loading...
ಭೋಪಾಲ್ : ಮಧ್ಯಪ್ರದೇಶ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐ ಗಾಗಿ ಕೆಲಸ ಮಾಡುತ್ತಿದ್ದ 11ಜನರನ್ನು ಮಧ್ಯಪ್ರದೇಶದ ನಾಲ್ಕು ನಗರಗಳಿಂದ ಬಂಧಿಸಿದ್ದಾರೆ. ಆತಂಕಕಾರಿ ವಿಷಯವೇನೆಂದರೆ ಬಂದಿತರಲ್ಲಿ ಭೋಪಾಲ್ ಜಿಲ್ಲಾ ಬಿಜೆಪಿ ಯುವಮೋರ್ಚಾ ಐಟಿ ಸೆಲ್ ನ ಸಂಚಾಲಕ ಧ್ರುವ ಸಕ್ಸೇನಾ ಕೂಡ ಸೇರಿದ್ದಾನೆ.
ಈತನಿಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರುಗಳ ಜೊತೆ ಹತ್ತಿರದ ಸಂಬಂಧವಿದೆಯೆಂದು ಹೇಳಲಾಗುತ್ತಿದೆ. ಈತನ ಜೊತೆ ಒಟ್ಟು 11ಜನರನ್ನು ಬಂಧಿಸಲಾಗಿದ್ದು, ಪಾಕಿಸ್ತಾನದ ಐಎಸ್ಐ ಗೆ ಭಾರತೀಯ ಸೇನೆಯ ಗೌಪ್ಯ ಮಾಹಿತಿಗಳನ್ನು ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರಿಗೆ ಈ ಎಲ್ಲಾ ದೇಶ ದ್ರೋಹದ ಕೃತ್ಯ ಮಾಡಿದ್ದಕ್ಕೆ ಪಾಕಿಸ್ತಾನದಿಂದ ಹಣದ ಹೊಳೆಯೇ ಹರಿದು ಬರುತ್ತಿತ್ತು ಎಂದು ಹೇಳಲಾಗುತ್ತಿದೆ.
ಪೋಲೀಸ್ ಅಧಿಕಾರಿಗಳು ಇವರ ಮೇಲೆ ಮೊದಲೇ ನಿಗಾ ಇಟ್ಟಿದ್ದರು, ಇವರ ಮನೆ ಮೇಲೆ ದಾಳಿ ಮಾಡುವ ಮೊದಲೇ ಎಲ್ಲಾ ಆರೋಪಿಗಳು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ತಪ್ಪಿಸಿಕೊಂಡಿದ್ದರು. ಕೊನೆಗೂ ಪೋಲೀಸರು ಆರೋಪಿಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶದ್ರೋಹ ಮಾಡಿ ಬರುತ್ತಿದ್ದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದ ಇವರ ಬಳಿ ದೊಡ್ಡ ದೊಡ್ಡ ಬ್ರಾಂಡ್ ನ ಕಾರುಗಳಿಗೆ. ಕಳೆದ ಎರಡು ವರ್ಷಗಲ್ಲಿ ಇವರಲ್ಲಾದ ಬದಲಾವಣೆಗಳನ್ನು ಕಂಡು ಹಲವರು ಆಶ್ಚರ್ಯಗೊಂಡಿದ್ದರು. ಇವರ ದುಡ್ಡಿನ ಆಸೆಗೆ ನಮ್ಮ ಸೇನೆಯ ರಹಸ್ಯ ಮಾಹಿತಿಗಳು ಸೋರಿಕೆಯಾಗಿ ಅದು ನಮ್ಮ ಸೈನಿಕರ ಪ್ರಾಣಕ್ಕೆ ಕುತ್ತು ಉಂಟುಮಾಡುತ್ತೆ. ಭಾರತದಲ್ಲಿದ್ದುಕೊಂಡು ದೇಶದ್ರೋಹದ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಇಂತಹ ನಾಲಾಯಕ್ ಗಳಿಗೆ ಗಲ್ಲು ಶಿಕ್ಷೆ ನೀಡಲಿ. ಇದನ್ನು ನೋಡಿಯಾದರೂ ಉಳಿದವರು ಪಾಠ ಕಲಿಯಲಿ.
ಜೈ ಹಿಂದ್ ಜೈ ಭಾರತ ಮಾತಾ
loading...
Post a Comment