loading...
ಇಲ್ಲದ ಚರಿತ್ರೆಯನ್ನು ಸೃಷ್ಟಿಸಿ ಭಾರತದ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ರಜಪೂತ ಸಮುದಾಯದ ಕಾರ್ಯಕರ್ತರು ಬಿಸಿಬಿಸಿ ಕಜ್ಜಾಯ ನೀಡಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರದಲ್ಲಿ ಭಾರತೀಯ ಚರಿತ್ರೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ರಜಪೂತ ಸಮುದಾಯದ ಕಾರ್ನಿಸೇನಾ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಜಯಗಢ ಕೋಟೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಾರ್ಯಕರ್ತರು ಗಲಾಟೆ ಮಾಡಿ, ಬನ್ಸಾಲಿ ಅವರ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ್ದಾರೆ.
ಚಿತ್ರದ ಬಗ್ಗೆ ರಜಪೂತ ಸಮುದಾಯದಲ್ಲಿ ಮೊದಲೇ ಅಪಸ್ವರ ಎದ್ದಿತ್ತು. ಚರಿತ್ರೆ ತಿರುಚದಂತೆ ಬನ್ಸಾಲಿಗೆ ಮೊದಲೇ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದರೂ ಬನ್ಸಾಲಿ ಕಾಲ್ಪನಿಕ ದೃಷ್ಯದ ಚಿತ್ರೀಕರಣದಲ್ಲಿ ರಜಪೂತ ರಾಣಿ ಪದ್ಮಾವತಿ ಹಾಗೂ ಜಿಹಾದಿ ಇಸ್ಲಾಮಿಕ್ ಆಕ್ರಮಣಕಾರ ಖಿಲ್ಜಿ ಜೊತೆ ಪ್ರೇಮಪ್ರಸಂಗದ ಚಿತ್ರೀಕರಣದಲ್ಲಿ ತೊಡಗಿತ್ತು. ಇದರ ಬಗ್ಗೆ ಮಾಹಿತಿ ತಿಳಿದ ರಜಪೂತ ಸಮುದಾಯದ ಕಾರ್ನಿಸೇನಾ ಸಂಘಟನೆಯ ಕಾರ್ಯಕರ್ತರು ಸಿನಿಮಾ ಸೆಟ್ ಅನ್ನೇ ಧ್ವಂಸ ಮಾಡಿದ್ದಾರೆ ಜೊತೆಗೆ ನಿರ್ದೇಶಕ ಬನ್ಸಾಲಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಹಿಂದೆಯೂ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ನಿರ್ದೇಶಕ ಬನ್ಸಾಲಿ ಚರಿತ್ರೆಯನ್ನು ತಪ್ಪಾಗಿ ತೋರಿಸಿದ್ದ.
loading...
Post a Comment