Veerakesari 07:28
veerakesari.in
ಇಸ್ಲಾಮಿಕ್‌ ಸ್ಟೇಟ್‌ ಜತೆ ಸಂಪರ್ಕ ಹೊಂದಿದ್ದ ಎಂಬ ಆರೋಪದಡಿ ಮಂಗಳವಾರದಂದು ಉಗ್ರ ನಿಗ್ರಹ ದಳದ (ಎಟಿಎಸ್‌) ಗುಂಡಿಗೆ ಬಲಿಯಾಗಿದ್ದ ಸೈಫುಲ್ಲಾನ ದೇಹವನ್ನು ಮಣ್ಣು ಮಾಡಲು ಆತನ ತಂದೆ ಹಿಂದೇಟು ಹಾಕಿದ್ದಾರೆ.
ಮಂಗಳವಾರದಂದು ಲಖನೌನಲ್ಲಿ ನಡೆದ ಕಾರ್ಯಾಚರಣೆ ವೇಳೆ ಬಲಿಯಾದ ಸೈಫುಲ್ಲಾನ ತಂದೆ ಸರ್ತಾಜ್‌ ಆತನ ದೇಹವನ್ನು ಪಡೆಯಲು ಹಿಂದೇಟು ಹಾಕಿದ್ದಾರೆ. 'ನಮ್ಮ ಪೂರ್ವಿಜರು ಭಾರತೀಯರು, ನಾವು ಭಾರತೀಯರು. ಹೀಗಾಗಿ ದೇಶಕ್ಕೆ ಅನ್ಯಾಯ ಎಸೆಗಲು ಬಯಸಿರುವ 'ದ್ರೋಹಿ' ನನ್ನ ಮಗನಾಗಿದ್ದರೂ ಆತನನ್ನು ಒಪ್ಪುವುದಿಲ್ಲ' ಎಂದು ಸರ್ತಾಜ್‌ ಹೇಳಿದ್ದಾರೆ.
ಸರ್ತಾಜ್‌ ಹಾಗೂ ಕುಟುಂಬಕ್ಕೆ ಸೈಫುಲ್ಲಾ ದೇಶದ್ರೋಹದ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಕೇಳಿ ಆಘಾತಕ್ಕೊಳಗಾಗಿದ್ದಾರೆ. ಸೈಫುಲ್ಲಾ ಕುಟುಂಬಕ್ಕೆ ಸೇನೆ ಬುಧವಾರ ಮುಂಜಾನೆ ಆತನ ಮರಣದ ಕುರಿತು ಮಾಹಿತಿ ರವಾನಿಸಿ ದೇಹವನ್ನು ಪಡೆದುಕೊಳ್ಳುವಂತೆ ಹೇಳಿದೆ.
ಸುಮಾರು ಮೂರು ತಿಂಗಳ ಹಿಂದೆ, ಕೆಲಸಕ್ಕೆ ಹೋಗುವುದಿಲ್ಲ ಎಂಬ ಕಾರಣಕ್ಕೆ ಸೈಫುಲ್ಲಾ ಮೇಲೆ ಕೈ ಮಾಡಿದ್ದೆ. ಇದರಿಂದ ಬೇಸರಗೊಂಡ ಆತ ಮನೆ ಬಿಟ್ಟು ತೆರಳಿದ್ದ. ತಾನು ಸೌದಿ ಅರೇಬಿಯಾಗೆ ತೆರಳಿ ಚಾಲಕನಾಗುವ ಆಸೆಯಿದೆ ಎಂದಿದ್ದ. ಸೋಮವಾರದಂದು ಆತನೇ ಕರೆ ಮಾಡಿ ಸೌದಿಯಲ್ಲಿ ಕೆಲಸ ಸಿಕ್ಕಿದ್ದು ತಾನು ತೆರಳುವುದಾಗಿ ಹೇಳಿದ್ದ' ಎಂದು ಸರ್ತಾಜ್‌ ಹೇಳಿದ್ದಾನೆ.
'ಆದರೆ ಆತ ದೇಶದ್ರೋಹದ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದಿಲ್ಲ. ನಾವು ಇಲ್ಲೇ ಹುಟ್ಟಿ ಬೆಳೆದಿದ್ದೇವೆ. ಈ ದೇಶಕ್ಕೆ ದ್ರೋಹ ಮಾಡಿವ ಯಾರೇ ಆಗಿರಲಿ ಆತನನ್ನು ನನ್ನ ಮಗ ಅಥವಾ ನಮ್ಮ ಸಂಬಂಧಿಯೇ ಆಗಿದ್ದರೂ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಸರ್ತಾಜ್‌ ಹೇಳಿದ್ದಾರೆ.
Source - udayavani
loading...

Post a Comment

Powered by Blogger.