ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲವೆಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆ ಕೂಡ ಒಳ್ಳೆಯದಾಗುತ್ತಾ ಹೋಗುತ್ತದೆ. ಅದೇ ಪಾಪಕರ್ಮಗಳನ್ನು ಮಾಡಿದರೆ ಅದು ಮುಂದಿನ ಪೀಳಿಗೆಯನ್ನು ಕಾಡುತ್ತಾ ಇರುತ್ತದೆ.
ಕೆಲವೊಂದು ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರೂ ನಮ್ಮ ಏಳಿಗೆಯೇ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಹಿಂದಿನವರು ಮಾಡಿರುವಂತಹ ಪಾಪಕರ್ಮಗಳು. ವ್ಯಾಪಾರ ಹಾಗೂ ವಿವಾಹದ ವೇಳೆ ನಮ್ಮ ಹಿರಿಯರು ಮಾಡಿದಂತಹ ಒಳ್ಳೆಯ ಹಾಗೂ ಪಾಪ ಕರ್ಮಗಳು ಬೆಳಕಿಗೆ ಬರುತ್ತದೆ. ಮದುವೆಗಳು ವಿಳಂಬವಾಗುವುದು ಕೂಡ ನಮ್ಮ ಹಿರಿಯುರು ಮಾಡಿರುವಂತಹ ಪಾಪಕರ್ಮಗಳಿಂದಲೇ ಎಂದು ಹೇಳಲಾಗುತ್ತದೆ. ಕೆಲವರಿಗೆ ಎಷ್ಟು ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಇರುವುದರಿಂದ ಮದುವೆ ವಿಳಂಬವಾಗಿರುತ್ತದೆ. ಇದಕ್ಕೆ ಹಿಂದೂ ಧರ್ಮದ ಪ್ರಕಾರ ಪಿತೃ ದೋಷ ಅಥವಾ ಸರ್ಪದೋಷವೆಂದು ಕರೆಯಲಾಗುತ್ತದೆ. ಆದರೆ ಈ ದೋಷಗಳನ್ನು ನಿವಾರಣೆ ಮಾಡಲು ಆಧ್ಯಾತ್ಮಿಕ ಪರಿಹಾರಗಳು ಇವೆ. ಇದನ್ನು ಪಾಲಿಸಿಕೊಂಡು ಹೋದರೆ ಮುಂದೆ ಸಂಗಾತಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮದುವೆ ವಿಳಂಬಕ್ಕೆ ಆಧ್ಯಾತ್ಮಿಕ ಪರಿಹಾರ.
ಪಿತೃದೋಷ :
ಹಿಂದೂ ಧರ್ಮಿಯರಲ್ಲಿ ಮದುವೆ ವಿಳಂಬವಾಗುವುದಕ್ಕೆ ಪಿತೃದೋಷವು ಪ್ರಮುಖ ಕಾರಣವಾಗಿದೆ. ಇದು ಸಾವನ್ನಪ್ಪಿರುವ ಹಿರಿಯರು ನೀಡುತ್ತಿರುವಂತಹ ದೋಷವಲ್ಲ, ಬದಲಿಗೆ ಹಿರಿಯರು ಮಾಡಿರುವಂತಹ ಕೆಲವೊಂದು ಪಾಪಗಳಿಂದ ಅವರ ಮುಂದಿನ ಪೀಳಿಗೆಗೆ ಹೀಗೆ ಆಗುತ್ತಾ ಇರುತ್ತದೆ. ಪಿತೃದೋಷವನ್ನು ನಿವಾರಣೆ ಮಾಡಲು ನೀವು ಒಳ್ಳೆಯ ಕರ್ಮವನ್ನು ಮಾಡಬೇಕು.
ಪರಿಹಾರ :
- ಬಡವರಿಗೆ ಅಥವಾ ನಿರ್ಗತಿಕರಿಗೆ ಬಟ್ಟೆ, ಹಣ ಮತ್ತು ಆಹಾರ ದಾನ ಮಾಡಬೇಕು. ಶನಿವಾರದಂದು ಅನ್ನದ ಉಂಡೆಯನ್ನು ಮಾಡಿಕೊಂಡು ಅದನ್ನು ಗೋವು, ಕಾಗೆ ಮತ್ತು ಮೀನುಗಳಿಗೆ ನೀಡಬೇಕು. ಪಿತೃದೋಷವನ್ನು ನಿವಾರಣೆ ಮಾಡುವ ಮತ್ತೊಂದು ವಿಧಾನವೆಂದರೆ ಶಿವನಿಗೆ ಅಭಿಷೇಕ ಮಾಡಬೇಕು.
- ಹಾಲು, ಮೊಸರು, ಎಳೆನೀರು, ಹೂ, ಜೇನುತುಪ್ಪ, ಕಬ್ಬಿನ ಹಾಲು ಇತ್ಯಾದಿಯಿಂದ ಶಿವನ ಲಿಂಗಕ್ಕೆ ಅಭಿಷೇಕ ಮಾಡಬೇಕು. ಇದನ್ನು ನೇರವಾಗಿ ನೀವೇ ಮಾಡಬಹುದು ಅಥವಾ ಅರ್ಚಕರಲ್ಲಿ ಮಾಡಲು ಹೇಳಿ. ಸೋಮವಾರ ಅಥವಾ ಶನಿವಾರದಂದು ಈ ಕಾರ್ಯಗಳನ್ನು ಮಾಡಬೇಕು. ಪಿತೃ ದೋಷ ಅಥವಾ ಶಿಕ್ಷೆಯನ್ನು ನಿವಾರಣೆ ಮಾಡಲು ಶನಿದೇವರನ್ನು ಪೂಜೆ ಮಾಡಿದರೆ ತುಂಬಾ ಒಳ್ಳೆಯದು.
- ಶನಿದೇವರನ್ನು ಒಲಿಸಿಕೊಳ್ಳಲು ಹನುಮಂತನ ಪ್ರಾರ್ಥನೆ ಮಾಡಿ ಅಥವಾ ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು ಪಠಿಸಿ.
ಸರ್ಪ ದೋಷ :
ಹಿಂದೂ ಧರ್ಮಿಯರಲ್ಲಿ ಮದುವೆ ವಿಳಂಬವಾಗಲು ಮತ್ತೊಂದು ಕಾರಣವೆಂದರೆ ಅದು ಸರ್ಪದೋಷ. ನಾಗದೇವರ ಶಾಪದಿಂದಾಗಿ ಮದುವೆ ವಿಳಂಬವಾಗಲು ಕಾರಣವಾಗಿದೆ. ಸರ್ಪಕ್ಕೆ ಯಾವತ್ತಾದರೂ ಗಾಯ ಮಾಡಿರುವುದರಿಂದ ಅಥವಾ ಸರ್ಪವನ್ನು ಕೊಂದಿರುವುದರಿಂದ ಈ ದೋಷವು ಕಾಣಿಸಿಕೊಳ್ಳುವುದು. ಸತ್ತ ಅಥವಾ ಗಾಯಗೊಂಡ ಸರ್ಪವು ಶಾಪ ನೀಡುವುದರಿಂದ ಸರ್ಪದೋಷ ಕಾಡುವುದು.
ಸರ್ಪದೋಷದಿಂದಾಗಿ ಜೀವನದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ವ್ಯಾಪಾರ ಅಥವಾ ಮದುವೆಯ ವೇಳೆ ಸರ್ಪದೋಷವು ಅಡ್ಡಿಯನ್ನು ಉಂಟು ಮಾಡುತ್ತದೆ. ಜೀವನದಲ್ಲಿ ಒಳ್ಳೆಯ ಕಾರ್ಯಗಳಿಗೆ ಇದು ಅಡ್ಡಿ ಮಾಡುವುದು. ಸರ್ಪದೋಷವು ಎಷ್ಟು ಶಕ್ತಿಶಾಲಿಯೆಂದರೆ ಅದು ಮುಂದಿನ ಜನ್ಮದಲ್ಲಿಯೂ ಕಾಡುವುದು ಎಂದು ಪುರಾಣಗಳು ಹೇಳುತ್ತವೆ.
ಪರಿಹಾರ :
- ಸುಬ್ರಹ್ಮಣ್ಯ(ಕಾರ್ತಿಕೇಯ ಅಥವಾ ಮುರುಗನ್ ಎಂದು ಕರೆಯಲಾಗುತ್ತದೆ) ದೇವರನ್ನು ಪೂಜಿಸಬೇಕು. ಸುಬ್ರಹ್ಮಣ್ಯ ದೇವರನ್ನು ಸರ್ಪದೋಷ ನಿವಾರಕನೆಂದು ನಂಬಲಾಗಿದೆ. ನಾಗದೇವರ ಅಧಿಪತಿಯಾಗಿರುವ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಪೂಜಿಸಿಕೊಂಡು ಹೋದರೆ ಸರ್ಪದೋಷ ನಿವಾರಣೆಯಾಗುವುದು ಖಚಿತ.
- ಹಾವುಗಳಿಗೆ ಹಾಲುಣಿಸಬಹುದು. ಇಲ್ಲವೆಂದಾದರೆ ದೇವಾಲಯಗಳಿಗೆ ಹೋಗಿ ಶಿವಲಿಂಗವನ್ನು ಸುತ್ತಿಕೊಂಡಿರುವ ಹಾಲುಗಳಿಗೆ ಹಾಲಿನ ಅಭಿಷೇಕ ಮಾಡಬಹುದು. ಶಿವ ಹಾಗೂ ಶನಿ ದೇವರನ್ನು ಪೂಜಿಸಿದರೂ ಸರ್ಪದೋಷ ನಿವಾರಣೆ ಸಾಧ್ಯ.
ಇದನ್ನು ಹೊರತುಪಡಿಸಿ ಈ ಮಂತ್ರವನ್ನು ಜಪಿಸಿದರೆ ಸರ್ಪದೋಷ ನಿವಾರಣೆಯಾಗುವುದು :
- ಕಾತ್ಯಾಯನಿ ಮಹಾಮಾಯಾಯೆ ಮಹಾ ಯೋಗಿನ್ಯದೀಶ್ವರೆ ನಂದಗೋಪಾಸ್ತು ದೇವಿ ಪತಿಮೇಯ ಕುರು ತೇಯ ನಮಃ ಈ ಮಂತ್ರವನ್ನು ಮದುವೆ ವಿಳಂಬವಾಗಿರುವವರು ಜಪಿಸಬೇಕು.
- ಪ್ರತೀದಿನ ನಿಮ್ಮ ಇಷ್ಟದೇವರ ಮುಂದೆ 27ರಿಂದ 54 ಸಲ ಜಪಿಸಬೇಕು. ಹೀಗೆ ಮಾಡಿದರೆ ಸರ್ಪದೋಷವು ನಿವಾರಣೆಯಾಗಿ ಸಂಬಂಧವು ಕೂಡಿ ಬರುವುದು.
Post a Comment