loading...
ಪ್ರತಿ ವರ್ಷ ಮಕರ ಸಂಕ್ರಮಣದ ಪುಣ್ಯದಿನದಂದು ಗವಿಗಂಗಾಧರೇಶ್ವರ ದೇವಾಲಯ ವಿಸ್ಮಯವೊಂದಕ್ಕೆ ಶಾಕ್ಷಿಯಾಗುತ್ತೆ . ಮಕರ ಸಂಕ್ರಮಣದ ದಿನ ಸಂಜೆಯ ಹೊತ್ತಿಗೆ ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗದ ಕಿಂಡಿಯ ಮೂಲಕ ಸೂರ್ಯರಶ್ಮಿ ಒಳಪ್ರವೇಶಿಸಿ ನಂದಿಯ ಕೊಂಬಿನ ಮೂಲಕ ಶಿವಲಿಂಗವನ್ನು ಸ್ಪರ್ಶಿಸುವುದು ವಿಶೇಷವಾಗಿದೆ. ಈ ಕೌತುಕವನ್ನು ಕಣ್ಣುತುಂಬಿಕೊಳ್ಳಲು ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಾರೆ.
ಶನಿವಾರ ಮಕರ ಸಂಕ್ರಮಣದ ಪ್ರಯುಕ್ತ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ್ದಾನೆ. ಈ ವಿಸ್ಮಯಕ್ಕೆ ಸಾಕ್ಷಿಯಾಗಲು ಸಾವಿರಾರು ಭಕ್ತಾದಿಗಳು ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಿದ್ದರು.
ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವ ಭಾಸ್ಕರ ಶಿವನಿಗೆ ನಮಿಸಿ ಮುಂದೆ ಸಾಗುತ್ತಾನೆ ಅನ್ನೋ ಪ್ರತೀತಿ ಇರೋ ಈ ಸಮಯದಲ್ಲಿ ವಿಸ್ಮಯಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಗವಿ ಗಂಗಾಧರ ದೇವಾಲಯದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಒಳಪ್ರವೇಶಿಸಿ ನಂದಿಯ ಕೊಂಬಿನ ಮೂಲಕ ಶಿವನ ಪಾದಗಳನ್ನು ಸ್ಪರ್ಶಿಸುತ್ತೆ. ಮಕರ ಸಂಕ್ರಾತಿಯಂದೇ ಈ ವಿಸ್ಮಯ ನಡೆಯುತ್ತೆ ಎನ್ನುವುದು ವಿಶೇಷ.

ಭಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ದೇಗುಲದ ಬಳಿ ಬೃಹತ್ ಎಲ್‍ಇಡಿ ಅಳವಡಿಸಿ ಈ ಕೌತುಕದ ಕ್ಷಣದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಗವಿಗಂಗಾಧರ ದೇಗುಲಕ್ಕೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಫೋಟೋ ಗ್ಯಾಲರಿ :
loading...
Post a Comment