veerakesari.in
ಗುಜರಾತ್ ನ ರಾಜ್ ಕೋಟ್ ಹಾಗೂ ಬಾವ್ ನಗರ ಎಂಬಲ್ಲಿ ಐಸಿಸ್ ಉಗ್ರರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇಬ್ಬರು ಮುಸ್ಲಿಮರನ್ನು ಬಂಧಿಸಲಾಗಿದೆ. ಗುಜರಾತಿನಲ್ಲಿ ಐಸಿಸ್ ಉಗ್ರರೊಂದಿಗೆ ಸಂಬಂಧ ಹೊಂದಿರುವವರ ಬಂಧನ ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ. ಐಸಿಸ್ ಉಗ್ರರ ವೀಡಿಯೋ ಹಾಗೂ ಭಾಷಣಗಳನ್ನು ನೋಡಿ ಇವರು ಐಸಿಸ್ ಸಿದ್ಧಾಂತದ ಕಡೆ ಪ್ರಭಾವಕ್ಕೆ ಒಳಗಾಗಿದ್ದರು. ಬಂದಿತರು ಸೋದರರಾಗಿದ್ದು ಬಂಧಿತರನ್ನು ವಾಸಿಮ್ ಆರೀಫ್ ರಾಮೋಡಿಯ ಹಾಗೂ ನಯೀಮ್ ಆರೀಫ್ ರಾಮೋಡಿಯ ಎಂದು ಗುರುತಿಸಲಾಗಿದೆ. ಇಬ್ಬರೂ ವಿದ್ಯಾವಂತರಾಗಿದ್ದು ಒಬ್ಬಾತ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾನೆ.
ಇವರ ತಂದೆ ಆರಿಫ್ ರಾಮೋಡಿಯ ಗುಜರಾತ್ ನ ಸೌರಾಷ್ಟ್ರ ಯುನಿವರ್ಸಿಯಲ್ಲಿ ತಮ್ಮ ಕೆಲಸದಿಂದ ನಿವೃತ್ತಿಯಾಗಿದ್ದಾರೆ. ಆರೀಫ್ ರಾಮೋಡಿಯಾಗೆ ಮಕ್ಕಳ ಬಂಧನದಿಂದ ಆಘಾತವಾಗಿದ್ದು" ನನಗೆ ನನ್ನ ಮಕ್ಕಳ ಮೇಲೆ ಆರೋಪಿಸಿರುವ ಚಟುವಟಿಕೆಗಳ ಬಗ್ಗೆ ಮಾಹಿತಿಯಿಲ್ಲ. ಈ ಆರೋಪ ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ನಾನು ಇಷ್ಟು ವರ್ಷ ಸಂಪಾದಿಸಿದ ಪ್ರತಿಷ್ಠೆಗೆ ಕಳಂಕವಾಯಿತು" ಎಂದರು.
ಬಂದಿತ ಸಹೋದರರು ಧಾರ್ಮಿಕ ಸ್ಥಳಗಳ ಮೇಲೆ ಧಾಳಿ ಮಾಡಲು ಹೊಂಚು ಹಾಕುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಜೆಕೆ ಭಟ್ ಮಾಧ್ಯಮಗಳಿಗೆ ಹೇಳಿದರು. ಮುಂದಿನ ಎರಡು ದಿನಗಳಲ್ಲಿ ಈ ಧಾಳಿ ನಡೆಸಲು ಪ್ಲಾನ್ ನಡೆದಿತ್ತು, ಸೌರಾಷ್ಟ್ರದಲ್ಲಿನ ಚಾಮುಂಡ ದೇವಾಲಯ ಇವರ ಮೊದಲ ಟಾರ್ಗೆಟ್ ಆಗಿತ್ತು . ಈ ದಾಳಿಗೆ "ಲೋನ್ ಊಲ್ಫ್ ಅಟಾಕ್" ಎಂಬ ಕೋಡ್ ನೇಮ್ ಇಡಲಾಗಿತ್ತು ಎಂದು ಗುಪ್ತಚರ ಮಾಹಿತಿಯಿಂದ ಗೊತ್ತಾಗಿದೆ.
ಈ ಇಬ್ಬರು ಸಹೋದರರ ಚಲನವಲನಗಳ ಮೇಲೆ ಕಳೆದ ಒಂದು ವರ್ಷದಿಂದಲೂ ಪೋಲೀಸರು ಕಣ್ಗಾವಲು ಇಟ್ಟಿದ್ದರು. ಇವರ ಐಸಿಸ್ ಒಲವು ಎರಡು ವರ್ಷಗಳ ಹಿಂದೆಯೇ ನಡೆದಿದೆ, ಅಂದಿನಿಂದಲೂ ನಿರಂತರವಾಗಿ ಮೆಸೆಂಜರ್ ಆಪ್ ಗಳ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದಾರೆ.
ಇಬ್ಬರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಐಸಿಸ್ ಉಗ್ರರೊಂದಿಗೆ ನಡೆಸಿದ ಸಂಭಾಷಣೆಗಳು ಇವೆ.ಇವರ ಮನೆಯಿಂದ ಕಂಪ್ಯೂಟರ್ ಹಾಗೂ ಕೆಲ ದಾಖಲೆಗಳ ಜೊತೆ ಗನ್ ಪೌಡರ್ ಹಾಗೂ ಸ್ಫೋಟಕ ತಯಾರಿಸುವ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದೇಶಾದ್ಯಂತ ಐಸಿಸ್ ಕಡೆ ಒಲವು ಹೊಂದಿದ್ದ ಒಟ್ಟು 67ಯುವಕರನ್ನು ಬಂಧಿಸಲಾಗಿದೆ.
loading...
Post a Comment