veerakesari.in
'ಎಬಿವಿಪಿಯಿಂದ ನಾನು ಭಯಗೊಂಡಿಲ್ಲ' ಎನ್ನುವ ಆಂದೋಲನದೊಂದಿಗೆ ಗುರ್ಮೆಹರ್ ಕೌರ್ ಇದೀಗ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ.ಅಂದ ಹಾಗೆ ಗುರ್ಮೆಹರ್ ಕೌರ್ ಭಾರತ ಮಾತೆಯ ರಕ್ಷಣೆಗಾಗಿ ಭಯೋತ್ಪಾದಕರೊಂದಿಗೆ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಮಂದೀಪ್ ಸಿಂಗ್ ಪುತ್ರಿ.
ಆಕೆ ಕೇವಲ 'ಎಬಿವಿಪಿ' ಸಂಘಟನೆಯನ್ನು ನಿಂದಿಸಿ ಸುಮ್ಮನಾಗಿದ್ದರೆ ಯಾರೂ ಆಕೆಯ ಗೋಜಿಗೆ ಹೋಗುತ್ತಿರಲಿಲ್ಲವೋ ಏನೋ ಆದರೆ ಆಕೆ ಹೇಳಿದ ಇನ್ನೊಂದು ಮಾತು ದೇಶಪ್ರೇಮಿಗಳಿಗೆ ನಿಜವಾಗಿಯೂ ನೋವನ್ನುಂಟು ಮಾಡಿದೆ. "ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿದಲ್ಲ, ಯುದ್ದ ಆತನನ್ನ ಬಲಿ ಪಡೆಯಿತು," ಎನ್ನುವ ಸಂದೇಶದೊಂದಿಗೆ ರಾತೋ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಗುರ್ಮೆಹರ್ ಕೌರ್ ಜನಪ್ರಿಯರಾಗಿದ್ದರು.
ಆಕೆಯ ಈ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಮನಸ್ಥಿತಿಯ ಕೆಲವರು ಬೆಂಬಲಿಸಿದರೆ, ದೇಶಪ್ರೇಮಿಗಳು ಸೈನಿಕರ ಮೇಲೆ ಗೌರವವಿರುವವರು ಆಕೆಯ ಮಾತನ್ನು ನಿಂದಿಸಿದ್ದಾರೆ ಅನೇಕರ ವಿಡಂಬನೆಗೂ ಆಕೆ ಗುರಿಯಾಗಿದ್ದಾಳೆ. ಎಲ್ಲಿವರೆಗೆ ಅಂದರೆ ಸ್ವತಃ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹವಾಗ್ ಕೂಡಾ "ನಾನು ಎರಡು ತ್ರಿ ಶತಕ ಹೊಡೆದಿಲ್ಲ, ನನ್ನ ಬ್ಯಾಟ್ ಹೊಡೆದಿದೆ," ಎಂದು ಚಟಾಕಿ ಹಾರಿಸಿದ್ದಾರೆ ಜೊತೆಗೆ ಕುಸ್ತಿ ಪಟು ಯೋಗೇಶ್ವರ್ ದತ್ತ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ಸದ್ಯ ಈ ತಮಾಷೆ, ವಿಡಂಬನೆಗಳನ್ನು ಪಕ್ಕಕ್ಕೆ ಎತ್ತಿಡೋಣ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇದುವರೆಗೆ ಮೂರು ಯುದ್ಧಗಳು ನಡೆದಿವೆ ಆದರೆ ಈ ಮೂರು ಯುದ್ದಗಳಲ್ಲಿಯೂ ಪಾಕಿಸ್ತಾನವೇ ಭಾರತದ ಮೇಲೆ ದಂಡೆತ್ತಿ ಬಂದಿರೋದೆ ಹೊರತು ಭಾರತ ಎಂದಿಗೂ ಪಾಕಿಸ್ತಾನವನ್ನು ಯುದ್ಧ ಮಾಡುವಂತೆ ಆಹ್ವಾನಿಸಿಲ್ಲ . ಭಾರತದ ಸೈನಿಕರು ದೇಶವಾಸಿಗಳ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ.
ಪಾಕಿಸ್ತಾನ ಇಂದಿಗೂ ಭಾರತದ ಮೇಲೆ ಪರೋಕ್ಷವಾಗಿ ಯುದ್ಧ ಸಾರಲು ಭಯೋತ್ಪಾದನಾ ಸಂಘಟನೆಗಳನ್ನು ಪೋಷಿಸುತ್ತಾ ಬಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅನೇಕ ಭಯೋತ್ಪಾದನ ಶಿಬಿರಗಳು ತೆರೆದಿವೆ.ಅದರಲ್ಲೂ ಲಷ್ಕರ್ ಇ ತಯ್ಯಬಾ, ಜೈಷ್ ಎ ಮೊಹಮ್ಮದ್ ಮೊದಲಾದ ಸಂಘಟನೆಗಳಿಗೆ ಭಾರತದಲ್ಲಿ ದಾಳಿಗಳನ್ನು ನಡೆಸಲು ಬೆಂಬಲದ ಜತೆ ಹಣವನ್ನೂ ಪಾಕಿಸ್ತಾನ ನೀಡುತ್ತಿದೆ.
ಭಾರತದಲ್ಲಿ ಸಿಮಿ, ಇಂಡಿಯನ್ ಮುಜಾಹಿದ್ದೀನ್ ನಂತಹ ಅನೇಕ ಉಗ್ರ ಸಂಘಟನೆಗಳ ಹುಟ್ಟಿಗೆ ಪಾಕಿಸ್ತಾನವೇ ಕಾರಣ. ಇದೇ ಗುರ್ಮೆಹರ್ ಕೌರ್ ಮಾತನಾಡುತ್ತಿರುವ ಕಾರ್ಗಿಲ್ ಯುದ್ಧವನ್ನೇ ನೋಡಿದರೂ ಭಾರತದ ಗಡಿ ರಕ್ಷಣೆ ಮಾಡಲು 530 ಭಾರತೀಯ ಸೈನಿಕರು ಇದರಲ್ಲಿ ಜೀವ ಕಳೆದುಕೊಳ್ಳಬೇಕಾಯಿತು.
ಕಾರ್ಗಿಲ್ ಕತೆ ಹೀಗಾದರೆ, 1998ರಿಂದ 2017ರ ವರಗೆ ಕಳೆದ 19 ವರ್ಷಗಳಲ್ಲಿ ಭಾರತದಲ್ಲಿ 47,234 ಉಗ್ರ ದಾಳಿಗಳು ನಡೆದಿವೆ. ಇದರಲ್ಲಿ 14,743 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರರ ವಿರುದ್ದದ ಹೋರಾಟದಲ್ಲಿ 6,276 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.
ಗುರ್ಮೆಹರ್ ಮತ್ತು ಆಕೆಯ ಬೆಂಬಲಿಗರು ಅರ್ಥ ಮಾಡಿಕೊಳ್ಳಬೇಕಿರುವುದು ಏನೆಂದರೆ ಭಾರತದ ಯಾವ ಸೈನಿಕರಿಗೂ ಯುದ್ಧ ಬೇಕಾಗಿಲ್ಲ. ಆದರೆ ಪಾಕಿಸ್ತಾನ ಪರೋಕ್ಷ ಯುದ್ಧ ಮತ್ತು ಯುದ್ಧವನ್ನು ತನ್ನ ಪಾಲಿಸಿಯಾಗಿ ಅಳವಡಿಸಿಕೊಂಡಿದೆ. ಭಾರತವನ್ನು ಹೇಗಾದರೂ ಮಾಡಿ ಮಟ್ಟಹಾಕುವುದು ಪಾಕಿಸ್ತಾನದ ಒನ್ ಲೈನ್ ಅಜೆಂಡಾ.
ಒಟ್ಟಾರೆ ವಿಷಯ ಏನೆಂದರೆ ಯುದ್ಧಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಭಾರತೀಯ ಸೈನಿಕರನ್ನು ಕೊಂದಿದೆ ಅಷ್ಟೆ. ಒಂದು ವೇಳೆ ಗಡಿಯಲ್ಲಿರುವ ಯೋಧರನ್ನು ವಾಪಾಸು ಕರೆಸಿಕೊಂಡರೆ ಈ ದೇಶ ಕೇವಲ ಒಂದೇ ದಿನದಲ್ಲಿ ಸರ್ವನಾಶವಾಗಿ ಹೋಗಲಿದೆ. ಜೊತೆಗೆ ಇನ್ನೊಂದು ನೋವಿನ ಸಂಗತಿಯೆಂದರೆ ಗುರ್ಮೆಹರ್ ತಂದೆ ಹುತಾತ್ಮರಾಗಿದ್ದು ಪಾಕಿಸ್ತಾನಿ ಸೈನಿಕರ ಗುಂಡಿಗೆ ಅಲ್ಲ ಪಾಕಿಸ್ತಾನಿ ಬೆಂಬಲಿತ ಜಿಹಾದಿ ಸಂಘಟನೆಗಳ ಗುಂಡಿಗೆ. ಆಕೆಯ ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದೂ ಅಲ್ಲ ಕಾರ್ಗಿಲ್ ಯುದ್ಧ ಮುಗಿದು ಸ್ವಲ್ಪ ಸಮಯದ ನಂತರ ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಬೆಂಬಲಿತ ಜಿಹಾದಿಗಳನ್ನು ತಡೆಯಲು ಹೋರಾಡುವ ಸಂದರ್ಭದಲ್ಲಿ ಭಾರತಮಾತೆಗೆ ತಮ್ಮ ಜೀವವನ್ನು ಅರ್ಪಣೆ ಮಾಡಿದ್ದರು. ಈಗ ಹೇಳಿ ಆಕೆಯ ತಂದೆ ಸಾವಿಗೆ ಯುದ್ಧ ಕಾರಣವೇ ಅಥವಾ ಪಾಕಿಸ್ತಾನವೇ...???
ಶೇರ್ ಮಾಡಿ
#ಜೈಜವಾನ್
loading...
Post a Comment