Veerakesari 05:43
veerakesari.in
ಇಸ್ಲಾಮಿಕ್ ಉಗ್ರ ಸಂಘಟನೆ ಐಸಿಸ್ ಸೇರಲು ಕೇರಳದಿಂದ ತೆರಳಿದ್ದ 21ಜನರ ತಂಡದಿಂದ ಒಬ್ಬಾತ ಅಫ್ಘಾನಿಸ್ತಾನದಲ್ಲಿ ಹತನಾಗಿದ್ದಾನೆ. ಈ ಬಗ್ಗೆ ಅದೇ ಉಗ್ರರ ತಂಡದಿಂದ ಒಬ್ಬಾತ ಸಂದೇಶ ಕಳಿಸಿದ್ದು, ಹತನಾದ ಜಿಹಾದಿ ಹಫೀಸುದೀನ್ ಎಂದು ತಿಳಿದು ಬಂದಿದೆ. ಅಫ್ಘಾನಿಸ್ತಾನದಲ್ಲಿ ಐಸಿಸ್ ಉಗ್ರರ ಕ್ಯಾಂಪ್ ಮೇಲೆ ಶುಕ್ರವಾರದಂದು ನಡೆದ ಡ್ರೋನ್ ಧಾಳಿಯಲ್ಲಿ ಹಫೀಸ್ ಹತನಾಗಿದ್ದಾನೆ ಎಂದು ಟೆಲಿಗ್ರಾಂ ಆಪ್ ಮೂಲಕ ಸಂದೇಶ ಬಂದಿದೆ.
"ಹಫೀಸ್ ಡ್ರೋನ್ ಧಾಳಿಗೆ ಮೃತನಾಗಿದ್ದಾನೆ. ನಾವು ಆತನನ್ನು ಹುತಾತ್ಮ ಎಂದು ತಿಳಿದುಕೊಳ್ಳಬಹುದು, 'ಅಲ್ಲಾನಿಗೆ' ಎಲ್ಲಾ ತಿಳಿದಿದೆ, ಅಲ್ಲದೆ ಉಳಿದವರೂ ಹುತಾತ್ಮರಾಗಲು ಸಿದ್ದರಾಗಿದ್ದೇವೆ, ಹಫೀಜ್ ನ ಶವವನ್ನು ಮಣ್ಣು ಮಾಡಿದ್ದೇವೆ" ಎಂದು ಬರೆಯಲಾಗಿದೆ.
ಅಮಾಯಕರ ಜೀವ ತೆಗೆಯಲು ಹೋಗಿ ಮರುಳು ಗಾಡಲ್ಲಿ ಮಣ್ಣಾಗಿ ಹೋದ. ಮಾಹಿತಿ ಪ್ರಕಾರ ಈ ಸಂದೇಶವನ್ನು ಕೇರಳದಿಂದ ಜಿಹಾದಿ ಸಂಘಟನೆ ಸೇರಲು ತೆರಳಿದ್ದ 21 ಜನರ ಗುಂಪಿನಲ್ಲಿರುವ 'ಅಶ್ಫಾಕ್' ಎಂಬಾತ ಕಳಿಸಿದ್ದಾಗಿ ತಿಳಿದುಬಂದಿದೆ. ಈ 21 ಜನರೂ ಜೂನ್ 2016 ರಂದು ಕೇರಳದಿಂದ ಅಫ್ಘಾನಿಸ್ತಾನದಲ್ಲಿ ಐಸಿಸ್ ವಶದಲ್ಲಿರುವ ನಂಗರ್ಹಾರ್ ಪ್ರಾಂತ್ಯದಲ್ಲಿ ಜಿಹಾದಿ ಟ್ರೈನಿಂಗ್ ಪಡೆಯಲು ತೆರಳಿದ್ದರು.
ಈಗ ಹತನಾಗಿರುವ ಉಗ್ರ ದುಬೈಯಲ್ಲಿ ಮಾಡುತ್ತಿದ್ದ ಕೆಲಸ ತೊರೆದು ತನ್ನ ಊರಾದ ಕೇರಳದ ಪಡನೆ ಗ್ರಾಮಕ್ಕೆ ವಾಪಾಸಾಗಿದ್ದ. ಪಡಾನೆ ಬಂದ ನಂತರ ಆತ 'ಪೀಸ್' ಇಂಟರ್ ನ್ಯಾಶನಲ್ ಶಾಲೆಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದಾನೆ. ಅಲ್ಲಿ ಅಬ್ದುಲ್ಲಾ ರಶೀದ್ ಅಬ್ದುಲ್ಲಾ ಎಂಬಾತ ಈತನನ್ನು ಐಸಿಸ್ ಉಗ್ರ ಸಿದ್ದಾಂತದೆಡೆಗೆ ಪ್ರಭಾವಿತನಾಗುವಂತೆ ಮಾಡಿದ್ದಾನೆ. ಅಬ್ದುಲ್ಲಾ ಯುವಕರನ್ನು ಐಸಿಸ್ ಸಂಘಟನೆಗೆ ಸೇರಿಸುವ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೇರಳದಿಂದ ಐಸಿಸ್ ಸೇರಲು ತೆರಳಿರುವ 21ಜನರಲ್ಲಿ 12ಜನ ಇದೇ ಪಡಾನೆ ಗ್ರಾಮದವರು.
ಉಳಿದ 20ಜನ ಶಾಂತಿದೂತರೂ ಆದಷ್ಟು ಬೇಗ ಯಮನ ಪಾದ ಸೇರಲಿ ಎಂದು ಪ್ರಾರ್ಥಿಸೋಣ. 
loading...

Post a Comment

Powered by Blogger.