋಧರ ಧೈರ್ಯ ಮತ್ತು ತ್ಯಾಗವನ್ನು ಕೊಂಡಾಡಿದ ಅವರು, ಭಾರತದ ಸ್ವಾಯತ್ತತೆಯನ್ನು ಸೇನೆ ಯಾವತ್ತಿಗೂ ಕಾಪಾಡಿಕೊಂಡು ಬಂದಿದೆ ಎಂದು ಹೇಳಿದ್ದಾರೆ.
'' ಭಾರತೀಯ ಸೇನೆ ಯಾವತ್ತಿಗೂ ಮುಂದಿನ ಸಾಲಿನಲ್ಲಿ ನಿಲ್ಲುತ್ತದೆ. ಅದು ದೇಶದ ಸಾರ್ವಭೌಮತ್ವವನ್ನು ಕಾಪಾಡುವ ವಿಷಯದಲ್ಲಾಗಿರಬಹುದು ಅಥವಾ ನೈಸರ್ಗಿಕ  ವಿಕೋಪದಂತಹ ಸಂದರ್ಭಗಳಲ್ಲಿ ನಾಗರಿಕರಿಗೆ ಸಹಾಯ ಮಾಡುವ ವಿಷಯದಲ್ಲಾಗಿರಬಹುದು ಸೇನೆ ಎಂದಿಗೂ ಸಹಾಯಕ್ಕೆ ಸಿದ್ದವಿರುತ್ತದೆ''ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆಯ ತ್ಯಾಗವನ್ನು ಸ್ಮರಿಸಿಕೊಂಡ ಪ್ರಧಾನಿ, ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ದೇಶ ಮತ್ತು ನಾಗರಿಕರ ರಕ್ಷಣೆಗೆ ಮುಂದಾಗುತ್ತಾರೆ. ಸೈನಿಕರ ತ್ಯಾಗ, ಬಲಿದಾನಗಳಿಂದ ದೇಶದ 125 ಕೋಟಿ ಜನತೆ ಶಾಂತಿ, ಸೌಹಾರ್ದದಿಂದ ಜೀವನ ನಡೆಸುತ್ತಾರೆ ಎಂದು 
1949ರಂದು ಜನವರಿ 15ರಂದು ಜನರಲ್ ಫೀಲ್ಡ್ ಮಾರ್ಷಲ್ ಕೊಡನಂದೇರಾ ಮಾದಪ್ಪ ಕಾರ್ಯಪ್ಪ ಅವರು ಸ್ವತಂತ್ರ್ಯ ಭಾರತದಲ್ಲಿ ಭಾರತೀಯ ಸೇನೆಯ ಮೊಟ್ಟಮೊದಲ ಕಮಾಂಡ್ ಇನ್ ಚೀಫ್ ಆಗಿ ಬಡ್ತಿ ಪಡೆದರು. ಅದುವರೆಗೆ ಬ್ರಿಟಿಷ್ ಆರ್ಮಿ ಜನರಲ್ ಆಗಿದ್ದ ರಾಯ್ ಬುಚೆರ್ ಅವರ ಸ್ಥಾನಕ್ಕೆ ಕಾರ್ಯಪ್ಪ ನಿಯುಕ್ತಿಗೊಂಡರು.
ಭಾರತೀಯ ಸೇನೆಯ ಸಮರ್ಪಣಾ ಮನೋಭಾವ ಹಾಗೂ ತ್ಯಾಗದ ಮನೋಭಾವದ ಬಗ್ಗೆ ಭಾರತೀಯ ಸೈನಿಕರಲ್ಲಿ ಸ್ಫೂರ್ತಿ ತುಂಬುವುದು ಇದರ ಉದ್ದೇಶ.
ಸೇನಾ ದಿನಾಚರಣೆಯನ್ನು ಪ್ರತಿ ವರ್ಷ ಸೇನಾ ಕೇಂದ್ರ ಕಚೇರಿಯಲ್ಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಆಚರಿಸಲಾಗುತ್ತದೆ. ಸೇನೆಯ ಪರೇಡ್ ಹಾಗೂ ಇತರ ಹಲವು ಮಿಲಿಟರಿ ಕವಾಯತುಗಳು ನಡೆಯುತ್ತವೆ.
loading...

Post a Comment

Powered by Blogger.