loading...
ವಿವಾದಿತ ಧರ್ಮ ಪ್ರಚಾರಕ, ಶಂಕಿತ ಉಗ್ರ ಝಾಕಿರ್ ನಾಯ್ಕ್ ಹಾಗೂ ಆತನ ಸಹವರ್ತಿಗಳಿಗೆ ಸಂಬಂಧಿಸಿದ ಸಂಸ್ಥೆಗಳು ಮುಂಬೈ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿದ್ದಾರೆ ಎನ್ನಲಾದ ₹100 ಕೋಟಿಗೂ ಅಧಿಕ ಹಣದ ಬಗ್ಗೆ ರಾಷ್ಟ್ರೀಯ ತನಿಖಾದಳ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.
ಯುವಕರಿಗೆ ಭಯೋತ್ಪಾನೆಗೆ ಉತ್ತೇಜಿಸುತ್ತಿದ್ದ ಆರೋಪದ ಮೇಲೆ ಝಾಕಿರ್ ನಾಯಕ್ ವಿರುದ್ಧ ಭಯೋತ್ಪಾದನೆ ತಡೆ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಎನ್‌ಐಎ ತನಿಖೆ ನಡೆಸುತ್ತಿದೆ. ದೇಶದ ವಿವಿಧ ಬ್ಯಾಂಕುಗಳಲ್ಲಿ ಝಾಕಿರ್ ನಾಯಕ್ ಹಾಗೂ ಆತನ ಸಹಚರರು ಹೊಂದಿರುವ 78 ಖಾತೆಗಳನ್ನೂ ಎನ್ಐಎ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ.ಪರಿಶೀಲನೆ ನಂತರ ಝಾಕಿರ್ ನಾಯಕ್ ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ.
ತನ್ನ ಮಾಲೀಕತ್ವದ ಪೀಸ್ ಟಿವಿ ಎಂಬ ಚಾನಲ್ ಹಾಗೂ ಇತರ ಅಂತರಾಷ್ಟ್ರೀಯ ಮಾಧ್ಯಮಗಳ ಮೂಲಕ ಝಾಕಿರ್ ನಾಯಕ್ ಕೋಮುವಾದ ಹಾಗೂ ಭಯೋತ್ಪಾದನ ಪ್ರಚೋದಕ ಭಾಷಣಗಳ ಮೂಲಕ ಜನರನ್ನು ಉಗ್ರವಾದಕ್ಕೆ ಸೆಳೆಯುವ ಯತ್ನಗಳು ನಡೆದಿದೆ ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿದ್ದವು.
ಝಾಕಿರ್ ನಾಯಕ್ ಒಡೆತನದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಎಂಬ ಜಿಹಾದಿ ಬೆಂಬಲಿತ ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ನಿಶೇಧಿಸಲಾಗಿತ್ತು.
ಇದೇ ಕಾರಣಕ್ಕೋ ಏನೋ ಪಾಕಿಸ್ತಾನ ಮೂಲದ ಲೇಖಕ ತರೆಕ್ ಫತಾಹ್ ಅಂದು " ಝಾಕೀರ್ ನಾಯಕ್ ಮುಖ ಹೋಲುವ ಕುರಿಯನ್ನು ಕೂಡ ಖರೀದಿಸಬೇಡಿ" ಅಂದಿದ್ದು
loading...
Post a Comment