veerakesari.in
ರಿಯಾಲಿಟಿ ಶೋನಲ್ಲಿ ಹಿಂದೂ ದೇವರನಾಮ ಹಾಡಿದ್ದಕ್ಕೆ ಮುಸ್ಲಿಂ ಯುವತಿ ಸುಹಾನ ಸಯೀದ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಹಾಗೂ ಮೌಲ್ವಿಗಳು ಸುಹಾನ ಪರ ನಿಂತಿದ್ದಾರೆ.
ಬುಧವಾರದಂದು ಸುಹಾನ ವಿಚಾರದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದ ಮೌಲ್ವಿಗಳು ಹಾಗೂ ಮುಸ್ಲಿಂ ಮುಖಂಡರು, ಸುಹಾನಗೆ ಪತ್ರ ಬರೆದು ನೈತಿಕ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
ಸುಹಾನ ತಪ್ಪು ಕೆಲಸ ಮಾಡಿಲ್ಲ. ಆಕೆಯನ್ನು ಒಬ್ಬ ಸ್ಫರ್ಧಿಯಾಗಿ ನೋಡಿ. ಆಕೆಯನ್ನು ಧರ್ಮದ ಚೌಕಟ್ಟಿನಲ್ಲಿ ಇಡಬಾರದು. ಆಕೆ ವಿರುದ್ಧ ಅಶ್ಲೀಲ ಪದ ಪ್ರಯೋಗ ಮಾಡಿದವರನ್ನು ಧರ್ಮದಿಂದ ಹೊರಗಟ್ಟುತ್ತೇವೆ. ಬುರ್ಖಾ ಹಾಕಿಕೊಂಡು ಭಕ್ತಿ ಗೀತೆ ಹಾಡಿದರೆ ಅದು ತಪ್ಪಲ್ಲ. ನಮ್ಮ ಧರ್ಮ ಇತರೆ ಧರ್ಮಗಳನ್ನು ಗೌರವಿಸುತ್ತೆ ಅಂತಾ ಹೇಳಿಕೆ ನೀಡಿದ್ದಾರೆ.
ಸುಹಾನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸಂದೇಶ ಹರಿಯಬಿಟ್ಟವರ ವಿರುದ್ಧ ಸೈಬರ್ ಕ್ರೈಂ ಗೆ ದೂರು ನೀಡಲು ಮುಸ್ಲಿಂ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ನಿರ್ಧರಿಸಿದ್ದಾರೆ.
Source - Public Tv
Source - Public Tv
loading...
Post a Comment