veerakesari.in
ದೇಶದ್ರೋಹಿ ವಿದ್ಯಾರ್ಥಿಗಳ ಬೆನ್ನಿಗೆ ನಿಂತು ತನ್ನ ಹುತಾತ್ಮ ತಂದೆಗೆ ಅಪಮಾನ ಮಾಡಿದ ಗುರ್ ಮೆಹರ್ ಕೌರ್ ಗೆ ಎಲ್ಲೆಡೆಯಿಂದ ಠೀಕೆಗಳ ಸುರಿಮಳೆಯೇ ಹರಿದು ಬರುತ್ತಿದೆ. ತನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ದ ಕೊಂದಿದ್ದು ಎಂದು ವಿವಾದಾಸ್ಪದ ಹೇಳಿಕೆಯನ್ನು ಟ್ವಿಟರ್ ನಲ್ಲಿ ಹರಿಯಬಿಟ್ಟಿದ್ದ ಗುರ್ ಮೆಹರ್ ಕೌರ್ ಗೆ ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ "ನಾನು ಎರಡು ದ್ವಿಶತಕ ಭಾರಿಸಿದ್ದಲ್ಲ, ನನ್ನ ಬ್ಯಾಟ್ ಬಾರಿಸಿದ್ದು" ಎಂದು ವಿಡಂಭನಾತ್ಮಕವಾಗಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದರು.
ಇದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಈಗ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ತ ದೇಶದ್ರೋಹಿಗಳ ಬೆನ್ನಿಗೆ ನಿಂತ ವಿದ್ಯಾರ್ಥಿನಿಯ ಪೋಸ್ಟ್ ಗೆ ವಿರೋಧ ವ್ಯಕ್ತಪಡಿಸಿ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ. ಹಿಟ್ಲರ್, ಒಸಾಮಾ ಬಿನ್ ಲಾಡೆನ್ ಹಾಗೂ ಸಲ್ಮಾನ್ ಅವರು ಹತ್ಯೆ ಮಾಡಿದ್ದ ಕೃಷ್ಣ ಮೃಗಗಳನ್ನು ಫೋಟೋಗಳನ್ನು ಹಾಕಿ ಒಂದೊಂದು ಪೋಟೋಗು ಒಂದೊಂದು ಸಾಲು ಅಡಿ ಬರಹಗಳನ್ನು ಬರೆದಿದ್ದಾರೆ.
ಒಂದು ಫೋಟೋದಲ್ಲಿ ಗುರ್ ಮೆಹರ್ ಅವರು ತಮ್ಮ ತಂದೆ ಸಾವಿಗೆ ಪಾಕಿಸ್ತಾನವಲ್ಲ, ಯುದ್ಧವೇ ಕಾರಣ ಎಂಬ ಫೋಟೋ ಇದೆ. ಮತ್ತೊಂದು ಭಾಗದಲ್ಲಿ ಹಿಟ್ಲರ್ ಇದ್ದು ಆ ಫೋಟೋದಲ್ಲಿ ನಾನು ಯಹೂದಿಗಳನ್ನು ಸಾಯಿಸಲಿಲ್ಲ, ವಿಷ ಅನಿಲ ಸಾಯಿಸಿತ್ತು. ಮೂರನೇ ಫೋಟೋದಲ್ಲಿ ಒಸಾಮಾ ಬಿನ್ ಲಾಡನ್ ಇದ್ದು, ನಾನು ಜನರನ್ನು ಸಾಯಿಸಲಿಲ್ಲ. ಬಾಂಬ್ ಗಳು ಸಾಯಿಸಿತ್ತು. ನಾಲ್ಕನೇ ಫೋಟೋದಲ್ಲಿ ಸಲ್ಮಾನ್ ಖಾನ್ ಅವರ ಹತ್ಯೆ ಮಾಡಿದ್ದ ಕೃಷ್ಣಮೃಗ ಇದ್ದು, ಸಲ್ಮಾನ್ ಬಾಯ್ ನನ್ನನ್ನು ಸಾಯಿಸಲಿಲ್ಲ, ಗನ್ ನಲ್ಲಿದ್ದ ಗುಂಡು ನನ್ನ ಹತ್ಯೆ ಮಾಡಿತ್ತು ಎಂದು ಬರೆಯಲಾಗಿದೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಹಾಕುವ ಮೂಲಕ ಗುರ್'ಮೆಹರ್ ಕೌರ್ ಅವರ ಪೋಸ್ಟ್ ಗೆ ಯೋಗೇಶ್ವರ್ ದತ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
loading...
Post a Comment