Veerakesari 22:21
ನಮ್ಮ ಹಿಂದೂ ಧರ್ಮದಲ್ಲಿ ಆಚರಣೆ ಮತ್ತು ಸಂಪ್ರದಾಯಗಳು ಅತಿ ಮಹತ್ವದ್ದು ಎಂದೆನಿಸಿದ್ದು, ಅದು ವೇಷಭೂಷಣಗಳು, ಅನುಸರಿಸುವ ರೀತಿ ರಿವಾಜುಗಳು ಸಂಪ್ರದಾಯಗಳು ತಮ್ಮದೇ ಆದ ವಿಶೇಷತೆ ಮತ್ತು ಮಹತ್ವಗಳನ್ನು ಪಡೆದುಕೊಂಡಿದೆ. ಇನ್ನು ಹಬ್ಬಗಳ ವಿಷಯಕ್ಕೆ ಬಂದಾಗ ಅವುಗಳನ್ನು ಆಚರಿಸುವ ಪದ್ಧತಿ ಕೂಡ ಪ್ರತ್ಯೇಕವಾಗಿರುತ್ತದೆ ಮತ್ತು ಒಂದೊಂದು ಐತಿಹಾಸಿಕ ರಹಸ್ಯಗಳನ್ನು ಇವುಗಳು ಒಳಗೊಂಡಿರುತ್ತವೆ.
ವೈಷ್ಣವರಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ವೈಕುಂಠ ಏಕಾದಶಿಯನ್ನು ಇವರುಗಳು ವಿಜೃಂಭಣೆಯಿಂದ ಆಚರಿಸುತ್ತಾರೆ. ವಿಷ್ಣು ಭಕ್ತರು ಎಂದೆನಿಸಿರುವ ವೈಷ್ಣವರು ಏಕಾದಶಿಯನ್ನು ಶುಕ್ಲ ಪಕ್ಷದ ಧನುರ್ ಮಾಸದಂದು ಆಚರಿಸುತ್ತಾರೆ ಎಂಬುದು ಹಿಂದೂ ಕ್ಯಾಲೆಂಡರ್‌ನಿಂದ ತಿಳಿದು ಬಂದಿದೆ.
ಸಾಮಾನ್ಯವಾಗಿ ಈ ಹಬ್ಬವು ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಹಿಂದೂಗಳು ಉಪವಾಸವನ್ನು ಕೈಗೊಳ್ಳುತ್ತಾರೆ ಮತ್ತು ವಿಷ್ಣುವನ್ನು ಆರಾಧಿಸುತ್ತಾರೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಉಪವಾಸವನ್ನು ಕೈಗೊಳ್ಳುವವರು ತಿಂಗಳಿನಲ್ಲಿ ಬರುವ 23 ಏಕಾದಶಿ ಉಪವಾಸವನ್ನು ಕೈಗೊಂಡಂತೆ ಎಂದಾಗಿದೆ. ಇಂದಿಲ್ಲಿ ಈ ದಿನದ ಮಹತ್ವವನ್ನು ನಾವು ತಿಳಿದುಕೊಳ್ಳಲಿದ್ದು ಏಕಾದಶಿ ಉಪವಾಸದ ವಿಶೇಷತೆಯನ್ನು ಅರಿತುಕೊಳ್ಳೋಣ.
ಮುಕ್ಕೋಟಿ ಏಕಾದಶಿ :
ವೈಕುಂಠ ಏಕಾದಶಿಯನ್ನು ಈ ಹೆಸರಿನಲ್ಲಿ ಕೂಡ ಕರೆಯುತ್ತಾರೆ. ಈ ದಿನದಂದು ವಿಷ್ಣುವಿನ ಆರಾಧನೆಯನ್ನು ಮಾಡುವುದು ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎಂದಾಗಿದೆ. ಈ ಚಕ್ರದಿಂದ ಆತ್ಮವು ಬಿಡುಗಡೆ ಹೊಂದಿ, ವಿಷ್ಣುವಿನ ಪಾದದಲ್ಲಿ ಸಮಾಧಾನವನ್ನು ಹೊಂದುತ್ತದೆ ಎಂದಾಗಿದೆ. ಆದ್ದರಿಂದ ಈ ಪವಿತ್ರ ದಿನದಂದು ವಿಷ್ಣು ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ.
ವೈಕುಂಠ ಏಕಾದಶಿಯ ಕಥೆ :
ಈ ದಿನದ ಮಹತ್ವವವು ಒಂದು ಕಥೆಯನ್ನು ಹೊಂದಿದ್ದು ಅದು ರೋಚಕವಾಗಿದೆ. ಒಮ್ಮೆ ಅಸುರ ಮೂರನ ಕಾಟವನ್ನು ತಾಳಲಾರದೆ ದೇವತೆಗಳು ವಿಷ್ಣುವನ್ನು ಸಂಧಿಸುತ್ತಾರೆ. ಆದರೆ ಮೂರನನ್ನು ವಧಿಸಲು ವಿಷ್ಣುವಿಗೆ ವಿಶೇಷ ಆಯುಧ ಬೇಕಾಗಿರುತ್ತದೆ. ಆದ್ದರಿಂದಲೇ ಅವರನ್ನು ಬದ್ರಿಕಾಶ್ರಮ ಎಂದು ಕರೆಯುತ್ತಾರೆ.
ಒಮ್ಮೆ ವಿಷ್ಣುವು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾಗ ರಾಕ್ಷಸ ಮೂರನು ಅವರನ್ನು ವಧಿಸಲು ಪ್ರಯತ್ನಿಸುತ್ತಾನೆ. ವಿಷ್ಣುವಿನ ದೇಹದಿಂದ ಸ್ತ್ರೀ ಶಕ್ತಿಯು ಉದ್ಭವಗೊಂಡು ಮೂರನನ್ನು ವಧಿಸುತ್ತದೆ. ವಿಷ್ಣುವು ಆಕೆಗೆ ಏಕಾದಶಿ ಎಂಬ ಹೆಸರನ್ನು ನೀಡುತ್ತಾರೆ ಮತ್ತು ವರವನ್ನು ನೀಡಿ ಆಕೆಯನ್ನು ಅನುಗ್ರಹಿಸುತ್ತಾರೆ. ಯಾರೆಲ್ಲಾ ಈ ದಿನದಂದು ಉಪವಾಸ ಕೈಗೊಳ್ಳುತ್ತಾರೋ ಅವರಿಗೆ ವೈಕುಂಠಕ್ಕೆ ಹೋಗುವ ಸಿದ್ಧಿಯನ್ನು ಸ್ವಯಂ ವಿಷ್ಣುವೇ ಘೋಷಿಸುತ್ತಾರೆ.
ವೈಕುಂಠದ ಮಹತ್ವ :
ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠವು ವಿಷ್ಣು ಮತ್ತು ಲಕ್ಷ್ಮೀ ದೇವಿಯ ವಾಸಸ್ಥಾನವಾಗಿದೆ. ಈ ಪದಕ್ಕೆ ಯಾವುದೇ ಯಥಾವತ್ತಾದ ಅರ್ಥವಿಲ್ಲ. ನಿಮ್ಮಲ್ಲಿರುವ ಎಲ್ಲಾ ಅಹಂಕಾರ ಮತ್ತು ಮದವನ್ನು ನೀವು ತೊರೆದು ವಿಷ್ಣುವನ್ನೇ ನಿಮ್ಮ ಮನದಲ್ಲಿ ನೀವು ಸ್ಥಾಪಿಸಿದಾಗ ಮರಣದ ನಂತರ ವೈಕುಂಠಕ್ಕೆ ನೀವು ಹೋಗುತ್ತೀರಿ ಎಂದಾಗಿದೆ. ವೈಕುಂಠ ಏಕಾದಶಿಯಂದು ವ್ರತವನ್ನು ಕೈಗೊಂಡಾಗ ವಿಷ್ಣುವಿನ ಪಾದತಳದಲ್ಲಿ ಮುಕ್ತಿಯನ್ನು ಹೊಂದಲು ಭಕ್ತರು ಕಾಯುತ್ತಾರೆ.
ವೈಕುಂಠದ ದ್ವಾರ ತೆರೆಯುವುದು :
ನಂಬಿಕೆಗಳ ಪ್ರಕಾರ, ಭಗವದ್ಗೀತೆಯನ್ನು ಓದುವವರು ಮತ್ತು ಅದನ್ನು ಪಾಲಿಸುವವರಿಗೆ ವೈಕುಂಠದ ದ್ವಾರ ತೆರೆಯುತ್ತದೆ. ಧ್ಯಾನ, ಭಕ್ತಿ ಮತ್ತು ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ವೈಕುಂಠದ ಬಾಗಿಲನ್ನು ತೆರೆಯುವುದು ಸುಲಭವಾಗಿದೆ. ವೈಕುಂಠ ಏಕಾದಶಿಯನ್ನು ನೀವು ಪೂರ್ಣ ನಿಷ್ಟೆಯಿಂದ ಪಾಲಿಸಿದಲ್ಲಿ, ವೈಕುಂಠದ ಬಾಗಿಲು ನಿಮಗೆ ತೆರೆಯುತ್ತದೆ ಎಂಬುದಾಗಿ ಹಿಂದೂ ನಂಬಿಕೆಗಳಲ್ಲಿದೆ.
ಋಣಾತ್ಮಕ ಆಲೋಚನೆಗಳಿಂದ ಮುಕ್ತಿ :
ವೈಕುಂಠ ಏಕಾದಶಿಯಂದು, ಅಸುರರು ಮತ್ತು ದೇವತೆಗಳಿಂದ ಸಮುದ್ರ ಮಂಥನ ನಡೆಯುತ್ತದೆ.  ದೇವತೆಗಳು ಧನಾತ್ಮಕ ಶಕ್ತಿಯ ಪ್ರತೀಕವಾಗಿದ್ದರೆ ಅಸುರರು ಋಣಾತ್ಮಕ ಶಕ್ತಿಯ ದ್ಯೋತಕವಾಗಿದ್ದಾರೆ. ಹಾಲಾಹಲವು ಮಂಥನದಿಂದ ಹೊರಬರುತ್ತದೆ. ಇದು ಮಾನವರಲ್ಲಿರುವ ಋಣಾತ್ಮಕ ಅಂಶಗಳ ಪ್ರತೀಕವಾಗಿದೆ. 
ಈ ಎಲ್ಲಾ ಋಣಾತ್ಮಕ ಅಂಶಗಳು ಹೊರಹೋದಾಗ ವಿಷ್ಣುವನ್ನು ನಾವುಗಳು ಸಂಧಿಸುತ್ತೇವೆ ಮತ್ತು ವೈಕುಂಠವನ್ನು ಸೇರುತ್ತೇವೆ. ವೈಕುಂಠ ಏಕಾದಶಿಯ ವಿಶೇಷ ಮಹತ್ವ ಇದಾಗಿದೆ. ನೀವು ಈ ಉಪವಾಸವನ್ನು ನಂಬಿಕೆ ಮತ್ತು ಭಕ್ತಿಭಾವಗಳಿಂದ ಮಾಡಿದಲ್ಲಿ, ವಿಷ್ಣುವಿನ ಕೃಪೆ ನಿಮ್ಮ ಮೇಲಿರುತ್ತದೆ ಅಂತೆಯೇ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೀವು ಪಡೆದುಕೊಳ್ಳುತ್ತೀರಿ.

Kannada Bold Sky
loading...

Post a Comment

Powered by Blogger.