veerakesari.in
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಕ್ರಮ ಕಸಾಯಿಖಾನೆಗಳಿಗೆ ಬೀಗ ಹಾಕಿಸುತ್ತಿದ್ದಾರೆ, ಇದೇ ವೇಳೆ ಗುಜರಾತ್ ಸರ್ಕಾರ ಗೋಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತಂದಿದೆ.
ಗೋಹತ್ಯೆ ಮಾಡುವವರಿಗೆ 7 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸುವ ತಿದ್ದುಪಡಿ ಕಾಯಿದೆಗೆ ಗುಜರಾತ್ ವಿಧಾನಸಭೆ ಅನುಮೋದನೆ ನೀಡಿದೆ.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ,1954ರ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆ ಅನುಸಾರ ಗುಜರಾತ್ ನಲ್ಲಿ ಗೋಹತ್ಯೆ, ಸಾಗಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಗೋಹತ್ಯೆ ಸಂಬಂಧದ ಯಾವುದೇ ಅಪರಾಧಗಳಿಗೂ 2011 ರಲ್ಲಿ ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯಿದೆ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತಿತ್ತು.
2011ರ ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯಿದೆ ಅನ್ವಯ ಅಪರಾಧಿಗಳಿಗೆ 7 ವರ್ಷ ಜೀವಾವಧಿ ಶಿಕ್ಷೆ, 50 ಸಾವಿರ ರು ದಂಡ ಹಾಗೂ ವಾಹನ ಸೀಜ್ ಮಾಡಿದರೇ ಆರು ತಿಂಗಳ ಕಾಲ ವಾಹನದ ಸಂಚಾರ ರದ್ದುಗೊಳಿಸಬಹುದಾಗಿದೆ.
ದೇಶದಲ್ಲಿರುವ ಹಸುಗಳನ್ನು ರಕ್ಷಿಸಲು ಮುಂದಾಗಿರುವ ಗುಜರಾತ್ ಸರ್ಕಾರ ಗೋಹತ್ಯೆ ಮಾಡುವವರಿಗೆ 7 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸುವ ತಿದ್ದುಪಡಿ ಕಾಯಿದೆಯನ್ನು ಅನುಮೋದಿಸಿದ್ದು ಇಂದಿನಿಂದ ಕಾಯಿದೆ ಜಾರಿಯಾಗಿದೆ.
Source : Kannada Prabha
loading...
Post a Comment