veerakesari.in
ರಾಮಜನ್ಮ ಭೂಮಿ ಅಯೋಧ್ಯೆಯ ಸಮೀಪ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರಸೇವಕರು ವಾಪಾಸಾಗುತ್ತಿದ್ದ ರೈಲಿಗೆ ಪಂಚಮಹಲ್ ಜಿಲ್ಲೆಯ ಗೋದ್ರಾ ಎಂಬ ನಗರದಲ್ಲಿ ಮಸಲ್ಮಾನ ಜಿಹಾದಿಗಳು ದಾಳಿ ಮಾಡಿ ಬೆಂಕಿ ಹಚ್ಚಿ 59ಕರಸೇವಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಘಟನೆ ನಡೆದಿದ್ದು 27-2-2002 ಮುಂಜಾನೆ 7.45ಗಂಟೆಗೆ, ಬಲಿಯಾಗಿದ್ದು 59 ರಾಮ ಭಕ್ತರು.
ಘಟನೆ ಸಂಪೂರ್ಣ ವಿವರ : http://bit.ly/2lpXDpR
ಅದು ಸಾಬರಮತಿ ಎಕ್ಸ್‌ಪ್ರೆಸ್ ರೈಲು. ಬಿಹಾರದ ದರ್ಭಾಂಗಾದಿಂದ ಗುಜರಾತಿನ ಅಹಮದಾಬಾದ್‌ಗೆ ರೈಲು ಬರುತ್ತಿತ್ತು. ದುರಂತ ನಡೆದದ್ದು ಪಂಚಮಹಲ್ ಜಿಲ್ಲೆಯ ಗೋದ್ರಾ ಎಂಬ ನಗರದಲ್ಲಿ. ಅದೇ ಕಾರಣದಿಂದ ಗೋದ್ರಾ ಹತ್ಯಾಕಾಂಡ ಎಂಬ ಹೆಸರು ಬಂದಿತ್ತು. ಪೂರ್ವಯೋಜಿತವಾಗಿಯೇ ಈ ಹತ್ಯೆಗೆ ಸಂಚು ರೂಪಿಸಲಾಗಿತ್ತು, ಇದರ ಪ್ರಾರಂಭಿಕ ಹಂತವಾಗಿ ಜಿಹಾದಿಗಳು ರೈಲ್ವೇ ಸ್ಟೇಷನ್ ಒಂದರಲ್ಲಿ ರೈಲನ್ನು ತಡೆದು ನೀವು ಮುಸಲ್ಮಾನ ಯುವತಿಯನ್ನು ಅಪಹರಿಸಿದ್ದೀರ ಎಂದು ಕರಸೇವಕರ ಜೊತೆ ವಾಗ್ವಾದ ನಡೆಸಿದ್ದರು. ನಂತರ ಅದು ಜಿಹಾದಿಗಳು ಮತ್ತು ಕರಸೇವಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿತ್ತು.
ಕೊಂಚ ಹೊತ್ತಿನ ನಂತರ ಎಲ್ಲವೂ ತಹಬದಿಗೆ ಬಂದು ರೈಲು ಹೊರಟಿತ್ತಷ್ಟೇ ಜಿಹಾದಿಗಳು ರೈಲಿಗೆ ಕಲ್ಲು ತೂರಲು ಪ್ರಾರಂಭಿಸಿದ್ದರು . ರೈಲಿನಲ್ಲಿ ಅಡಗಿದ್ದ ಕೆಲ ಮುಸಲ್ಮಾನ ಜಿಹಾದಿಗಳು ರೈಲಿನ ಚೈನ್ ಎಳೆದಿದ್ದರು. ಸುಮಾರು 500ರಷ್ಟಿದ್ದ ಮುಸ್ಲಿಮ್ ಜಿಹಾದಿಗಳ ಗುಂಪು ಗೋದ್ರಾ ಸಮೀಪದ 'ಸಿಗ್ನಲ್ ಫಾಡಿಯಾ' ಎಂಬಲ್ಲಿ ರೈಲಿಗೆ ದಾಳಿ ಮಾಡಿ, ಮಹಿಳೆಯರು ಮಕ್ಕಳಿದ್ದ ಎಸ್6 ಕೋಚ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಯೇ ಬಿಟ್ಟರು. ಮೊದಲೇ ಶೇಖರಿಸಿಟ್ಟಿದ್ದ ಸುಮಾರು 140-150 ಲೀಟರ್ ಪೆಟ್ರೋಲ್ ರೈಲಿನ ಬೋಗಿಯೊಳಗೆ ಸುರಿಯಲಾಗಿತ್ತು. ಬೋಗಿಯಲ್ಲಿದ್ದ 59 ಕರಸೇವಕರು ಜಿಹಾದಿಗಳ ಕ್ರೌರ್ಯಕ್ಕೆ ರೈಲಿನಲ್ಲೇ ಸುಟ್ಟು ಭಸ್ಮವಾಗಿ ಹೋದರು. 24 ಗಂಡಸರು 15 ಮಹಿಳೆಯರು ಹಾಗೂ 20 ಮಕ್ಕಳು ಸಜೀವ ದಹನಗೊಂಡರೆ, 250ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾದರು.
ಪ್ರಕರಣ ಸಂಬಂಧ ದಾಖಲಾಗಿದ್ದ ಮೊತ್ತ ಮೊದಲ ಪೊಲೀಸ್ ಎಫ್ಐಆರ್, ಇದು ಯಾವುದೇ ಗುಂಪಿನ ಪೂರ್ವನಿಯೋಜಿತ ಕೃತ್ಯವಲ್ಲ ಎಂದು ಹೇಳಿತ್ತು. ಆದರೆ ಇದನ್ನು ನಿರಾಕರಿಸಿದ್ದ ವಿಶೇಷ ತನಿಖಾ ದಳ (ಸಿಟ್), ಮುಸ್ಲಿಮರ ಗುಂಪೊಂದು ಪೂರ್ವನಿಯೋಜಿತವಾಗಿ ರೈಲಿನ ಬೋಗಿಗೆ ಬೆಂಕಿ ಹಚ್ಚಿತ್ತು ಎಂದು ಹೇಳಿತ್ತು. ಕರಸೇವಕರ ಹತ್ಯಾಕಾಂಡ ನಡೆಯುವ ಮುನ್ನಾ ದಿನವೇ 140 ಲೀಟರುಗಳಷ್ಟು ಪೆಟ್ರೋಲನ್ನು ಶೇಖರಿಸಿಡಲಾಗಿತ್ತು ಎಂದು ಸಿಟ್ ಘಂಟಾಘೋಷವಾಗಿ ಸಾರಿತ್ತು.
ಅಂದಿನ ರೈಲ್ವೇ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ ಜಿಹಾದಿ ಮುಸಲ್ಮಾನರನ್ನು ರಕ್ಷಿಸಲು ತುಂಬಾ ಪ್ರಯತ್ನ ಪಟ್ಟರು. ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗಿನ ರೈಲ್ವೆ ಸಚಿವಾಲಯವು ರಚನೆ ಮಾಡಿದ್ದ ಆಯೋಗ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡದ್ದು ಬಹುತೇಕ ಒಂದು ಆಕಸ್ಮಿಕ ಘಟನೆ ಎಂದು ಅದು (ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಆಯೋಗ) 2005ರಲ್ಲಿ ಹೇಳಿತ್ತು. ಆದರೆ ಈ ತನಿಖಾ ಆಯೋಗದ ರಚನೆಯೇ ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿತು. ಆದರೆ, ಗುಜರಾತ್ ಸರಕಾರ ರಚಿಸಿದ್ದ ಆಯೋಗವೊಂದು (ನಾನಾವತಿ ಆಯೋಗ) ಸಿಟ್ ವರದಿಯನ್ನೇ 2008ರಲ್ಲಿ ಎತ್ತಿ ಹಿಡಿಯಿತು. ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ್ದು ಒಂದು ಪೂರ್ವ ನಿಯೋಜಿತ ಪಿತೂರಿ ಎಂದು ಆಯೋಗವು ಒಪ್ಪಿಕೊಂಡಿತು.
ಅತ್ತ ಗುಜರಾತ್ ಹೈಕೋರ್ಟ್ 2009ರ ಫೆಬ್ರವರಿಯಲ್ಲಿ ಪೋಟಾ ಸಮಿತಿಯ ವರದಿ ಸರಿ ಇದೆ ಎಂದಿತು. ಗೋದ್ರಾ ರೈಲು ಘಟನೆ ಹಿಂದೆ ಪಿತೂರಿ ಇದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತು. ಆದರೆ ಅಂತಿಮವಾಗಿ ಸಾಬರಮತಿ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಘಟನೆ ವ್ಯವಸ್ಥಿತ ಪಿತೂರಿ ಎಂದು ಹೇಳಿದೆ. ಆರೋಪಿ ಜಿಹಾದಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇಂದಿಗೂ ಗೋದ್ರಾ ಹತ್ಯಾಕಾಂಡದ ನಂತರ ನಡೆದ ಗುಜರಾತ್ ಗಲಭೆಯ ಬಗ್ಗೆ ಚರ್ಚೆಗಳು ನಡೆಯುತ್ತೆ ಆದರೆ ಎಂದಾದರೂ ಗುಜರಾತ್ ಗಲಭೆಗೆ ಕಾರಣ ಏನು ಅಥವಾ ಜಿಹಾದಿಗಳ ಕ್ರೌರ್ಯಕ್ಕೆ ಬಲಿಯಾದ 59ಕರಸೇವಕರ ಬಗ್ಗೆ ಚರ್ಚೆ ಆಗೋದು ನೋಡಿದ್ದೀರ...???
ಮರಣದಂಡನೆಗೆ ಒಳಗಾದ 11 ಮಂದಿ:
- ಅಬ್ದುಲ್ ರಜಾಕ್ ಮೊಹಮ್ಮದ್ ಕುರ್ಕರ್ (44 ವರ್ಷ)
- ರಂಜಾನಿ ಬಿನ್ಯಾಮಿನ್ ಬೆಹ್ರಾ (28)
- ಹಸನ್ ಅಹ್ಮದ್ ಚರ್ಕಾ ಆಲಿಯಾಸ್ ಲಾಲೂ (23)
- ಜಬೀರ್ ಬಿನ್ಯಾಮಿನ್ ಬೆಹ್ರಾ (20)
- ಮೆಹಬೂಬ್ ಖಾಲಿದ್ ಚಂದಾ (31)
- ಸಲೀಂ ಆಲಿಯಾಸ್ ಸಲ್ಮಾನ್ ಯೂಸುಫ್ ಸತ್ತಾರ್ ಜರ್ದಾ (27)
- ಸಿರಾಜ್ ಮೊಹಮ್ಮದ್ ಅಬ್ದುಲ್ ಮೆದಾ ಆಲಿಯಾಸ್ ಬಾಲಾ (27)
- ಇರ್ಫಾನ್ ಸಿರಾಜ್ ಪಾಡೊ ಗಂಚಿ (19)
- ಇರ್ಫಾನ್ ಮೊಹಮ್ಮದ್ ಹನೀಫ್ ಅಬ್ದುಲ್ ಗನಿ ಪತಾಲಿಯಾ (22)
- ಮೆಹಬೂಬ್ ಅಹ್ಮದ್ ಯೂಸುಫ್ ಹಸನ್ ಆಲಿಯಾಸ್ ಲಾತಿಕೊ (27)
- ಬಿಲಾಲ್ ಇಸ್ಮಾಯಿಲ್ ಅಬ್ದುಲ್ ಮಜೀದ್ ಸುಜೇಲಾ ಆಲಿಯಾಸ್ ಬಿಲಾಲ್ ಹಾಜಿ (41)
ಜೀವಾವಧಿ ಶಿಕ್ಷೆಗೊಳಗಾದ 20 ಮಂದಿ :
- ಸುಲೇಮಾನ್ ಅಹ್ಮದ್ ಹುಸೇನ್ ಆಲಿಯಾ ಟೈಗರ್ (34)
- ಅಬ್ದುಲ್ ರೆಹಮಾನ್ ಅಬ್ದುಲ್ ಮಜೀದ್ ದಂತಿಯಾ ಆಲಿಯಾಸ್ ಕಂಕಟ್ಟೋ (48)
- ಖಾಸಿಂ ಅಬ್ದುಲ್ ಸತ್ತಾರ್ ಆಲಿಯಾಸ್ ಖಾಸಿಂ ಬಿರಿಯಾನಿ ಗಂಚಿ (22)
- ಅನ್ವರ್ ಮೊಹಮ್ಮದ್ ಮೆಹ್ದಾ ಆಲಿಯಾಸ್ ಲಾಲ್ ಶೇಖ್ (22)
- ಸಿದ್ಧಿಕ್ ಆಲಿಯಾಸ್ ಮಾತುಂಗಾ ಅಬ್ದುಲ್ಲಾಹ್ ಬದಮ್ (46)
- ಮೆಹಬೂಬ್ ಯಾಕೂಬ್ ಮಿತಾ ಆಲಿಯಾಸ್ ಪೊಪಾ (30)
- ಸೊಹೆಬ್ ಯೂಸುಫ್ ಅಹ್ಮದ್ ಕಲಂದರ್ (22)
- ಶೌಕತ್ ಆಲಿಯಾಸ್ ಬಾನೊ ಫಾರೂಕ್ ಅಬ್ದುಲ್ ಸತ್ತಾರ್ ಪತಾಲಿಯಾ (23)
- ಅಬ್ದುಲ್ ಸತ್ತಾರ್ ಇಬ್ರಾಹಿಂ ಗಡ್ಡಿ ಅಸ್ಲಾ (39)
- ಅಬ್ದುಲ್ ರವೂಫ್ ಅಬ್ದುಲ್ ಮಜೀದ್ ಇಸಾ (48)
- ಯೂನಸ್ ಅಬ್ದುಲ್ ಹಕ್ ಆಲಿಯಾಸ್ ಗಡಿಯಾಲಿ (24)
- ಇಬ್ರಾಹಿಂ ಅಬ್ದುಲ್ ರಜಾಕ್ ಅಬ್ದುಲ್ ಸತ್ತಾರ್ ಸಮೂಲ್ ಆಲಿಯಾಸ್ ಬಾನೊ (20)
- ಬಿಲಾಲ್ ಅಬ್ದುಲ್ಲಾಹ್ ಇಸ್ಮಾಯಿಲ್ ಬದಂ ಗಂಚಿ (34)
- ಹಾಜಿ ಭೂರಿಯಾ ಅಬ್ದುಲ್ ಸತ್ತಾರ್ ಇಬ್ರಾಹಿಂ ಮುಸಲ್ಮಾನ್ (36)
- ಇರ್ಫಾನ್ ಅಬ್ದುಲ್ ಮಜೀದ್ ಗಂಚಿ ಕಲಂದರ್ ಆಲಿಯಾಸ್ ಇರ್ಫಾನ್ ಬೊಪೊ (25)
- ಆಯುಧ್ ಅಬ್ದುಲ್ ಗನಿ ಇಸ್ಮಾಯಿಲ್ ಪತಾಲಿಯಾ (37)
- ಶೌಕತ್ ಅಬ್ದುಲ್ಲಾ ಮೌಲವಿ ಇಸ್ಮಾಯಿಲ್ ಬದಂ (40)
- ಮೊಹಮ್ಮದ್ ಹನೀಫ್ ಆಲಿಯಾಸ್ ಹನಿ ಅಬ್ದುಲ್ಲಾ ಬದಂ (42)
- ಶೌಕತ್ ಯೂಸುಫ್ ಇಸ್ಮಾಯಿಲ್ ಮೋಹನ್ ಆಲಿಯಾಸ್ ಬಿಬಿನೊ (28)
- ಸಿದ್ಧಿಕ್ ಮೊಹಮ್ಮದ್ ಮೋರಾ (35)
loading...
Post a Comment