Veerakesari 06:36
veerakesari.in
ಅಮೆರಿಕದಲ್ಲಿರುವ ಉಸ್ಮಾನ್ ಖುರೇಶಿ ಎಂಬ ವ್ಯಕ್ತಿ ಹೈದರಾಬಾದಿನ ಮೊಘಲ್ ಪುರದಲ್ಲಿರುವ ತನ್ನ ಪತ್ನಿ ಮಹರಿನ್ ನೂರ್ ಗೆ ವ್ಹಾಟ್ಸ್ ಆಪ್ ಮೂಲಕ ತಲಾಖ್ ನೀಡಿದ ಘಟನೆ ವರದಿಯಾಗಿದೆ. 
2015 ರಲ್ಲಿ ಮಹರಿನ್ ಅವರನ್ನು ಮದುವೆಯಾಗಿದ್ದ ಟೆಕ್ಕಿ ಉಸ್ಮಾನ್ ಮದುವೆಯಾದ ಕೆಲವು ಸಮಯದ ನಂತರ ನ್ಯೂಯಾರ್ಕ್ ಗೆ ತೆರಳಿದ್ದ. ಮಹರಿನ್ ಮೊಘಲ್ ಪುರದಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿದ್ದರು. ಅಮೆರಿಕದ ಮೆಡಿಕಲ್ ಏಜೆನ್ಸಿಯೊಂದರಲ್ಲಿ ಸೀನಿಯರ್ ಅನಾಲಿಸ್ಟ್ ಆಗಿದ್ದ ಉಸ್ಮಾನ್ ಫೆಬ್ರವರಿ ಕೊನೆಯ ವಾರದಲ್ಲಿ ಪತ್ನಿಗೆ ವ್ಹಾಟ್ಸ್ ಆಪ್ ಮೂಲಕ ತಲಾಖ್ ಕಳಿಸಿದ್ದ. ಆತನ ಮೆಸೇಜ್ ತಲುಪಿದ ತಕ್ಷಣವೇ ಆಕೆಯನ್ನು ಅತ್ತೆಯ ಮನೆಯಿಂದ ಹೊರಹಾಕಲಾಗಿತ್ತು.
ವಾಟ್ಸಪ್ ಮೂಲಕ ತಲಾಖ್ ಪಡೆದ ಮಹರಿನ್ ಮತ್ತು ಹೀನಾ
ಈ ಕುರಿತು ಮಹರಿನ್ ಪೊಲೀಸರಿಗೆ ದೂರು ನೀಡಿದ್ದು, ಉಸ್ಮಾನ್ ನ ತಂದೆ-ತಾಯಿಯ ವಿಚಾರಣೆ ನಡೆಸಿದಾಗ ಉಸ್ಮಾನ್ ನ ಅಣ್ಣ ಫಯಾಜುದ್ದಿನ್ ಎಂಬುವವರು ಸಹ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದು ಬೆಳಕಿಗೆ ಬಂದಿದೆ. ಫಯಾಜುದ್ದಿನ್ ವಿರುದ್ಧವೂ ಅವರ ಪತ್ನಿ ಹೀನಾ ಎಂಬುವವರು ಈ ಮೊದಲೇ ದೂರು ನೀಡಿದ್ದರು ಎನ್ನಲಾಗಿದೆ. ಸದ್ಯಕ್ಕೆ ಉಸ್ಮಾನ್ ತಂದೆ ಹಫೀಜ್ ಮತ್ತು ತಾಯಿ ಅತಿಯಾ ಅವರನ್ನು ಬಂಧಿಸಲಾಗಿದೆ.
ಮುಸ್ಲಿಂ ಮಹಿಳೆಯರಿಗಾಗಿ ಕೇಂದ್ರಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆ ಕಾನೂನನ್ನು ವಿರೋಧಿಸಿದವರಿಗೆ ನಾಚಿಕೆಯಾಗಬೇಕು. ತಮಗೆ ಬೇಕಾದಾಗ ಮದುವೆಯಾಗೋದು, ದೈಹಿಕ ಸುಖ ಪಡೆಯೋದು, ಹೊಸದು ಬೇಕೆಂದಾಗ ಬಿಟ್ಟುಬಿಡೋಕೆ ಮುಸಲ್ಮಾನ ಮಹಿಳೆಯರೇನು ಆಟದ ವಸ್ತುಗಳೇ...???
loading...

Post a Comment

Powered by Blogger.