loading...
ಪಾಕಿಸ್ತಾನದಲ್ಲಿನ ಪ್ರಧಾನ ನಗರಗಳಲ್ಲಿ ನಾಲ್ಕು ನಗರಗಳನ್ನು ಶ್ರೀ ರಾಮನ ಮಕ್ಕಳಾದ ಲವ, ಕುಶ ಹಾಗೂ ಭರತನ ಮಕ್ಕಳು ಕಟ್ಟಿಸಿದ್ದಾರೆ. ಆಗ ಈ ನಗರಗಳ ಹೆಸರುಗಳು ಸಹ ಕಟ್ಟಿಸಿದವರ ಹೆಸರಿನಲ್ಲೇ ಇರುತ್ತಿದ್ದವಂತೆ, ಕಾಲಕ್ರಮೇಣ… ಅವುಗಳ ಹೆಸರುಗಳನ್ನು ಬದಲಾವಣೆ ಮಾಡಿದ್ದಾರೆ. ಹೀಗೆ ಬದಲಾಯಿಸಿದ್ದರೂ ಅವುಗಳ ಹೆಸರು ಒರಿಜಿನಲ್ ಹೆಸರುಗಳಿಗೆ ಹತ್ತಿರವಾಗಿರುವುದು ವಿಶೇಷ. ಆ ನಗರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ…
ಕಸೂರ್(Kasur): ಇದರ ನಿಜವಾದ ಹೆಸರು ಕುಶಪುರ. ಇದನ್ನು ಶ್ರೀ ರಾಮನ ಹಿರಿಯ ಮಗ ಕುಶ ಕಟ್ಟಿಸಿದ್ದಾನೆ. ಆತನ ಹೆಸರಿನಲ್ಲೇ ಇದಕ್ಕೆ ಕುಶಪುರ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಕುಶಪುರ… ಕಸೂರ್ ಅಗಿ ಬದಲಾಯಿತು.

ಲಾಹೋರ್: ಇದರ ಮೊದಲ ಹೆಸರು ಲವಪುರ… ಇದನ್ನು ಶ್ರೀ ರಾಮನ ಕಿರಿಯ ಪುತ್ರನಾದ ಲವ ಕಟ್ಟಿಸಿದ್ದ ಆತನ ಹೆಸರಿನಿಂದಲ್ಲೇ ಇದನ್ನು ಲವಪುರ ಎಂದು ಕರೆಯುತ್ತಿದ್ದರು. ನಂತರದಲ್ಲಿ ಲವಪುರ ಲಾಹೋರ್ ಆಗಿ ರೂಪಾಂತರ ಪಡೆಯಿತು.

ತಕ್ಷಶಿಲೆ: ಇದನ್ನು ಶ್ರೀ ರಾಮನ ತಮ್ಮನಾದ ಭರತನ ಹಿರಿಯ ಮಗ ತಕ್ಷನು ನಿರ್ಮಿಸಿದ್ದ.

ಪೇಶಾವರ: ಇದರ ಮುಂಚಿನ ಹೆಸರು ಪುಷ್ಕಲಾವತಿ/ಪುರುಷಪುರ. ಶ್ರೀ ರಾಮನ ತಮ್ಮನಾದ ಭರತನ ಎರಡನೇ ಪುಷ್ಕರನು ನಿರ್ಮಿಸಿದ. ಕ್ರಮೇಣ ಪುರುಷಪುರ ಪೇಶಾವರ ಆಗಿದೆ.

Kannada AP2TG
loading...
Post a Comment