Veerakesari 03:27
veerakesari.in
ಕೆಲ ದಿನಗಳ ಹಿಂದೆ ಕಾಮಗ್ರೆಸ್ ನಾಯಿಕ ದಿಗ್ವಿಜಯ್ ಸಿಂಗ್ ತನ್ನ ಟ್ವಿಟರ್ ಅಕೌಂಟ್ ನಲ್ಲಿ " ಸರಸ್ವತಿ ವಿದ್ಯಾಮಂದಿರ (ಆರ್.ಎಸ್.ಎಸ್ ಅಧೀನದಲ್ಲಿರುವ ಶಾಲೆ) ಹಾಗೂ ಮದರಸಗಳು ಎರಡೂ ಮಕ್ಕಳ ಮನಸ್ಸಿನಲ್ಲಿ ಉಗ್ರವಾದ ತುಂಬುತ್ತಿದೆ"  ಎಂಬ ಹೇಳಿಕೆ ನೀಡಿದ್ದ. 
ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು, ಇದರಲ್ಲಿ ಸರಸ್ವತಿ ವಿದ್ಯಾಮಂದಿರ ಉಗ್ರವಾದಿ ಮನಸ್ಥಿತಿ ತುಂಬುತ್ತೇ ಎಂಬ ಹೇಳಿಕೆಗೆ ಮುಸ್ಲಿಂ ಯುವತಿಯೊಬ್ಬಳು ದಿಗ್ವಿಜಯ್ ಸಿಂಗ್ ಗೆ ಮುಖಕ್ಕೆ ಹೊಡೆಯೋ ಹಾಗೆ ತಿರುಗೇಟು ನೀಡಿದ್ದಳು " ನನ್ನ ತಮ್ಮ ಆರ್.ಎಸ್.ಎಸ್ ನಡೆಸುವ ಸರಸ್ವತಿ ವಿದ್ಯಾಮಂದಿರದಲ್ಲೇ ಕಲಿತಿದ್ದು, ಇಂದು ಭಾರತೀಯ ವಾಯುಪಡೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಒಂದು ವೇಳೆ ಮದರಸದಲ್ಲಿ ಕಲಿತಿದ್ದರೆ ಭಯೋತ್ಪಾದಕ ಆಗುತ್ತಿದ್ದನೇನೋ" ಎಂದಿದ್ದಳು.
ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ ಕ್ಯೋರ ಎಂಬ ಬ್ಲಾಗ್ ಒಂದರಲ್ಲಿ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಸೂಕ್ತವಾಗಿ ಉತ್ತರ ನೀಡಬಲ್ಲ ಲೇಖನವೊಂದು ಸಿಕ್ಕಿತು. ಆ ಲೇಖನ ಬರೆದಿರುವುದು 'ವಾಕಾಸ್ ಅಬ್ದುಲ್ಲಾ' ಎನ್ನುವ ಮುಸ್ಲಿಂ ಯುವಕ, ಆತ ಇದೇ ಆರ್.ಎಸ್.ಎಸ್ ನ ಸರಸ್ವತಿ ವಿದ್ಯಾಮಂದಿರದಲ್ಲಿ ವಿದ್ಯಾಭ್ಯಾಸ ಮಾಡಿದ್ದ. ಆತ ಕ್ಯೋರ ಬ್ಲಾಗ್ ನಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಉತ್ತರವಾಗಿ ಸರಸ್ವತಿ ವಿದ್ಯಾಮಂದಿರದಲ್ಲಿ ತನ್ನ ಶಾಲಾ ದಿನಗಳ ಕುರಿತು ತುಂಬಾ ಸುಂದರವಾಗಿ ಬರೆದಿದ್ದಾನೆ. http://bit.ly/2lLOM4x
Quora Question “what are the things muslims can do in india but not in other countries”.
ಲೇಖನ : ನಾನು ವಾಕಾಸ್ ಅಬ್ದುಲ್ಲಾ. ನನ್ನ ವಿದ್ಯಾಭ್ಯಾಸ ಆರ್.ಎಸ್.ಎಸ್ ನಡೆಸುವ ಸರಸ್ವತಿ ವಿದ್ಯಾಮಂದಿರದಲ್ಲಿ ಆಯಿತು. ನನ್ನ ವಿದ್ಯಾರ್ಥಿ ಜೀವನದಲ್ಲಿ ಇಷ್ಟೊಂದು ಉತ್ತಮ ಬೇರೆ ಶಾಲೆಯನ್ನು ನಾನು ನೋಡಿಲ್ಲ.
ಇಡೀ ತರಗತಿಯಲ್ಲಿ ನಾನೊಬ್ಬನೇ ಮುಸ್ಲಿಂ ವಿದ್ಯಾರ್ಥಿಯಾಗಿದ್ದೆ. ಕೇವಲ ತರಗತಿಯಷ್ಟೇ ಅಲ್ಲ ತರಗತಿಯ ಎಲ್ಲಾ ನಾಲ್ಕು ವಿಭಾಗಗಳಲ್ಲಿಯೂ ನಾನೊಬ್ಬನೇ ಮುಸ್ಲಿಂ ವಿದ್ಯಾರ್ಥಿ. ರಾಮ ಸ್ತುತಿ, ಶಿವ ಸ್ತುತಿ, ಹನುಮಾನ್ ಚಾಲೀಸ, ಭೋಜನ ಮಂತ್ರ ಜೊತೆಗೆ ಇನ್ನೂ ಅನೇಕ ಹಿಂದೂ ಪ್ರಾರ್ಥನೆಗಳನ್ನು ಕಲಿತೆ. ಹಿಂದೂ ಹಬ್ಬಗಳನ್ನು ನನ್ನ ಗೆಳೆಯರೊಂದಿಗೆ ಆಚರಿಸಿದೆ. ಕೃಷ್ಣ ಜನ್ಮಾಷ್ಟಮಿ ನನ್ನ ನೆಚ್ಚಿನ ಹಬ್ಬ.
ನಾನೆಂದರೆ ಕೆಲ ಶಿಕ್ಷಕರಿಗೆ ಅಚ್ಚುಮೆಚ್ಚು. ನಾನು ಗಣಿತದಲ್ಲಿ ತುಂಬಾ ಹಿಂದೆ ಇದ್ದೆ. ಬೋರ್ಡ್ ಪರೀಕ್ಷೆಯಲ್ಲಿ ಹೇಗಾದರು ಮಾಡಿ ನನ್ನನ್ನು ಉತ್ತೀರ್ಣ ಮಾಡಿಸಲು ನನ್ನ ಗಣಿತ ಶಿಕ್ಷಕರು ನನಗಾಗಿ ಉಚಿತ ಟ್ಯೂಶನ್ ತೆಗೆದುಕೊಳ್ಳಲು ಶುರು ಮಾಡಿದರು. ನನಗೊಬ್ಬನಿಗಾಗಿ ತರಗತಿ ಮುಗಿದ ಬಳಿಕವೂ ನಿಲ್ಲುತ್ತಿದ್ದರು ಅಷ್ಟೇ ಅಲ್ಲದೆ ಆದಿತ್ಯವಾರ ತನ್ನ ಮನೆಗೆ ಕರೆದು ಪಾಠ ಹೇಳಿಕೊಡುತ್ತಿದ್ದರು. ಇದಕ್ಕಾಗಿ ಒಂದೇ ಒಂದು ರೂಪಾಯಿ ನನ್ನಿಂದ ತೆಗೆದುಕೊಂಡಿಲ್ಲ.
ನಾನು 80% ಅಂಕಗಳೊಂದಿಗೆ ತೇರ್ಗಡೆಯಾದೆ. ಅಂತಿಮವಾಗಿ MCA ಕೋರ್ಸ್ ಗೆ ಸೇರಿದೆ, MCA ಮುಗಿಯುವ ಮೊದಲೆ ಉತ್ತಮ ಕೆಲಸ ಸಿಕ್ಕಿತು. ಇಷ್ಟೆಲ್ಲ ಆಗಲು ನನ್ನ ಗಣಿತ ಶಿಕ್ಷಕರೆ ಕಾರಣ, ಅವರು ನನಗೆ ಗಣಿತದಲ್ಲಿ ತೇರ್ಗಡೆಯಾಗಲು ಸಹಾಯ ಮಾಡಿದ್ದರಿಂದ ನಾನು ಇಂದು ಉತ್ತಮ ಕೆಲಸದಲ್ಲಿದ್ದೇನೆ.
ನಾನೊಬ್ಬ ಮುಸ್ಲಿಂ ವಿದ್ಯಾರ್ಥಿ ಎಂದು ಗೊತ್ತಿದ್ದರೂ ಎಲ್ಲರಿಗೂ ನನ್ನನ್ನು ತಿರಸ್ಕಾರ ಮಾಡಬಹುದಿತ್ತು/ಹಿಂಸೆ ನೀಡಬಹುದಿತ್ತು, ಆದರೆ ಯಾರೂ ಆತರ ಮಾಡಲಿಲ್ಲ. ನಾನು ಎಲ್ಲಾ ಹಿಂದೂ ವಿದ್ಯಾರ್ಥಿಗಳನ್ನು ಗೆಳೆಯರನ್ನಾಗಿಸಿದೆ, ಶಿಕ್ಷಕರಿಗೆ ನನ್ನ ಮೇಲೆ ಪ್ರೀತಿಯಿತ್ತು ಮತ್ತು ಎಂದಿಗೂ ನನ್ನನ್ನು ಹೊರಗಿನವನಂತೆ ನೋಡಲಿಲ್ಲ.
ನನ್ನ ಪ್ರಕಾರ ಬೇರೆ ಯಾವುದೇ ಮುಸ್ಲಿಂ ಅಲ್ಪಸಂಖ್ಯಾತ ದೇಶಗಳಲ್ಲಿ ಮುಸ್ಲಿಂ ಮಕ್ಕಳ ಜೊತೆ ಈತರ ಕಲ್ಪನೆ ಮಾಡಲೂ ಸಾಧ್ಯವಿಲ್ಲ . ನನಗೆ ನನ್ನ ದೇಶದ ಬಗ್ಗೆ ಹೆಮ್ಮೆಯಿದೆ,  ನನ್ನ ಶಾಲೆಯ ಬಗ್ಗೆ ಹೆಮ್ಮೆಯಿದೆ, ನನ್ನ ಶಿಕ್ಷಕರ ಬಗ್ಗೆ ಹೆಮ್ಮೆಯಿದೆ. ನಾನೂ ನನ್ನ ಹೆತ್ತವರಿಗೆ ಮೊದಲು ಧನ್ಯವಾದ ಹೇಳುತ್ತೇನೆ, ಹೊರಗಿನವರ ಮಾತಿಗೆಲ್ಲ ಕಿವಿಗೊಡದೆ ನನ್ನನ್ನು ಇಂತಹ ಅದ್ಬುತ ಶಾಲೆಗೆ ಸೇರಿಸಿದ್ದಕ್ಕೆ.  ನನ್ನ ಜೀವನದಲ್ಲಿ ಇಂತಹ ಒಳ್ಳೇ ಅಧ್ಯಾಯ ತೆರೆದಿದ್ದಕ್ಕೆ ನಾನು ನನ್ನ ದೇವರಿಗೆ ಧನ್ಯವಾದ ಹೇಳುತ್ತೇನೆ, ನಾನು ಕಲಿತದ್ದು "ಮಾನವೀಯತೆಗಿಂತ ಯಾವುದೇ ಧರ್ಮ ದೊಡ್ಡದಲ್ಲ"
By - ವಾಕಾಸ್ ಅಬ್ದುಲ್ಲಾ,  quora 
ಅನುವಾದ - veerakesari
loading...

Post a Comment

Powered by Blogger.