Veerakesari 04:40

ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶಕ್ತಿವಂತ, ಸಂಪನ್ನ ದೊರೆ ಎಂದು ಕರೆಸಿಕೊಳ್ಳುತ್ತಿದ್ದ ಅಕ್ಬರ್. ಅಂತಹ ಅಕ್ಬರನಿಗೆ ಸಡ್ಡು ಹೊಡೆದು ನಿಂತ ಸ್ವಾಭಿಮಾನಿ ಸಿಂಹವೇ ರಾಣಾಪ್ರತಾಪ.
ಎಂತಹ ಸ್ಥಿತಿ ಬಂದರೂ ರಜಪೂತರು ತಲೆ ಬಾಗುವದಿಲ್ಲಾ ಕೊನೆ ಉಸಿರಿರೋವರೆಗೂ ತಾಯ್ನಾಡು ಮಾತೃಭೂಮಿ ತಮ್ಮ ಧರ್ಮವನ್ನು ರಕ್ಷಿಸುತ್ತಾರೆ. ಹೀಗೆ ಗುಡುಗಿದ್ದು ಭಾರತೀಯ ಇತಿಹಾಸದ ಅಪ್ರತಿಮ ಶೂರ.

ಮಹಾರಾಣಾ ಪ್ರತಾಪ ಸಿಂಹ :

9ಮೇ ೧೫೪೦ ರಲ್ಲಿ ರಾಜಸ್ಥಾನದ ಮೇವಾಡದ ಸೂರ್ಯವಂಶದಲ್ಲಿ ಜನಿಸಿದ ಪ್ರತಾಪ್ ಸಿಂಹ ,ತನ್ನ ವಂಶದಲ್ಲಿ ನೀಡುವ ದಕ್ಷ ಮತ್ತು ಶೌರ್ಯ ಪರಾಕ್ರಮಿಗೆ ನೀಡುವ ರಾಣಾ ಹೆಸರಿನೊಂದಿಗೆ “ಮಹಾರಾಣ” ಎಂದೆನಿಸಿಕೊಂಡ.
ಬಾಲ್ಯದಿಂದಲೂ ಶೂರತನಕ್ಕೆ ಚತುರತೆಗೆ ಹೆಸರಾದ ಮಹಾರಾಣಾ ಪ್ರತಾಪಜೀ 1568 ರಿಂದ 1597 ರವರೆಗೆ 29 ವರ್ಷ ಕಾಲ ಸೂರ್ಯವಂಶಿಯ ಸಿಸೋದಿಯಾ ರಾಜವಂಶದ ರಜಪೂತ ಮನೆತನದ ಹೆಮ್ಮೆಯ ಪ್ರಜಾಹಿತ ರಾಜನಾಗಿ ಹಿಂದೂಧರ್ಮದ ರಕ್ಷಕನಾಗಿ ರಾಜ್ಯಭಾರ ಮಾಡಿದನು.
ಆ ಸಮಯದಲ್ಲಿ ಬಹುತೇಕ ಇಡೀ ಉತ್ತರಭಾರತವನ್ನೇ ತನ್ನ ಕೈವಶ ಮಾಡಿಕೊಂಡಿದ್ದ ಅಕ್ಬರ್. ಆದರೆ ಆತನಿಗೆ ಚಿಕ್ಕ ಮೇವಾಡವನ್ನು ತನ್ನ ತೆಕ್ಕೆಗೆ ಕೊಳ್ಳಲಾಗಿರಲಿಲ್ಲ. ಅಕ್ಬರನಾದರೋ ಅಸಂಖ್ಯ ಸೇನೆ, ಸಿರಿ-ಸಂಪತ್ತಿನಿಂದ ಮೆರೆಯುತ್ತಿದ್ದ ಶ್ರೀಮಂತ ಚಕ್ರವರ್ತಿ.
ಮಹಾರಾಣಾ ಪ್ರತಾಪ ಸಿಂಹ ಹೆಸರಿಗೆ ಅವನು ರಾಜ. ಆದರೆ ಆಳಲು ರಾಜ್ಯವಿರಲಿಲ್ಲ. ರಾಜ್ಯವನ್ನು ಗೆದ್ದುಕೊಳ್ಳಲು ಯುದ್ಧ ಮಾಡೋಣವೆಂದರೆ ಸೈನ್ಯವಿಲ್ಲ. ಸೈನ್ಯ ಕಟ್ಟೋಣವೆಂದರೆ ಕೈಯಲ್ಲಿ ಹಣವಿಲ್ಲ. ಯಾರಾದರೂ ರಾಜರ ಸಹಾಯ ಕೇಳೋಣವೆಂದರೆ ಅವರೆಲ್ಲಾ ನಾಚಿಕೆ, ಸ್ವಾಭಿಮಾನಗಳನ್ನು ತೊರೆದು ಅಕ್ಬರನಿಗೆ ಶರಣಾಗಿ ಅವನಿಗೆ ಡೊಗ್ಗು ಸಲಾಮು ಹೊಡೆಯುತ್ತಾ ತಮ್ಮ ರಾಜ್ಯ-ಸಿರಿ-ಸ್ತ್ರೀಯರನ್ನು ಅಕ್ಬರನಿಗೆ ಗಿರವಿ ಇಟ್ಟಿದ್ದಾರೆ.
ಪ್ರತಾಪನೋ ಬರಿಗೈ ದಾಸ. ಆವರೆಗೆ ಮೇವಾಡದ ರಾಣಾರಿಗೆ ಬೆಂಬಲವಾಗಿ ನಿಂತಿದ್ದ ಜೋಧಪುರ, ಅಂಬೇರ್, ಬಿಕಾನೀರ್, ಬುಂದೀ ಸಾಮ್ರಾಜ್ಯಗಳ ರಾಜರೆಲ್ಲರೂ ಅಕ್ಬರನ ಪಕ್ಷವಹಿಸಿದ್ದರು. ಅರಣ್ಯವೇ ಅವನಿಗೆ ಅರಮನೆ. ಯಾವಾಗ ಎಲ್ಲಿಂದ ದಾಳಿ ನಡೆಯುತ್ತದೋ ಎಂದು ಎಚ್ಚರಿಕೆಯಿಂದ ಗಮನಿಸುತ್ತಾ, ಮುನ್ಸೂಚನೆ ಇಲ್ಲದೆಯೇ ವಾಸಸ್ಥಳ ಬದಲಾಯಿಸಬೇಕಾದ ಪರಿಸ್ಥಿತಿ. ಕೆಲವೊಮ್ಮೆ ಅಡುಗೆ ಮಾಡಲು ಯಾವ ಧಾನ್ಯವೂ ಸಿಗುತ್ತಿರಲಿಲ್ಲ. ಕಾಡಿನಲ್ಲಿ ಏನಾದರೂ ಸಿಕ್ಕರೆ ಸರಿ, ಇಲ್ಲದಿದ್ದಲ್ಲಿ ಬರೀ ಹೊಟ್ಟೆಯೇ ಗತಿ. ಒಮ್ಮೊಮ್ಮೆ ಊಟಕ್ಕೆ ಕುಳಿತ ಕೂಡಲೇ ಶತ್ರುಗಳು ಬರುವುದನ್ನು ತಿಳಿದು ಎತ್ತಿದ ತುತ್ತನ್ನು ಬಾಯಲ್ಲಿಡದೆ ಕರದಲ್ಲಿ ಖಡ್ಗ ಹಿರಿದು ಬರಿದೇ ಓಡಬೇಕಾದ ದುಃಸ್ಥಿತಿ. ಗುಹೆಗಳಲ್ಲೋ, ಕಣಿವೆಗಳಲ್ಲೋ ಮಡದಿ ಮಕ್ಕಳನ್ನು ಬಚ್ಚಿಡಬೇಕಾದ ಅನಿವಾರ್ಯತೆ. ಅರಾವಳಿ ಬೆಟ್ತಗಳ ಮರಗಳಿಗೆ ರಾಜಕುಮಾರರ ಉಯ್ಯಾಲೆಗಾಗಿ ಕಟ್ಟಿದ ಕೊಕ್ಕೆಗಳು ಇಂದಿಗೂ ಇವೆ. ಒಮ್ಮೆಯಂತೂ ಐದು ಬಾರಿ ಒಲೆ ಹೊತ್ತಿಸಬೇಕಾಯಿತು. ದೇಶಭಕ್ತ ವೀರರನ್ನು, ವನವಾಸಿ ಭಿಲ್ಲರನ್ನು ಸಂಘಟಿಸಿ ಶತ್ರು ಸೈನ್ಯದ ಮೇಲೆ ಮುಗಿಬಿದ್ದು ಪ್ರಚಂಡವಾಗಿ ಹೋರಾಡಿದರೂ ನೂರು-ಸಾವಿರ ಸಂಖ್ಯೆಯಲ್ಲಿ ಅವನ ಸೈನ್ಯಕ್ಕೆ ನಷ್ಟವಾಗುತ್ತಿತ್ತು. ಆ ನಷ್ಟವನ್ನು ಭರಿಸಲು ಮತ್ತೆ ಸಮಯ ಹಿಡಿಯುತ್ತಿತ್ತು.
ಪ್ರತಾಪನನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಅಕ್ಬರ್ ನಾನಾ ತಂತ್ರಗಳನ್ನು ಹೂಡಿದ. ಅದಕ್ಕಾಗಿ ಯಾವ ಉಡುಗೊರೆಯನ್ನಾದರೂ ಕೊಡುವುದಾಗಿ ಪದೇ ಪದೇ ರಾಯಭಾರ ಕಳುಹಿಸಿದ. ಬೇರಾವ ಹಿಂದೂ ರಾಜರಿಗೆ ನೀಡದಂತಹ ವಿಶೇಷ ಸ್ಥಾನಮಾನ ನೀಡುವುದಾಗಿ ಪ್ರಲೋಭನೆಯೊಡ್ಡಿದ. ಪ್ರತಾಪ ಬಗ್ಗಲಿಲ್ಲ.ಎಂತಹುದೇ ಸ್ಥಿತಿಯಲ್ಲೂ ವಿದೇಶೀಯನೊಬ್ಬನಿಗೆ ತಲೆಬಾಗಲಾರೆ ಎಂದುಬಿಟ್ಟರಾಜಾ ಮಾನ್ ಸಿಂಗ್ ಅಕ್ಬರನ ರಾಯಭಾರಿಯಾಗಿ ರಾಣಾ ಪ್ರತಾಪನನ್ನು ಓಲೈಸಿ ಒಪ್ಪಿಸಲೆಂದು ಬಂದಾಗ ಪ್ರತಾಪ ಆತನೊಡನೆ ಸಹಪಂಕ್ತಿ ಭೋಜನವನ್ನು ಮಾಡದೆ ಸ್ವಾಭಿಮಾನ ಮೆರೆದ.
ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಂಡು ಅಕ್ಬರನಿಗೆ ಡೊಗ್ಗು ಸಲಾಮು ಹಾಕುತ್ತಿದ್ದ ಹಿಂದೂ ರಾಜರು, ರಾಜ ಪ್ರಮುಖರು ಕೂಡಾ ಪ್ರತಾಪನ ಧೈರ್ಯ ಸಾಹಸಗಳಿಗೆ ಹೆಮ್ಮೆ ಪಡುತ್ತಿದ್ದರು.
ಬಲಿಷ್ಟ ಮೊಗಲ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡ ಪ್ರತಾಪ ಸಾಂಪ್ರದಾಯಿಕ ಯುದ್ಧ ತಂತ್ರವನ್ನು ಅನುಸರಿಸುತ್ತಿದ್ದರೆ ಮಿಕ್ಕ ರಾಜರಂತೆ ಅಕ್ಬರನ ಅಡಿಯಾಳಾಗಿರಬೇಕಿತ್ತೇನೋ. ಪರಿಸ್ಥಿತಿಯನ್ನನುಸರಿಸಿ ವ್ಯೂಹಗಳನ್ನು ಬದಲಾಯಿಸುತ್ತಾ, ಆತ್ಮಹತ್ಯಾ ಸದೃಶವಾದ ಹೋರಾಟದ ಪದ್ದತಿಗಳನ್ನು ವರ್ಜಿಸಿ ಪ್ರತಿಕೂಲತೆಗಳನ್ನು ಅನುಕೂಲತೆಗಳಾಗಿ ಪರಿವರ್ತಿಸಿ ಅಸಾಧಾರಣಾ ಜಾಣತನದಿಂದ, ತಾಳ್ಮೆಯಿಂದ, ಗೆರಿಲ್ಲಾ ಯುದ್ಧತಂತ್ರವನ್ನು ಅಳವಡಿಸಿದುದರಿಂದ ಪ್ರತಾಪನಿಗೆ ಅಕ್ಬರನ ಬೃಹತ್ ಸೇನೆಯನ್ನು ಕಾಲು ಶತಮಾನಗಳಿಗೂ ಅಧಿಕ ಕಾಲ ಎದುರಿಸಿ ಮಣ್ಣುಮುಕ್ಕಿಸಿ ವಿಜಯಪಥದಲ್ಲಿ ಸಾಗಲು ಸಾಧ್ಯವಾಯಿತು.
ಜೂನ್‌ 21 1576ರಂದು (ಇನ್ನೊಂದು ಲೆಕ್ಕಾಚಾರದ ಪ್ರಕಾರ ಜೂನ್‌ 18), ಈಗಿನ ರಾಜಸ್ಥಾನದಲ್ಲಿರುವ ಗೊಗುಂಡಾ ಸಮೀಪವಿರುವ ಹಲ್ಡಿಘಾಟಿಯಲ್ಲಿ ಎರಡು ಸೈನ್ಯಗಳು ಎದುರಾದವು. ಎರಡು ಸೈನ್ಯದ ನಿಖರ ಬಲಾಬಲದ ಲೆಕ್ಕಗಳಲ್ಲಿ ವ್ಯತ್ಯಾಸವಿದ್ದರೂ, ಮೊಘಲರ ಸೇನೆಯು ಪ್ರತಾಪ್‌ನ ಸೇನೆಗಿಂತ ಸಂಖ್ಯಾಬಲದಲ್ಲಿ ಮೀರಿಸಿತ್ತೆಂದು ಎಲ್ಲ ಮೂಲಗಳು ಹೇಳಿವೆ.. ರಜಪೂತಚರಿತ್ರಾಪುಟಗಳಲ್ಲಿ [[ಹಲ್ಡಿ ಘಾಟಿ ಕದನ]]ವು ಒಂದು ಐತಿಹಾಸಿಕ ಘಟನೆಯಾಗಿದ್ದು,ಯುದ್ಧವು ಕೇವಲ ನಾಲ್ಕು ಗಂಟೆಗಳಲ್ಲಿ ಕೊನೆಗೊಂಡಿತು. ಈ ಅಲ್ಪ ಅವಧಿಯಲ್ಲಿ, ಪ್ರತಾಪ್‌ನ ಕಡೆಯ ಸೈನಿಕರು ರಣರಂಗದಲ್ಲಿ ವೀರಾವೇಶದ ಸಾಹಸಕಾರ್ಯಗಳನ್ನು ಮಾಡಿದ್ದರು.
ಪ್ರತಾಪ್‌ ಸ್ವತಃ ಮಾನ್‌ ಸಿಂಗ್‌ನ ಮೇಲೆ ದಾಳಿಯನ್ನು ಮಾಡಿದನು: ಅವನ ಕುದುರೆ ಚೇತಕ್‌ ಮಾನ್‌ ಸಿಂಗ್‌ನ ಆನೆಯ ಸೊಂಡಿಲಿನ ಮೇಲೆ ಮೇಲೆ ತನ್ನ ಮುಂಗಾಲುಗಳನ್ನಿರಿಸಿತು ಮತ್ತು ಪ್ರತಾಪ್‌ ಮಾನ್‌ ಸಿಂಗ್‌ನ ಮೇಲೆ ಈಟಿಯನ್ನು ಎಸೆದನು. ಮಾನ್‌ ಸಿಂಗ್‌ ಈಟಿಗೆ ಬಲಿಯಾದ.
ಹಲ್ದೀಘಾಟ್ ನಲ್ಲಿ ಮೊಘಲರ 80ಸಾವಿರ ಯೋಧರ ಬೃಹತ್ ಸೈನ್ಯಕ್ಕೆದುರಾದಾಗ ಪ್ರತಾಪನ ಕಡೆ ಇದ್ದವರು ಬರೇ ಇಪ್ಪತ್ತು ಸಾವಿರ ಸೈನಿಕರು. ಆನೆಯ ಮೇಲೆ ಹಾರಿ ಮಾನ್ ಸಿಂಗನ ಮೇಲೆ ದಾಳಿ ಮಾಡಲು ಹೊರಟಾಗ ಪ್ರತಾಪನ ಕುದುರೆಗೆ ತೀವ್ರ ಗಾಯವಾಗಿ ಪರಿಸ್ಥಿತಿ ಬದಲಾಯಿತು.ಮಾರ್ವಾರಿ ತಳಿ ಕುದುರೆಯಾಗಿದ್ದ (ದೇಶೀಯ ಭಾರತೀಯ ತಳಿ) ಚೇತಕ್‌ ಬಿಳಿ ಕುದುರೆಯು, ಚಿಕ್ಕ ಕುತ್ತಿಗೆ, ಪೊದೆಯಂತೆ ದಟ್ಟವಾದ ಕೂದಲುಳ್ಳ ಬಾಲ, ಕಿರಿದಾದ ಬೆನ್ನು, ದೊಡ್ಡ ಕಣ್ಣುಗಳು, ಗಟ್ಟಿಮುಟ್ಟಾದ ಭುಜಗಳು, ಅಗಲವಾದ ಹಣೆ ಮತ್ತು ಎದೆಯನ್ನು ಹೊಂದಿತ್ತು. ಸುಂದರ ಮತ್ತು ಕಾವ್ಯಾತ್ಮಕವಾಗಿ ದೈವಸ್ವರೂಪಿ ಎಂದು ಪರಿಗಣಿಸಲಾದ ಈ ಕುದುರೆಯು ಸಮತೋಲಿತ ಸ್ನಾಯುಬಲದ ದೇಹ ಹೊಂದಿದ್ದು,ಜನ್ಮತಃ “ಹಾರುವ” ಕಾಲುಗಳೊಂದಿಗೆ ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ಚೇತಕ್‌ ಅಪರೂಪದ ತೀವ್ರ ಬುದ್ಧಿವಂತಿಕೆ,ಸಂಯಮ ಮತ್ತು ಧೈರ್ಯದ ಜತೆ ಒಡೆಯನಿಗೆ ಅತೀವ ನಿಷ್ಠೆಯನ್ನು ಹೊಂದಿತ್ತೆಂದು ವರ್ಣಿಸಲಾಗಿತ್ತು.
ಮಹಾರಾಣಾ ಪ್ರತಾಪ್‌ನ ಕುದುರೆ ಚೇತಕ್‌ ಹಳ್ಡಿಘಾಟಿ ಕದನದಲ್ಲಿ ಪರಾಕ್ರಮವನ್ನು ಮೆರೆದು ಸತ್ತಾಗ, ಪ್ರತಾಪ್‌ ಅಳುತ್ತಾನೆ ಹಾಗೂ ತನ್ನ ದೇವರನ್ನು ಪ್ರಾರ್ಥಿಸುತ್ತಾನೆ.
ಮೊಗಲರಿಗೆ ಗೆಲುವು ಸಿಕ್ಕಿದರೂ ಬಹುಪಾಲು ಸೈನ್ಯ ನಾಶವಾಗಿತ್ತು. ಪ್ರತಾಪ ತನ್ನ ಸೋಲು ಅನಿವಾರ್ಯ ಎಂದು ಅರಿವಾದಾಗ ಗೋಗೋಂಡ್ ಕೋಟೆಯನ್ನು ತೆರವುಗೊಳಿಸಿದ. ಗೆಲುವಿನಿಂದ ಉಬ್ಬಿ, ಕೊಬ್ಬಿ ಮೊಗಲರು ಕೋಟೆ ಪ್ರವೇಶಿಸಿದಾಗ ಅಲ್ಲಿ ನರಪಿಳ್ಳೆಯೂ ಇರಲಿಲ್ಲ! ಮುಂದೆ ಕುಂಭಲಗಢ, ಉದಯಪುರ ಕೋಟೆಗಳನ್ನು ಗೆದ್ದು ಪ್ರತಾಪನ ಬೆನ್ನ ಹಿಂದೆ ಬಿದ್ದು ಹಲವು ರೀತಿ ಬೇಟೆಯಾಡಿದರೂ ಸ್ವತಃ ತಾನೇ ಅಜ್ಮೀರ್ ನಲ್ಲಿ ಕುಳಿತು ಮೇಲ್ವಿಚಾರಣೆ ಮಾಡುತ್ತಾ ಮಗ ಸಲೀಂ ಸಹಿತ ಭಾರೀ ಸರದಾರರ ಸೈನ್ಯವನ್ನು ಉಪಯೋಗಿಸಿದರೂ ಪ್ರತಾಪನ ಎದುರು ಅಕ್ಬರನ ಆಟ ನಡೆಯಲಿಲ್ಲ. ಆಕ್ರಮಿಸಿದ ಕೋಟೆಗಳಲ್ಲಿ ನೆಲೆಸೋಣವೆಂದರೆ ಅನ್ನ-ನೀರು ಸಿಗುತ್ತಿರಲಿಲ್ಲ. ಕೋಟೆಯಿಂದ ಹೊರ ಬರೋಣವೆಂದರೆ ಪ್ರತಾಪ ಯಾವಾಗ ಯಾವ ದಿಕ್ಕಿನಿಂದ ಯಾವ ರೀತಿ ಆಕ್ರಮಣ ಮಾಡುತ್ತಾನೋ ತಿಳಿಯದ ಸಂಧಿಗ್ಧ ಸ್ಥಿತಿ. ಹಿಂದೆ ಹಿಂದೂ ರಾಜರ ಕೋಟೆಗಳಿಗೆ ಮುತ್ತಿಗೆ ಹಾಕಿ ಹಿಂಸಿಸುತ್ತಿದ್ದ ಮೊಘಲರ ತಂತ್ರವನ್ನು ಅವರಿಗೆ ತಿರುಗಿ ಪ್ರಯೋಗಿಸಿದ ಪ್ರತಾಪ! ತನ್ನ ರಾಜ್ಯದ ಪ್ರಜೆಗಳನ್ನು ಪರ್ವತ ಪ್ರದೇಶಗಳಿಗೆ ತೆರಳುವಂತೆ ಮಾಡಿದುದರಿಂದ ಮೊಘಲ್ ಸೈನ್ಯ ಅನ್ನ ನೀರು ಸಿಗದೆ ತಳಮಳಿಸಿತು. ದಿಲ್ಲಿಯಿಂದ ಬಂದ ಸಾಮಗ್ರಿಗಳಾಗಲೀ ಗುಜರಾತ್ ಬಂದರಿನಿಂದ ದೆಹಲಿಗೆ ಹೋಗುತ್ತಿದ್ದ ಅಮೂಲ್ಯ ವಸ್ತುಗಳೆಲ್ಲಾ ಪ್ರತಾಪನ ಗೆರಿಲ್ಲಾ ಸೈನ್ಯದ ವಶವಾಗುತ್ತಿತ್ತು.
ಹೀಗೆ ದಶಕಗಳ ಪರ್ಯಂತ ಹೋರಾಡಿದರೂ ಪ್ರತಾಪನನ್ನು ಗೆಲ್ಲದೆ ವಿಫಲನಾದ ಅಕ್ಬರ್  ಪ್ರತಾಪನನ್ನು ಮಣಿಸುವ ವಿಚಾರವನ್ನೇ ಕೈಬಿಟ್ಟ. ಅಷ್ಟರಲ್ಲಾಗಲೇ ಕಳೆದುಕೊಂಡ ಎಲ್ಲಾ ಕೋಟೆಗಳನ್ನು ವಶಪಡಿಸಿಕೊಂಡು, ಅಂಬೇರನ್ನು ಜಯಿಸಿ ಮಾನಸಿಂಗನ ದರ್ಪವನ್ನು ಮುರಿದು ಚಾವಂದ್ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮೇವಾಡಕ್ಕೆ ಮತ್ತೆ ಅಧಿಕಾರವನ್ನು ಒದಗಿಸಿಕೊಟ್ಟಿದ್ದ ಪ್ರತಾಪ. ಹಾಳುಬಿದ್ದಿದ್ದ ಊರುಗಳಲ್ಲೆಲ್ಲಾ ಜನವಸತಿ ಆರಂಭವಾಯಿತು. ಪಾಳುಬಿದ್ದಿದ್ದ ಹೊಲಗಳು ನಳನಳಿಸಿದವು. ವ್ಯಾಪಾರ ವಹಿವಾಟುಗಳೆಲ್ಲಾ ಆರಂಭಗೊಂಡು ನಗರಗಳಲ್ಲಿ ಸಿರಿ ಸಂಪತ್ತು ನೆಲೆಗೊಂಡಿತು. ಕಲಾ ಪೋಷಕನಾಗಿ, ಭವ್ಯಕಟ್ಟಡಗಳ ನಿರ್ಮಾತೃವಾಗಿ, ದಕ್ಷ ಪ್ರಜಾಪರಿಪಾಲಕನಾಗಿ ತನ್ನ ಐವತ್ತೇಳನೆಯ ವಯಸ್ಸಿನಲ್ಲಿ29 ಜನೇವರಿ 1597ರಂದು ಇಹಲೋಕ ತ್ಯಜಿಸಿದ ರಾಣಾಪ್ರತಾಪ. ಆದರೆ ಚಿತ್ತೋಡನ್ನು ಗೆಲ್ಲುವ ಅವನ ಕನಸು ಕನಸಾಗಿಯೇ ಉಳಿದಿತ್ತು. ಮರಣ ವಾರ್ತೆ ಕೇಳಿದಾಗ ಮತಾಂಧ ಅಕ್ಬರನೇ ಸ್ವತಃ ಕಣ್ಣೀರಿಟ್ಟಿದ್ದನೆಂದರೆ ರಾಣಾನ ಪ್ರತಾಪ ಎಷ್ಟಿದ್ದಿರಬಹುದು?
ಯಾವ ರೀತಿಯಿಂದ ನೋಡಿದರೂ ಪ್ರತಾಪ ಈ ರಾಷ್ಟ್ರ ಪೂಜಿಸಬೇಕಾದ ಮಹಾಪುರುಷ. ಸ್ವಾತಂತ್ರ್ಯಾಕಾಂಕ್ಷೆ, ಸ್ವಾಭಿಮಾನ, ರಾಷ್ಟ್ರೀಯ ಭಾವನೆ, ಭಾರತದ ಆಶೋತ್ತರ-ಧ್ಯೇಯೋದ್ದೇಶಗಳಿಗೆ ಆತ ಪ್ರತೀಕ. ಪ್ರತಾಪನಿಗಿದ್ದ ಧೈರ್ಯ-ಸಾಹಸ-ಸ್ವಾಭಿಮಾನ-ಸ್ಥೈರ್ಯ-ಮುನ್ನುಗ್ಗುವ ಸ್ವಭಾವ-ಸಮರ ನೈಪುಣ್ಯತೆ-ದಕ್ಷತೆ ಉಳಿದ ಹಿಂದೂ ರಾಜರಲ್ಲಿ ತಿಲಾಂಶವಾದರೂ ಇದ್ದಿದ್ದರೆ ನಮ್ಮ ಚರಿತ್ರೆಯೇ ಬದಲಾಗುತ್ತಿತ್ತು.
ಪ್ರಾಣ ಹೋದರೂ ಸರಿಯೆ, ವಿದೇಶೀಯನೊಬ್ಬನಿಗೆ ತಲೆಬಾಗಲಾರೆನೆಂಬ ಪ್ರತಿಜ್ಞೆ ಇತ್ತು. ಹಾಗಾಗಿಯೇ ಆತ ಕಾಡುಮೇಡುಗಳಲ್ಲಿ ಅಲೆಯುತ್ತಾ, ಬೆಟ್ಟಗಳಿಂದ ಬೆಟ್ಟಗಳಿಗೆ ಹಾರುತ್ತಾ, ಹಣ್ಣು ಹಂಪಲುಗಳಿಂದ ಸಂಸಾರದ ಹೊಟ್ಟೆ ಹೊರೆಯುತ್ತಾ, ಕ್ರೂರ ಮೃಗಗಳು ಅವುಗಳಿಗಿಂತಲೂ ಕ್ರೂರರಾದ ಮತಾಂಧ ರಾಕ್ಷಸರಿಂದ ಎಳೆಯ ಮಗು ಅಮರನನ್ನು ಕಾಪಾಡುತ್ತಾ, ಕಾಲು ಶತಮಾನಗಳ ಕಾಲ, ಇಡೀ ಉತ್ತರಾಪಥವನ್ನು ತನ್ನ ಪದಾಕ್ರಾಂತ ಮಾಡಿದ್ದ ಬೃಹತ್ ಮೊಘಲ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿ ನಿಂತು ಅಜೇಯನಾಗಿಯೇ ಉಳಿದು ರಾಷ್ಟ್ರದ ಪ್ರಜೆಗಳ ಹೃದಯದಲ್ಲಿ ಆರಾಧಿಸಲ್ಪಟ್ಟ.
ರಾಣಾ ಪ್ರತಾಪನ ಜೀವನದ ಕೆಲವು ಪ್ರಮುಖ ಘಟನಾವಳಿ…….
  • ಚಿಟಿಕೆ ಹೊಡೆಯುವಷ್ಟರಲ್ಲಿ ಮೆಚ್ಚಿನ ಕುದುರೆ ‘ಚೇತಕ’ ಮೇಲೆ ಕುಳಿತು ಶತ್ರು ಸೈನ್ಯದ ರುಂಡ ಚಂಡಾಡುತ್ತಿದ್ದ.
  • ಪ್ರತಾಪರ ಬರ್ಚಿ ತೂಕ್ ಬರೋಬ್ಬರಿ 80 ಕೆಜಿ ರಕ್ಷಾ ಕವಚ 80 ಕೆಜಿ ಒಟ್ಟಾರೆ ಕವಚ ಬರ್ಚಿ ಖಡ್ಗ ಢಾಲ್ ಸೇರಿ 270 ಕೆಜಿ ಇತ್ತು ಈಗಲೂ ಇವುಗಳನ್ನು ಉದಯಪುರದ ರಾಜಮನೆತನದ ಸಂಗ್ರಹಾಲಯದಲ್ಲಿ ಕಾಣಬಹುದು.
  • ಅಕ್ಬರ್ ಹೇಳಿದ್ದನಂತೆ ಒಂದು ವೇಳೆ ಮಹಾರಾಣಾ ಪ್ರತಾಪ ನನಗೆ ಶಿರಬಾಗಿದರೆ ಅರ್ಧ ಹಿಂದೂಸ್ತಾನದ ಉಸ್ತುವಾರಿ ನಿಡುತ್ತೆನೆ ನನ್ನ ಆಡಳಿತದ ಕೆಳಗೆ ರಾಜ್ಯಭಾರ ಮಾಡಲಿ ಎಂದು ಆಗ ಮಹಾರಾಣಾ ಎಂತಹ ಸ್ಥಿತಿ ಬಂದರೂ ರಜಪೂತರೂ ತಲೆ ಬಾಗುವದಿಲ್ಲ ಕೊನೆ ಉಸಿರಿರೋವರೆಗೂ ಮಾತೃಭೂಮಿ ರಕ್ಷಕನಾಗುತ್ತಾರೆ ಹೊರತು ಗುಲಾಮರಾಗೊಲ್ಲ ಎಂದು ಖಡಕ್ ಉತ್ತರ ನೀಡಿದ್ದನಂತೆ.
  • ಪ್ರತಾಪ ಸಿಂಹ್ 20 ವರ್ಷ್ ತನ್ನ ಮಹಲ್ ರಾಜವೈಭೋಗ ತೊರೆದು ಸೈನ್ಯ ಕಟ್ಟಲು ಕಾಡುಮೇಡು ಸುತ್ತಿದನು ರಾಜನ ಈ ಸ್ಥಿತಿಗೆ ಮರುಗಿ ‘ಲೋಹಾರ’ ಜನಾಂಗದ ಕೆಲವರು ತಮ್ಮ ಮನೆ ತೊರೆದು ಕಾಡಿನಲ್ಲಿ ರಾಜನಿಗಾಗಿ ಖಡ್ಗ ಬರ್ಚಿ ತಯಾರಿಸಲೂ ಹಗಲೂ ರಾತ್ರಿ ಶ್ರಮಿಸಿದರು ಈ ಜನಾಂಗ ಇಂದಿಗೂ ರಾಜಸ್ಥಾನದಲ್ಲಿ ‘ಗಾಡಿಯಾ ಲೋಹಾರ’ ಎಂಬ ಹೆಸರಿನೊಂದಿಗೆ ಇದೆ.
  • ಹಳದಿಘಾಟ್ (1576 ಜೂನ್ 18 ) ಯುದ್ದದ 300 ವರ್ಷಗಳ ನಂತರವೂ ಭೂಮಿಲಿ ಯುದ್ಧಸಾಮಾಗ್ರಿ ದೊರೆಯುತ್ತಿವೆ. 1985 ರಲ್ಲಿ ಉತ್ಖನನ ಸಮಯದಿ ಖಡ್ಗದ ರಾಶಿಯೆ ದೊರೆತಿತ್ತು.
  • ಮುಸ್ಲಿಂ ರಾಜರ ಉಪಟಳದಿಂದ ಬೇಸತ್ತಿದ್ದ ಮಹಾರಾಣಾ ತನ್ನ 8000 ಸೈನಿಕರೊಂದಿಗೆ 60,000 ಶತ್ರು ಸೈನ್ಯ ದೊಂದಿಗೆ ಹೋರಾಡಿ ಮೋಘಲರ 40000 ಸೈನ್ಯ ಸದೆಬಡಿದು ವಿಜಯಿಯಾಗಿದ್ದನ್ನು .
  • ಬಿಲ್ವಿದ್ಯೆಯಲ್ಲಿ ಪರಿಣಿತರಾದ ಆದಿವಾಸಿ ಭೀಲ್ ( ಬಿಲ್ಲವ) ಸಮೂದಾಯ ಸದಾ ಮಹಾರಾಣಾ ನೊಂದಿಗೆ ಇರುತ್ತಿತ್ತು. ಆಯೋಗದ ಸಮೂದಾಯ ಪ್ರತಾಪನನ್ನು ತಮ್ಮ ಮಗನಂತೆ ಕಾಣುತ್ತಿದ್ದರು ಮೇವಾಡದ ರಾಜಚಿಹ್ನೇಯಲ್ಲಿ ಒಂದು ಕಡೆ ರಜಪೂತರು ಇನ್ನೊಂದು ಕಡೆ ಈ ಸಮೂದಾಯದ ಚಿತ್ರವಿದೆ.
  • ಮಹಾರಾಣಾನ ಮೆಚ್ಚಿನ ಕುದುರೆ ‘ಚೇತಕ’ ಒಂದು ಸಂದರ್ಭದಲ್ಲಿ ತನ್ನ ಒಂದು ಕಾಲು ಮುರಿದಿದ್ದರೂ 26 ಅಡಿಯ ಬೆಟ್ಟ ಹಾರಿ ತನ್ನ ರಾಜನಿಗೆ ನಿಷ್ಟೆ ತೋರಿ ಸಾವನ್ನಪ್ಪಿತು ಅದು ವೀರಮರಣ ಅಪ್ಪಿದ ಸ್ಥಳದಲ್ಲಿ ‘ಖೋಡಿ ಇಮಲಿ’ ಎಂಬ ಗಿಡವನ್ನು ನೆಟ್ಟು ಅದಕ್ಕಾಗಿ ಮಂದಿರವನ್ನು ನಿರ್ಮಿಸಲಾಗಿದೆ.
  • ಮಹಾರಾಣಾ ಸಾವಿಗೂ ಮುನ್ನ ತಾನು ಕಳೆದುಕೊಂಡ ಪ್ರದೇಶದಲ್ಲಿ 85% ದಷ್ಟು ಮತ್ತೆ ಹೋರಾಡಿ ಗೆದ್ದುಕೊಂಡನು. ಇದಕ್ಕಾಗಿ ಮಹಾರಾಣಾನು 20 ವರ್ಷಗಳ ಕಾಲ ಕಾಡುಮೇಡು ಸುತ್ತಿ ಸೈನ್ಯ ಕಟ್ಟಿದ್ದನು.
  • ಮಹಾರಾಣಾ ಪ್ರತಾಪನ ಸೈನಿಕರು ಅಜಾನುಬಾಹು ದೇಹಿಗಳಾಗಿದ್ದರು.
  • ಮಹಾರಾಣಾನಿಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸಿದವನು ಜೈಮೇಲ್ ಮೆಡತಿಯಾ
  • ಅಪ್ರತಿಮ ಶೂರ ವೀರ ದೊರೆ ಮಹಾರಾಣಾ ಪ್ರತಾಪ ವೀರಭೂಮಿಗೆ ತನ್ನ ದೇಹ ಅರ್ಪಿಸಿದ್ದು 29 ಜನೇವರಿ 1597 ರ ಪುಣ್ಯ ದಿನದಲ್ಲಿ.
  • ಮಹಾರಾಣಾ ಮರಣದ ಕಾಲದಲ್ಲಿ ಅಕ್ಬರನೂ ಸಹ ಕಣ್ಣಿರು ಹಾಕಿದ್ದ
#ಮಹಾರಾಣಾ_ಪ್ರತಾಪಸಿಂಹರಿಗೆ
#ಶತ_ಶತ_ನಮನಗಳು
Article by : Mahesh Hiremath
Submit your article @ veerakesari.212@gmail.com or veerakesari FB
loading...

Post a Comment

Powered by Blogger.