Veerakesari 05:24
loading...
ಇವರು ತಮ್ಮ ಮಕ್ಕಳಿಗೆ ಕಲಿಸುತ್ತಿರುವುದಾದರೂ ಏನು.? ಕಾಶ್ಮೀರದ ಐದು ವರ್ಷದ ಪುಟ್ಟ ಬಾಲಕನಿಗೆ ಕಾಶ್ಮೀರ ಎಂದರೆ ಏನು, ಸ್ವಾತಂತ್ರ್ಯ ಎಂದರೆ ಏನು, ಜಿಹಾದ್ ಎಂದರೆ ಏನು , ಬಾಂಬ್ ಎಂದರೆ ಏನು, ಬಾಂಬ್ ಬ್ಲಾಸ್ಟ್ ಮಾಡೋದು ಹೇಗೆ, ಯಾರು ಕಾಶ್ಮೀರಿಗಳ ಶತ್ರು, ಅವರನ್ನು ನಾಶಮಾಡೋದು ಹೇಗೆ ಎಂಬ ಶಿಕ್ಷಣ ಸಿಗುತ್ತಿದೆ ಎಂದರೆ ಕಾಶ್ಮೀರವನ್ನು ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತೆ.
ಉಗ್ರರು ಹುಟ್ಟೋದು ಎಲ್ಲಿ, ಮತ್ತು ಉಗ್ರತನ ಹುಟ್ಟೋದು ಹೇಗೆ ಈ ಪುಟ್ಟ ಮಗುವಿನ ಮಾತುಗಳನ್ನು ಕೇಳಿದರೆ ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತೆ. ಈ ಪುಟ್ಟ ಕಂದಮ್ಮಗಳಲ್ಲಿ ದೇಶಕ್ಕಾಗಿ ಹೋರಾಡುವ ದೇಶಪ್ರೇಮ ಬೆಳೆಸುವ ಬದಲು ದೇಶದ ವಿರುದ್ಧ ಹೋರಾಡುವ ವಿಷ ಜಂತುಗಳಾಗಿ ಪರಿವರ್ತಿಸಲಾಗುತ್ತಿದೆ.
ಇದರಲ್ಲಿ ಆ ಮಕ್ಕಳದ್ದು ತಪ್ಪೇನು ಇಲ್ಲ, ಇನ್ನೂ ಆಟವಾಡೋ ವಯಸ್ಸಲ್ಲಿ ಜಿಹಾದ್ ಎಂಬ ಪಿಡುಗನ್ನು ತಲೆಯಲ್ಲಿ ತುಂಬಿ,  ಧರ್ಮ ದ್ರೋಹಿ ಅಷ್ಟೇ ಅಲ್ಲ ದೇಶದ್ರೋಹಿಯಾಗಿ ಅಮಾಯಕರ ಬಲಿಪಡೆಯುವ ಯಂತ್ರಗಳಾಗಿ ಸಿದ್ದಪಡಿಸುತ್ತಿರುವ ಧಾರ್ಮಿಕ ಶಿಕ್ಷಣ ಕೇಂದ್ರಗಳು ಇದಕ್ಕೆಲ್ಲ ಕಾರಣ.
ಈ ಸಣ್ಣ ಮಗುವಿಗೆ ಇದನ್ನೆಲ್ಲ ಕಲಿಸಿದ್ದು ಯಾರು.? ಈ ಪುಟ್ಟ ಮಗುವನ್ನು ಇಸ್ಲಾಮಿಕ್ ತೀವ್ರಗಾಮಿಯನ್ನಾಗಿ ಪರಿವರ್ತಿಸಿದ್ದು ಯಾರು.? ಈತನ ಭವಿಷ್ಯದ ಜೊತೆ ಆಟವಾಡುತ್ತಿರುವವರು ಯಾರು.? ಈ ಪುಟ್ಟ ಮಗುವಿನ ತಾಯಿಯೂ ಇದಕ್ಕೆ ಕಾರಣ. ಇರುವ ಸ್ವಾತಂತ್ರ್ಯ ಅನುಭವಿಸೋದು ಬಿಟ್ಟು ಇಲ್ಲದೆ ಇರುವುದಕ್ಕೆ ಆಸೆ ಪಟ್ಟು ತನ್ನ ಸ್ವಂತ ಕರುಳಬಳ್ಳಿಯನ್ನೇ ಜಿಹಾದ್ ಗೆ ಬಲಿಕೊಟ್ಟು ತಿಂದು ತೇಗುವ ಈ ಮಗುವಿನ ತಾಯಿಯೂ ಇದಕ್ಕೆ ಕಾರಣ.
ಇನ್ನೂ ಪೆನ್ಸಿಲ್ ಹಿಡಿಯಲು ಬಾರದ ಮಗುವಿಗೆ ಬಾಂಬ್ ಹೇಗೆ ಕಟ್ಟುವುದು, ಎಲ್ಲಿಗೆ ಕಟ್ಟುವುದು ಎಂಬ ಬಗ್ಗೆ ಶಿಕ್ಷಣ ಸಿಕ್ಕಿದೆ ಎಂದರೆ ಇವರಿಗೆ ಈ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಸಿಗುತ್ತಿರುವ ಶಿಕ್ಷಣವಾದರೂ ಎಂತದ್ದು.? ಮುಂದೆ ಈ ಮಗು ದೊಡ್ಡವನಾಗಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಡಪಾಯಿಗಳ ಜೀವ ತೆಗೆಯದೆ ಇರುತ್ತಾನೆಯೆ.
ಈ ಹೆತ್ತವರು ತಮ್ಮ ಮಕ್ಕಳಿಗೆ ಜಿಹಾದ್ ಕಲಿಸಿ ತಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿರೋದು ಅಷ್ಟೇ ಅಲ್ಲ ಅದರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.
#veerakesari
loading...

Post a Comment

Powered by Blogger.