veerakesari.in
ಈಕೆಯ ಹೆಸರು ದೀಕ್ಷಾ ವರ್ಮಾ, ದೇಶ ಪ್ರೇಮಿ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತೆ. ಕೆಲ ದಿನಗಳ ಹಿಂದೆ ದೆಹಲಿಯ ರಾಮ್ ಜಾಸ್ ಕಾಲೇಜಿನಲ್ಲಿ ನಡೆಯಲಿದ್ದ 'ದೇಶದ್ರೋಹಿ ಉಮರ್ ಖಾಲೀದ್' ಅತಿಥಿಯಾಗಿದ್ದ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ದೇಶಪ್ರೇಮಿ ಎಬಿವಿಪಿ ಕಾರ್ಯಕರ್ತರ ಗುಂಪಿನಲ್ಲಿ ಈಕೆಯೂ ಇದ್ದಳು.
ಎಬಿವಿಪಿ ವಿದ್ಯಾರ್ಥಿಗಳು ದೇಶದ್ರೋಹಿಗಳಿಗೆ ಕಾಲೇಜು ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಅಲ್ಲಿ ಗುಂಪುಕಟ್ಟಿಕೊಂಡು ಬಂದಿದ್ದ ಕಮ್ಯುನಿಸ್ಟ್ ಬೆಂಬಲಿತ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೇ ಎಬಿವಿಪಿ ವಿದ್ಯಾರ್ಥಿಗಳ ಗುಂಪಿನಲ್ಲಿದ್ದ ಯುವತಿಯರ ಬಟ್ಟೆಗಳನ್ನು ಹರಿದಿದ್ದಷ್ಟೆ ಅಲ್ಲದೆ ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ.
ಇದನ್ನು ಧೈರ್ಯದಿಂದ ಎದುರಿಸಿದ ಎಬಿವಿಪಿ ವಿದ್ಯಾರ್ಥಿನಿಯರು ಕಾಮುಕ ಕಮ್ಯುನಿಸ್ಟ್ ಕಾರ್ಯಕರ್ತರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆಗುವವರೆಗೆ ಸುಮ್ಮನಿದ್ದ ಮಾಧ್ಯಮಗಳು ಯಾವಾಗ ವಿದ್ಯಾರ್ಥಿನಿಯರು ತಿರುಗಿಬಿದ್ದರೋ ತಕ್ಷಣ ತಮ್ಮ ಕ್ಯಾಮಾರ ಆನ್ ಮಾಡಿ ಫೋಟೋಗಳನ್ನು ಕ್ಲಿಕ್ಕಿಸಿ ಮುಖಪುಟಗಳಲ್ಲಿ " ಎಬಿವಿಪಿ ವಿದ್ಯಾರ್ಥಿನಿಯರ ಗೂಂಡಾಗಿರಿ" ಎಂದು ಪ್ರಕಟಿಸಿಬಿಟ್ಟಿದ್ದಾರೆ.
ಆದರೆ ದಿಟ್ಟ ಹೆಣ್ಣು ದೀಕ್ಷಾ ವರ್ಮಾ ಇಂತಹ ವರದಿಗೆಲ್ಲ ಹೆದರಿಲ್ಲ. ತಾನು ಮಾಡಿದ ಕೆಲಸಕ್ಕೆ ಆಕೆಗೆ ಹಮ್ಮೆಯಿದೆ.
“ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುವ ಕಾಮುಕರಿಗೆ ತಿರುಗೇಟು ನೀಡಿದರೆ ಅವರನ್ನು ‘ಗೂಂಡಾಗಳು’ ಎಂದು ಕರೆಯುವುದಾದರೆ, ಗೂಂಡಾ ಆಗಿಯೇ ಇರುತ್ತೇನೆ ”, ದೀಕ್ಷಾ ವರ್ಮ.
ಇಂತಹಾ ದಿಟ್ಟ ಹೆಣ್ಣು ನಿಜವಾಗಿಯೂ ಭಾರತೀಯ ಹೆಣ್ಣು ಮಕ್ಕಳಿಗೆ ಮಾದರಿ. ಮಹಿಳೆಯರ ಅತ್ಯಾಚಾರ ಕೊಲೆ ಬಗ್ಗೆ ದೊಡ್ಡದಾಗಿ ಮಾತನಾಡುವ ಕಮ್ಯುನಿಸ್ಟ್ ನಾಯಕರು ತಮ್ಮ ಯುವ ನಾಯಕರು ಯುವತಿಯರ ಜೊತೆ ಕಾಮುಕತನ ಪ್ರದರ್ಶಿಸುವಾಗ ಬಾಯಿಗೆ ಚಪ್ಪಲಿ ತುರುಕಿಕೊಂಡಿದ್ದರು ಅನ್ನಿಸುತ್ತೆ. ತಾವು ಆಳುವ ಏಕೈಕ ರಾಜ್ಯವೇ ಅಪರಾಧ ಪ್ರಕರಣಗಳಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ, ಇನ್ನು ಇಂತಹವರ ಕೈಗೆ ದೇಶ ಆಳಲು ಕೊಟ್ಟರೆ ಸಿರಿಯಾ, ಇರಾಕ್ ಪರಿಸ್ಥಿತಿ ಭಾರತದಲ್ಲಿಯೂ ನೆಲೆಯಾಗಬಹುದು. ದೇಶವನ್ನು ತುಂಡರಿಸುತ್ತೇವೆ , ದೇಶವನ್ನು ಸರ್ವನಾಶ ಮಾಡುತ್ತೇವೆ ಎನ್ನುವವರನ್ನು ನಾಯಕರನ್ನಾಗಿ ಮಾಡುವ ಕಮ್ಯುನಿಸ್ಟರು ಊರೂರು ತೆರಳಿ ಸೌಹಾರ್ದತೆಯ ಮಾತುಗಳನ್ನಾಡುತ್ತಾರೆ. ಇವರ ಸೌಹರ್ದತೆಯ ಮಾತುಗಳಲ್ಲಿ ಸೌಹಾರ್ದತೆಯನ್ನು ಬಿಂಬಿಸುವ ಒಂದು ಶಬ್ದವು ಇರಲ್ಲ, ಅದರಲ್ಲಿರುವುದು ಬರಿ ಹಿಂದೂ ವಿರೋಧಿ, ಹಿಂದೂ ಸಂಘಟನೆ ವಿರೋಧಿ ನಿಲುವುಗಳು. ಇವರು ನಮ್ಮ ಸಂಘಪರಿವಾರದ ಕಾರ್ಯಕರ್ತರ ಚಪ್ಪಲಿ ಧೂಳಿಗೂ ಸಮನಲ್ಲ.
ಈ ದೇಶದಲ್ಲಿ ಹಿಂದುತ್ವ ಇರೋವರೆಗೆ ಈ ದೇಶವನ್ನು ನಾಶಮಾಡಲು ಯಾವ ದೇಶದ್ರೋಹಿಗಳು ಸಾಧ್ಯವಿಲ್ಲ. ಸಾವಿರಾರು ವರ್ಷಗಳ ಇತಿಹಾಸವಿರುವ, ಸನಾತನ ಧರ್ಮ ನೆಲೆಯೂರಿದ ಈ ಪುಣ್ಯ ಮಣ್ಣು ಎಂದಿಗೂ ಇಂತಹ ದುಷ್ಟ ಶಕ್ತಿಗಳಿಗೆ ನೆಲೆಯಾಗಲ್ಲ. ದುಷ್ಟರ ನಾಶ ಖಂಡಿತ ಖಂಡಿತ.
#ಜೈRSS #ಜೈಹಿಂದುತ್ವ
loading...
Post a Comment