veerakesari.in
ದೇಶದಲ್ಲಿ ಈಗಾಗಲೇ ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಸಂತ್ರಸ್ತ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಉತ್ತರಪ್ರದೇಶದ ಗರ್ಭಿಣಿ ಮಹಿಳೆಯೋರ್ವಳು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾಳೆ.
ಈಗಾಗಲೇ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ಶಗುಪ್ತಾ ಗರ್ಭಿಣಿಯಾಗಿದ್ದಾಳೆ. ಮೂರನೇ ಮಗು ಸಹ ಹೆಣ್ಣು ಆಗುತ್ತದೆ ಎಂಬ ಭಯದಲ್ಲಿ ಪತಿ ಶಮ್ಶದ್ ಸಯೀದ್ ಗರ್ಭಪಾತ ಮಾಡುಸುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ಒಪ್ಪದ ಶಗುಪ್ತಾಳನ್ನು ನಡುರೋಡಿನಲ್ಲಿ ಮನಬಂದಂತೆ ಥಳಿಸಿ, ಆಕೆಗೆ ಮೂರು ಸಲ ತಲಾಖ್ ಹೇಳಿ, ರಸ್ತೆಯಲ್ಲೇ ಸಾಯು ಅಂತಾ ಎಸೆದುಹೋಗಿದ್ದಾನೆ. ಇದರಿಂದ ನೊಂದು ಆಕೆ ಈ ಪತ್ರ ಬರೆದಿದ್ದಾಳೆ.
ನಾನು ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಬಿಜೆಪಿಗೆ ಮತ ಹಾಕಿದ್ದೇನೆ. ತ್ರಿವಳಿ ತಲಾಖ್ ನಿಷೇಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಮೂರನೇ ಮಗುವಿನ ಗರ್ಭಪಾತಕ್ಕೆ ಒಪ್ಪದ ಕಾರಣ ತ್ರಿವಳಿ ತಲಾಖ್ ಶಿಕ್ಷೆಗೊಳಗಾಗಿರುವೆ ಎಂದು ಆಕೆ ಹೇಳಿದ್ದಾಳೆ. ಜತೆಗೆ ನನಗೆ ನ್ಯಾಯ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇನೆ ಎಂದಿದ್ದಾಳೆ.
ಶಗುಪ್ತಾಳು ಬರೆದಿರುವ ಪತ್ರದ ಪ್ರತಿಗಳನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಲಾಗಿದೆ.
Source : Eenadu India
loading...
Post a Comment