Veerakesari 05:40
loading...
ಅಹಮದಾಬಾದಿನ ಇತಿಹಾಸ ತುಂಬಾ ಜನರಿಗೆ ಗೊತ್ತಿಲ್ಲ.ಅದನ್ನರಿತುಕೊಂಡು ಭಯೋತ್ಪಾದಕರಿಂದ ಕರ್ಣಾವತಿ ಅಹಮದಾಬಾದ್ ಆಗಿದ್ದನ್ನ ಪುನಃ ಕರ್ಣಾವತಿಯನ್ನಾಗಿ ಮಾಡಲು ಈಗಿನ ಸರ್ಕಾರಕ್ಕೆ ಒತ್ತಾಯಿಸೋದು ಪ್ರತಿಯೊಬ್ಬ ಜಾಗೃತ ಹಿಂದುವಿನ ಕರ್ತವ್ಯ.ಬರೀ ಒತ್ತಾಯಿಸೋದಷ್ಟೆ ಅಲ್ಲಾ ಘೋಷಣೆ ಆಗೋ ಹಾಗೇ ಮಾಡಲೇಬೇಕು.

ಕರ್ಣಾವತಿಯು ಅಹಮದಾಬಾದ್ ಹೇಗೆ ಆಯ್ತು ಎಂಬುದನ್ನ ಯಾವತ್ತಾದರೂ ಅಲೋಚಿಸಿದ್ದೀರಾ? ಯಾರು ಅಲೋಚಿಸದೇ ಹೋದರೂ ಸ್ವಾಭಿಮಾನಿ ಹಿಂದು ಅಲೋಚಿಸಲೇಬೇಕು.ಆ ಅವಮಾನವನ್ನು ಯಾವತ್ತು ಸ್ವಾಭಿಮಾನಿ ಹಿಂದು ಮರೆಯಲೇಬಾರದು.ಅಖಂಡ ಹಿಂದು ರಾಷ್ಟ್ರವನ್ನ ಭಗ್ನ ಮಾಡಿ ಹಿಂದು ಹೆಸರಿನ ನಗರಗಳನ್ನು ಇಸ್ಲಾಂ ಹೆಸರನ್ನಾಗಿ ಮಾಡಿ ಅಲ್ಲಿನ ಹಿಂದುಗಳ ಮಾರಣ ಹೋಮ ಮಾಡಿದ್ದನ್ನ ಯಾವತ್ತೂ ಮರೆಯಲೇಬಾರದು.

ಈ ಬದಲಾವಣೆಯ ಬೇರು ಹೇಗೆ ಎಲ್ಲಿಂದ ಬಂತು?

ಇಸ್ಲಾಮಿಕ್ ಜಿಹಾದಿಗಳು, ಭಯೋತ್ಪಾದಕರು ,ಕಳ್ಳರೆಲ್ಲಾ ಸೇರಿ ಹಿಂದುಗಳ ಮೇಲೆ ದಾಳಿ ಮಾಡಿ ಮನಸ್ಸೋ ಇಚ್ಛೆ ಮಾರಣ ಹೋಮ ನಡೆಸಿ ಕೊನೆಗೆ ಕರ್ಣಾವತಿಯನ್ನು ಅಹಮದಾಬಾದ್ ಆಗಿ ಮಾರ್ಪಾಡು ಮಾಡಿದ್ದು.

14 ನೇ ಶತಮಾನದಲ್ಲಿ ಗುಜರಾತ್ ದೆಹಲಿಯ ಸುಲ್ತಾನನ ಆಳ್ವಿಕೆಯಲ್ಲಿತ್ತು . ಈ ಸುಲ್ತಾನ್ ಯಾರು ಗೊತ್ತೆ? ಇತಿಹಾಸದಲ್ಲಿ ನೀವು ತುರ್ಕರು ಭಾರತದ ಮೇಲೆ ದಾಳಿ ಮಾಡಿದ್ದರ ಬಗ್ಗೆ ಓದಿರುತ್ತೀರಾ.ಆ ತುರ್ಕರಲ್ಲಿ ಈ ಸುಲ್ತಾನ ಕೂಡಾ ಒಬ್ಬ.ಭಾರತಕ್ಕೆ ದಾಳಿಗೆಂದೇ ಬಂದವನು.ಆ ಸಂದರ್ಭದಲ್ಲಿ ಸುಲ್ತಾನ್ ಅಹಮದ್ ಶಾಹ್ ಗವರ್ನರ್ ಆಗಿದ್ದ.ಅವನ ಆಳ್ವಿಕೆಯಲ್ಲಿ ಹಿಂದುಗಳ ಮೇಲೆ ಯಾವ ಪರಿಯ ದಾಳಿ ಮಾಡಿದ್ದನೆಂದರೆ ಊಹಿಸೋಕು ಸಾಧ್ಯವಿಲ್ಲ.1411 ರಲ್ಲಿ ಕರ್ಣಾವತಿಯನ್ನು ಅಹಮದಾಬಾದ್ ಅಂತ ಬದಲಾಯಿಸಿದನು.ನಮ್ಮ ಪರಂಪರೆ, ಇತಿಹಾಸವನ್ನೆ ಕಳೆದುಕೊಂಡೆವು.

ಈ ಭಗ್ನವನ್ನು ಯಾರೇ ಮರೆತರೂ ಹಿಂದುಗಳು ಮರೆಯಲೇಬಾರದು.

ಇವಾಗಲೂ ನಾವು ಆ ಕ್ರೌರ್ಯದ ನೆರಳಲ್ಲೇ ಬದುಕುತ್ತಿದ್ದೇವೆ.ಕರ್ಣಾವತಿಯ ನೆನಪೇ ಮಾಸಿ ಹೋಗಿದೆ. ನಾವು ಬದಲಾಗದೆ, ಬದಲಾಯಿಸದೆ ಯಾವುದೂ ಬದಲಾಗಲ್ಲ. ಜಾಗೃತ ಹಿಂದು ಇವಾಗಲಾದರೂ ಎಚ್ಚೆತ್ತುಕೊಂಡು ಆ ಇತಿಹಾಸವನ್ನು ಮರುಕಳಿಸಿ ಅಹಮಾದಾಬಾದ್ ನ್ನು ಕರ್ಣಾವತಿಯನ್ನಾಗಿ ಮಾಡುವ ಪಣವನ್ನು ತೊಡೋಣ.

ಭಾಗ ೨ : ಭಾರತದ ಪ್ರಯಾಗ್ ಎಂಬುದು ಅಲಾಹಾಬಾದ್ ಆಗಿದ್ದು ಹೇಗೆ.

ಲೇಖಕರು : ಮಹೇಶ್ ಹಿರೇಮಠ

Facebook link : https://m.facebook.com/maheshhiremathh
Twitter : https://twitter.com/MahiHiremath?s=08
Instagram : https://instagram.com/download/?r=3742706804(nationalist_mahi)
Source : http://wp.me/p7i4i9-wT
loading...

Post a Comment

Powered by Blogger.