loading...
ಫೆಬ್ರವರಿ 15 2017 ಭಾರತೀಯ ಬಾಹ್ಯಾಕಾಶ ಸಂಸ್ಥೆ 'ಇಸ್ರೋ' 104 ಉಪಗ್ರಹವನ್ನು ಒಂದೇ ಬಾರಿ ಅಂತರಿಕ್ಷಕ್ಕೆ ಉಡಾಯಿಸುವ ಮೂಲಕ ದಾಖಲೆ ಬರೆಯಿತು. ಈ ದಾಖಲೆಯನ್ನು ಸರಿಗಟ್ಟಲು ವಿಶ್ವದ ಇತರ ಬಾಹ್ಯಾಕಾಶ ಸಂಸ್ಥೆಗಳಿಗೆ ಇನ್ನೂ ಕೆಲವು ವರ್ಷಗಳು ಬೇಕಾಗಬಹುದು ಯಾಕೆಂದರೆ ಇಸ್ರೋ ಸಂಸ್ಥೆಯ ಉಡ್ಡಯನ ವಾಹನಗಳು ವಿಶ್ವದಲ್ಲೇ ಶ್ರೇಷ್ಟವಾದದ್ದು.
104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿರುವ ಇಸ್ರೋ ಉಡ್ಡಯನ ವಾಹನ :
104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿರುವ ಇಸ್ರೋ ಉಡ್ಡಯನ ವಾಹನ :
ಇಸ್ರೋ ಸಾಧನೆಗೆ ಭಾರತದೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲದೆ ವಿದೇಶಿ ಮಾಧ್ಯಮಗಳು ಇಸ್ರೋ ಸಾಧನೆಯನ್ನು ಹಾಡಿಹೊಗಳುತ್ತಿದೆ. ಇಸ್ರೋ ಒಂದೇ ಬಾರಿ ದಾಖಲೆಯ 104 ಉಪಗ್ರಹ ಅಂತರಿಕ್ಷಕ್ಕೆ ಉಡಾಯಿಸುವ ಯೋಜನೆಯನ್ನು ಘೋಷಿಸಿದಂದಿನಿಂದ ಕೆಲ ಭಾರತೀಯ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲಿ ಲಗ್ಗೆ ಇಟ್ಟಿದ್ದ ಪಕ್ಕದ ಪಾಕಿಸ್ತಾನೀಯರು ಇಸ್ರೋ ಉಡಾಯಿಸುವ ಉಪಗ್ರಹಗಳು ಅರಬ್ಬೀ ಸಮುದ್ರದಲ್ಲಿ ಬೀಳಲಿದೆ ಎಂದು ಅಪಹಾಸ್ಯ ಮಾಡಿದ್ದನ್ನು ಕಂಡಿದ್ದೆ ತಕ್ಕ ಪ್ರತಿಕ್ರಿಯೆ ಕೂಡ ನೀಡಿದ್ದೆ. ಈಗ ಇಸ್ರೋ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈಗ ಒಮ್ಮೆ ಅದೇ ಮಾಧ್ಯಮಗಳ ಫೇಸ್ಬುಕ್ ಪೇಜ್ ನ ಕಮೆಂಟ್ ಬಾಕ್ಸ್ ಗಳಿಗೆ ಕಣ್ಣಾಡಿಸಿದಾಗ ಅಚ್ಚರಿ ಕಾದಿತ್ತು. ಅಂದು ಅಪಹಾಸ್ಯ ಮಾಡಿದ್ದ ಪಾಕಿಸ್ತಾನೀಯರು ಇಂದು ಭಾರತದ ಯಶಸ್ಸಿಗೆ ಚಪ್ಪಾಳೆ ತಟ್ಟುತ್ತಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಸ್ವಂತ ದೇಶ ಪಾಕಿಸ್ತಾನಕ್ಕೆ ಬೈಯುತ್ತಿದ್ದಾರೆ. ನೀವೂ ಓದಿ ಕೆಲ ಕಮೆಂಟ್ ಗಳನ್ನು.
ಭಾರತದಲ್ಲಿ ಇಸ್ರೋ (ISRO) ಸಂಸ್ಥೆ ಸ್ಥಾಪನೆಯಾಗುವ ಎಂಟು ವರ್ಷ ಮೊದಲೇ ಪಾಕಿಸ್ತಾನದಲ್ಲಿ ಇಂತಹದೇ ಸಂಸ್ಥೆಯನ್ನು (SUPARCO) ಸ್ಥಾಪಿಸಿತ್ತು. ಆದರೆ ಪಾಕಿಸ್ತಾನ ಉಡಾಯಿಸಿದ್ದು ಮಾತ್ರ ಆತ್ಮಾಹುತಿ ಬಾಂಬರ್ ಗಳನ್ನು. ಪಾಕಿಸ್ತಾನ ಬದಲಾಗಬೇಕಾದರೆ ಪಾಕಿಸ್ತಾನೀಯರು ಮೊದಲು ತಮ್ಮ ಪೂರ್ವಜರು ಅರಬ್ಬೀಯರು ಎಂಬುದನ್ನು ತಲೆಯಿಂದ ತೆಗೆದು ಹಿಂದುಸ್ಥಾನೀಯರು ಎಂಬುದನ್ನು ತಲೆಗೆ ಸೇರಿಸಬೇಕು. ಆಗಲಾದರೂ ಪಾಕಿಸ್ತಾನೀಯರು ಬದಲಾಗಬಹುದು.
ಶೇರ್ ಮಾಡಿ ವೀರಕೇಸರಿಗೆ ಬೆಂಬಲ ನೀಡಿ. ನಿಮ್ಮ ಬಳಿ ಹಿಂದುತ್ವ, ದೇಶಪ್ರೇಮ, ದೇವಾಲಯಗಳು ಹಾಗೂ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳು ಹಾಗೂ ಸುದ್ದಿಗಳು ಇದ್ದರೆ ನಮಗೆ ಕಳುಹಿಸಿ. ನಮ್ಮ ಇಮೇಲ್ veerakesari.212@gmail.com ಅಥವಾ ನಮ್ಮ ಫೆಸ್ಬುಕ್ ಪೇಜ್ ಇನ್ಬಾಕ್ಸ್ ಗೆ ಕಳುಹಿಸಿ. ಧನ್ಯವಾದ.
ಜೈ ಹಿಂದ್ ಜೈ ಹಿಂದುಸ್ತಾನ
loading...
Post a Comment