Veerakesari 05:31
loading...
ಬ್ರಿಟನ್ ವಿಶೇಷ ಸೇನಾ ಪಡೆಗಳು ಬುರ್ಕಾ ಧರಿಸಿ ಇಸ್ಲಾಮಿಕ್ ಸ್ಟೇಟ್ ಐಸಿಸ್ ಜಿಹಾದಿ ಉಗ್ರರ ಕಪಿಮುಷ್ಟಿಯಲ್ಲಿರುವ ರಖ್ಖಾ ಗೆ ನುಗ್ಗಿ ಐಸಿಸ್ ಉಗ್ರ ಕಮಾಂಡರ್ ನನ್ನು ಹೊಡೆದುರುಳಿಸಿದ ಬಗ್ಗೆ ಯು.ಕೆ.ಎಕ್ಸ್ ಪ್ರೆಸ್ ವರದಿಮಾಡಿದೆ.
ಬ್ರಿಟನ್ ಎಸ್ಎಎಸ್ ಸ್ಕ್ವಾಡ್ ವಿಶೇಷ ಸೇನಾ ಪಡೆಯ ಎಂಟು ಸೈನಿಕರು ಇಸ್ಲಾಮಿಕ್ ಸ್ಟೇಟ್ ಜಿಹಾದಿ ಉಗ್ರರ ರಾಜಧಾನಿ ಎಂದೇ ಕರೆಯಲ್ಪಡುವ ರಖ್ಖಾಗೆ ಮುಸಲ್ಮಾನ ಮಹಿಳೆಯರಂತೆ ಬುರ್ಕಾ ತೊಟ್ಟು ಯಾರಿಗೂ ಸಂಶಯ ಬರದ ರೀತಿ ಒಳ ನುಗ್ಗಿದ್ದರು. ಜಿಹಾದಿಗಳ ಪ್ರಧಾನ ಕಛೇರಿ  ಪ್ರವೇಶಿಸಿದ್ದೇ ತಡ ತಮ್ಮ ಬುರ್ಕಾ ಎತ್ತಿ ಗುಂಡಿನ ಮಳೆಗರೆದಿದ್ದಾರೆ. ಅಲ್ಲೇ ಇದ್ದ ಉಗ್ರರು ಪ್ರತಿಕ್ರಿಯಿಸುವ ಮೊದಲೇ ಹೆಣವಾಗಿ ಹೋಗಿದ್ದರು.
ಈ ಸೇನಾಪಡೆಯನ್ನು ಇಂತಹ ಕಾರ್ಯಾಚರಣೆಗಾಗಿಯೇ ವಿಶೇಷವಾಗಿ ತಯಾರಿ ನಡೆಸಲಾಗಿತ್ತು. ಮುಸಲ್ಮಾನ ಮಹಿಳೆಯರು ಬುರ್ಕಾ ಧರಿಸುವ ರೀತಿ ಇವರೂ ತಲೆಯಿಂದ ಕಾಲಿನ ವರೆಗೂ ಬುರ್ಕಾ ಧರಿಸಿದ್ದರು ಆದರೆ ಅದೇ ಬುರ್ಕಾದ ಒಳಗೆ ಗ್ರೇನೇಡ್, ಮಿಷಿನ್ ಗನ್ ಹಾಗೂ ಬುಲೆಟ್ ಗಳಿದ್ದವು. ಇವರು ಉಗ್ರ ಕಮಾಂಡರ್ ಗಳ ಪತ್ನಿಯರೆಂದು ತಿಳಿದು ಯಾರೂ ಪರಿಶೀಲಿಸುವ ಗೋಜಿಗೆ ಹೋಗಿಲ್ಲ.
ನಮ್ಮ ಪೇಜ್ ಲೈಕ್ ಮಾಡಿ

ನಂತರ ಇಸ್ಲಾಮಿಕ್ ಸ್ಟೇಟ್ ಉಗ್ರರ ವಶದಲ್ಲಿರುವ ರಖ್ಖಾ ನಗರ ಪ್ರವೇಶಿಸಿದ ಸೈನಿಕರು ಅಲ್ಲಿ ಐಸಿಸ್ ಉಗ್ರ ಮುಖ್ಯಸ್ಥನ ಮನೆಯನ್ನು ಗುರುತಿಸಿ ಅಲ್ಲೇ ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಅಮೇರಿಕಾ ಸೇನೆಯ ವಿಶೇಷ ಪತ್ತೆದಾರಿ ವಿಮಾನಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ವಿಮಾನದಲ್ಲಿದ್ದ ಸೇನಾಧಿಕಾರಿಗಳು ಡ್ರೋನ್ ಮೂಲಕ ಉಗ್ರನ ಮನೆ ಮೇಲೆ ಮಿಸೈಲ್ ದಾಳಿ ಮಾಡಿ ಉಗ್ರ ಮುಖ್ಯಸ್ಥನ ಜೊತೆ ಆತನ ಕುಟುಂಬವನ್ನೇ ಸರ್ವನಾಶ ಮಾಡಿದ್ದಾರೆ.
ಇನ್ನು ಮುಂದೆ ಐಸಿಸ್ ಉಗ್ರರು ಬುರ್ಕಾವನ್ನೂ ನಿಶೇಧ ಮಾಡಿದರೆ ಅಚ್ಚರಿಯಿಲ್ಲ. ಇಲ್ಲವಾದರೆ ಬುರ್ಕಾ ಕಂಡರೆ ಉಗ್ರರು ಒಂದು ಮೈಲಿ ದೂರ ಓಡಬಹುದು. ಇಸ್ಲಾಮಿಕ್ ಸ್ಟೇಟ್ ಮಾಡಿ ಬುರ್ಕಾ ಕಡ್ಡಾಯ ಮಾಡಿದ ಜಿಹಾದಿಗಳಿಗೆ ಈಗ ಅದೇ ಕಂಟಕವಾಗಿ ಪರಿಣಮಿಸುತ್ತಿದೆ.
ಕೃಪೆ - ಯುಕೆ ಎಕ್ಸ್ ಪ್ರೆಸ್
loading...

Post a Comment

Powered by Blogger.