veerakesari.in
ಅಮೆರಿಕಾದ ಜೋಡಿಯೊಂದು ಭಾರತೀಯ ಸಂಪ್ರದಾಯಕ್ಕೆ ಮನಸೋತು, ಮೈಸೂರಿನಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮತ್ತೆ ತಮ್ಮ ದೇಶಕ್ಕೆ ತೆರಳಿದ್ದಾರೆ.
ಅಮೆರಿಕದ ಇಂಕಾ ರಾಜ ಮನೆತನದ ಸದಸ್ಯರಲ್ಲೊಬ್ಬರಾದ ಕಲ್ಕಿ ಹೆನ್ರಿಕ್ ಹಾಗೂ ಅಮೆರಿಕಾದ ಎಸ್ಸಾ ಜೆಸ್ನಿಯಾ ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ ವೇದಗಳ ಅಧ್ಯಯನ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದರು.
ಈ ಜೋಡಿ ಇಲ್ಲಿನ ಭಾರತೀಯ ಸಂಪ್ರದಾಯಗಳ ಅಧ್ಯಯನ ಮಾಡುವ ವೇಳೆ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ, ವಿವಾಹ ಹಾಗೂ ಪುರೋಹಿತರ ಸಮ್ಮುಖದಲ್ಲಿ ನಡೆಯುತ್ತಿದ್ದ ಶಾಸ್ತ್ರಗಳ ಬಗ್ಗೆ ಅರಿತು ಕೊಂಡಿದ್ದರು. ಈ ಎಲ್ಲ ಸಂಪ್ರದಾಯಕ್ಕೆ ಮಾರುಹೋಗಿ ಇಲ್ಲಿಯೇ ನಿಶ್ಚತಾರ್ಥ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿದ್ದರು.
ಆ ಪ್ರಕಾರ ಇತ್ತೀಚೆಗೆ ಮೈಸೂರಿನ ಶೆಲ್ವಪಿಳ್ಳೆ ಅಯ್ಯಂಗಾರ್ ಅವರ ನಿವಾಸದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಶಾಸ್ತ್ರವನ್ನು ಮಾಡಿಕೊಂಡು, ಇಬ್ಬರೂ ಅಮೆರಿಕಕ್ಕೆ ತೆರಳಿದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಅಮೆರಿಕ, ಜರ್ಮನಿ, ಬಲ್ಗೇರಿಯಾ, ಸ್ಫೇನ್, ಆಸ್ಟ್ರೇಲಿಯಾ ಪ್ರಜೆಗಳು ಪಾಲ್ಗೊಂಡಿದ್ದರು.
Source : Kannada Prabha
loading...
Post a Comment