Veerakesari 23:43
loading...
​ಜಾಲತಾಣಗಳಲ್ಲಿ ನೆನ್ನೆಯ ದಿನ  ಬೆಳಗ್ಗಿನಿಂದ ಸುಳ್ಯ ಬಜರಂಗದಳದ ಮುಖಂಡ ಸಂತೋಷ್ ಶೆಟ್ಟಿ ಎಂಬಾತ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ, ಆತನನ್ನು ಸ್ಥಳೀಯರು ಹಿಡಿದು ಧರ್ಮಧೇಟು ನೀಡಿದ್ದಾರೆ  ಎನ್ನುವ ವಿಡಿಯೋ ವೈರಲ್ ಆಗಿತ್ತು  
ನಿಜಾವಾಗಿಯೂ ಆತ ಯಾರೆಂಬುದು ಪ್ರಶ್ನೆಯಾಗಿತ್ತು. ಅದರ ಬಗ್ಗೆ ನಮ್ಮ ಯುವಕರು ಸ್ಥಳೀಯ ಮುಖಂಡರುಗಳೊಂದಿಗೆ ವಿಚಾರಿಸಿದಾಗ ಗೊತ್ತಾಯಿತು ಆತ ಬಜರಂಗದಳ ಕಾರ್ಯಕರ್ತನಲ್ಲ ಎಂಬುದು 
ನಿನ್ನೆಯ ಘಟನೆಯ ಸಂಪೂರ್ಣ ವಿವರ :
ನಿನ್ನೆ ಸುಳ್ಯದಲ್ಲಿ ಸ್ಥಳಿಯರು ಯುವಕನೋರ್ವನನ್ನು ಹಿಡಿದು ಆತನ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ಪೋಲಿಸ್ ಠಾಣೆಯಲ್ಲಿ ವಿಚಾರಿಸಿದಾಗ ಆತ ಬಜರಂಗದಳದ ಕಾರ್ಯಕರ್ತನೂ ಅಲ್ಲ ಹಾಗೂ ಆತ ಯಾವ ಯುವತಿಯರಿಗೂ ಕಿರುಕುಳ ಕೂಡಾ ನೀಡಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೆಲ  ಮಾಹಿತಿ ನೀಡಿದ ಬೆಳ್ಳಾರೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಂತೋಷ್ ಕೆಲ ದಿನಗಳಿಂದ ತನ್ನ ಹೆಂಡತಿ  ಹಾಗೂ ಎರಡು ವರ್ಷದ ಮಗುವನ್ನು ಬಿಟ್ಟು ಮನೆಯಿಂದ ಹೊರನಡೆದಿದ್ದ. ಪಾನ ಮತ್ತನಾಗಿ ಹಲವಾರು ದಿನಗಳಿಂದ ಮನೆಗೆ ಹಿಂತಿರುಗದೆ ತನ್ನ ಸ್ನೇಹಿತರ ಮನೆಗಳಲ್ಲಿ ವಾಸವಾಗಿದ್ದ.
ನೆನ್ನೆ  ಬೆಳಗ್ಗೆ ಸುಳ್ಯದ ಮೆಡಿಕಲ್ ಲ್ಯಾಬ್ ಗೆ ರಕ್ತ ಪರೀಕ್ಷೆಗಾಗಿ ಬಂದವನು  ಅಲ್ಲಿಂದ ಊಟಕ್ಕೆ ಹೋಗುವ ಸಂದರ್ಭದಲ್ಲಿ ತನ್ನ ದೂರದ ಸಂಬಂಧಿಯಾದ ಗಿರೀಶ್ ರೈಯನ್ನು ನೋಡಿ ಸಂತೋಷ್ ಓಡಲಾರಂಭಿಸಿದ. ಆ ಸಂದರ್ಭದಲ್ಲಿ ಸ್ಥಳೀಯರು ವಾಸ್ತವತೆ ತಿಳಿಯುವ ಗೋಜಿಗೆ ಹೋಗದೆ ಈತನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಈ ಸಂದರ್ಭ ಪ್ರತ್ಯಕ್ಷದರ್ಶಿಗಳು ಈತ ಮಹಿಳೆಯರಿಗೆ ಕಿರುಕುಳ ನೀಡಿರುವ ಹಿನ್ನಲೆಯಲ್ಲಿ ಧಳಿಸಿರುವುದಾಗಿ ತಿಳಿಸಿದ್ದಾರೆ . ಆದರೆ, ಪೊಲೀಸರು ಸ್ಥಳಕ್ಕಾಗಮಿಸಿ ಸಂತೋಷ್ ನನ್ನು ಠಾಣೆಗೆ ಕರೆದುಕೊಂಡು ಹೋದಾಗ ಸತ್ಯಾಸತ್ಯತೆಯ ಅರಿವಾಗಿದೆ. ಇದಲ್ಲದೆ ಸಂತೋಷ್ ನ ಸಂಬಂಧಿಕ ಗಿರೀಶ್ ರೈ ಸರಿಯಾದ ಮಾಹಿತಿ ಪೊಲೀಸರಿಗೆ ನೀಡಿ ಆತನನ್ನು ಕರೆದುಕೊಂಡು ಹೋಗಿದ್ದಾರೆ.


ಹಿಂದೂಗಳನ್ನು ಈ ರೀತಿಯಾಗಿ ಸಿಕ್ಕಿಸಿ ಹಾಕಿ ಅವರುಗಳ ತೇಜೊವದೆ ಮಾಡುತ್ತಿರುವುದು ಇದು ಮೊದಲೆನ್ನಲ್ಲ. ಹಿಂದೂ ಸಮುದಾಯದ ಕೆಲ ಹಿರಿಯ ತಲೆಗಳ ಸತ್ಯ ಪರಿಶೀಲಿಸದೆ ಹಲ್ಲೆ ನಡೆಸಿರುವುದು ವಿಪರ್ಯಾಸ ಇನ್ನು ಮುಂದೆಯಾದರೂ ಸತ್ಯ ತಿಳಿಯದೆ ಇಂತಹ ಅವಾಂತರವನ್ನು ಮಾಡಿ ನಿಮ್ಮ ವಯಸ್ಸಿಗೆ ದಕ್ಕೆ ತಂದುಕೊಳ್ಳಬೇಡಿ.ಮಾಧ್ಯಮಗಳು ವ್ಯಾಟ್ಸಪ್ ಸುದ್ದಿಗಳನ್ನು ನಿಜವೆಂದು ಭಾವಿಸಿ ಪ್ರಕಟಿಸುವ ಮೊದಲು ಸ್ವಲ್ಪ ಘಟನೆಯ ಬಗ್ಗೆ ಮಾಹಿತಿ ಕಲೆಹಾಕುವುದು ಉತ್ತಮ.
#ಸುಳ್ಯ ನಿವಾಸಿ
loading...

Post a Comment

Powered by Blogger.