Veerakesari 00:54
veerakesari.in
ಭಾರತದ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ಆದಿತ್ಯವಾರ ಪಂಜಾಬ್ ನ ಅಟ್ಟಾರಿ-ವಾಘಾ ಗಡಿಯಲ್ಲಿ ಅನಾವರಣಗೊಳಿಸಲಾಗಿದೆ.  ಈ ರಾಷ್ಟ್ರ ಧ್ವಜ ದೇಶದಲ್ಲಿಯೇ ಅತೀ ಎತ್ತರದಲ್ಲಿ ಹಾರಲಿದ್ದು, ಪಾಕಿಸ್ತಾನದ ಲಾಹೋರ್ ನಿಂದಲೂ ರಾಷ್ಟ್ರ ದ್ವಜ ಕಾಣಲಿದೆ. 
ಧ್ವಜಸ್ತಂಭ 360ಅಡಿ ಎತ್ತರವಿದೆ, ರಾಷ್ಟ್ರ ಧ್ವಜ 120ಅಡಿ ಉದ್ದ ಹಾಗೂ 80ಅಡಿ ಅಗಲವಿದೆ. ಧ್ವಜಸ್ತಂಭವೇ 55ಟನ್ ತೂಕ ಹೊಂದಿದೆ. ಧ್ವಜದ ನಿರ್ವಹಣೆಗಾಗಿ ಖಾಸಗೀ ಕಂಪನಿಗೆ ಮೂರು ವರ್ಷ ಗುತ್ತಿಗೆ ನೀಡಲಾಗಿದೆ.
ಗಡಿಯಲ್ಲಿ ರಾಷ್ಟ್ರಧ್ವಜ ಆನಾವರಣಗೊಳಿಸಿದ್ದಕ್ಕೆ ಪಾಕಿಸ್ತಾನ ಅಸಮದಾನ ವ್ಯಕ್ತಪಡಿಸಿದ್ದು, ಭಾರತ ಧ್ವಜಸ್ತಂಭದಲ್ಲಿ ಕ್ಯಾಮರಾ ಅಳವಡಿಸಿ ಪಾಕಿಸ್ತಾನದ ಮೇಲೆ ಬೇಹುಗಾರಿಕೆ ನಡೆಸುವ ಉದ್ದೇಶಕ್ಕೆ ಗಡಿಯಲ್ಲಿ ರಾಷ್ಟ್ರಧ್ವಜ ಅಳವಡಿಸಿದೆ ಎಂದಿದೆ. 
ಇದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್ ಬಿಜೆಪಿ ಹಿರಿಯ ನಾಯಕ ಅನಿಲ್ ಜೋಶಿ, ಭಾರತ ಗಡಿರೇಖೆಯಿಂದ 200 ಮೀಟರ್ ಒಳಗಡೆ ರಾಷ್ಟ್ರಧ್ವಜನ್ನು ಪ್ರತಿಷ್ಠಾಪಿಸಲಾಗಿದ್ದು, ಇದರಿಂದ ನಿಯಮಗಳ ಉಲ್ಲಂಘನೆ ಆಗುವುದಿಲ್ಲ. ಇದು ನಮ್ಮ ರಾಷ್ಟ್ರಧ್ವಜ, ನಮ್ಮ ರಾಷ್ಟ್ರಧ್ವಜವನ್ನು ನಮ್ಮ ನೆಲದಲ್ಲಿ ಹಾರಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ.
ಶೇರ್ ಮಾಡಿ.
loading...

Post a Comment

Powered by Blogger.