ಸಿರಿಯಾ : ಮನಸ್ಸಿಗೆ ತುಂಬಾ ನೋವುಂಟು ಮಾಡೋ ಫೋಟೋಗಳು ಸಿರಿಯಾದಲ್ಲಿ ISIS ಮೇಲೆ ದಾಳಿಮಾಡಿದ ಯುಕೆ ಯ ಸೇನೆಗೆ ಉಗ್ರರ ಮೊಬೈಲ್ ಗಳಲ್ಲಿ ಸಿಕ್ಕಿದೆ.
ಯುವತಿಯರಿಗೆ ಅತ್ಯಂತ ಗೌರವ ನೀಡೋ.??? ಶರಿಯಾ ಲಾ ಅನ್ನು ಅಚ್ಚುಕಟ್ಟಾಗಿ ಪಾಲಿಸೋ ಇಸ್ಲಾಂ ನ ಹುಟ್ಟೂರು ಅರಬ್ ನ ಮಸಲ್ಮಾನ ದೊರೆಗಳ ಮುಂದೆ ಅನೇಕ ಯುವತಿಯರನ್ನು ಲೈಂಗಿಕ ಗುಲಾಮರಾಗಿ ಮಾರಲು ನಡೆಸಿದ ಹರಾಜು ಪ್ರಕ್ರಿಯೆಯ ಪೋಟೋಗಳು ಎಂದು ಸನ್ ಪತ್ರಿಕೆ ತಿಳಿಸಿದೆ. ಅಲ್ಲದೆ ಹರಾಜು ನಡೆದ ಸ್ಥಳ ಸೌದಿ ಅರೇಬಿಯಾ ಅನ್ನುವುದು ಇನ್ನೊಂದು ವಿಶೇಷ.
ಫೋಟೋ ಸಿಕ್ಕಿದ ಮೊಬೈಲ್ ಐಸಿಸ್ ಜಿಹಾದಿಗೆ ಸೇರಿದ್ದು ಆತನನ್ನು ಬ್ರಿಟಿಷ್ ಸೇನೆ ಇರಾಕಿನ ಅಲ್-ಅಹೀರ್ಕತ್ ನಗರದಲ್ಲಿ ಹತ್ಯೆ ಮಾಡಿದೆ. ಈ ನಗರವನ್ನು ಐಸಿಸ್ ಉಗ್ರರು 2014 ರಲ್ಲಿ ವಶಪಡಿಸಿಕೊಂಡಿದ್ದರು.
ಅರಬ್ ಕೂಡ ಐಸಿಸ್ ಮೇಲೆ ದಾಳಿ ಘೋಷಿಸಿರುವ ದೇಶಗಳಲ್ಲಿ ಒಂದು ಆದರೆ ಕೆಲವು ದಾಖಲೆಗಳ ಪ್ರಕಾರ ಅರಬ್ ದೇಶವೇ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವುದು ಎಂದು ತಿಳಿದು ಬಂದಿದೆ.
ಬ್ರಿಟಿಷ್ ಸೇನೆಯ ವಕ್ತಾರನೊಬ್ಬನ ಪ್ರಕಾರ :
“ಇದು ಸೌದಿ ಅರೇಬಿಯಾದಲ್ಲಿ ಆದ ಯುವತಿಯರ ಹರಾಜು ಪ್ರಕ್ರಿಯೆ, ಇಲ್ಲಿ ಮಾರಾಟ ಮಾಡಲಾದ ಯುವತಿಯರನ್ನು ಐಸಿಸ್ ಉಗ್ರರು ಸಿರಿಯಾದಿಂದ ಅಪಹರಿಸಿ ತಂದಿರೋದು. ಇದರಲ್ಲಿ ಹೆಚ್ಚು ಯುವತಿಯರು ಸಿರಿಯಾದ ಅಲ್ಪಸಂಖ್ಯಾತ ಯಜಿದಿ ಸಮುದಾಯಕ್ಕೆ ಸೇರಿದವರು. ಅವರನ್ನು ಸೌದಿ ದೊರೆಗಳಿಗೆ ಮಾರಿ ಬಂದ ದುಡ್ಡಿನಲ್ಲಿ ಐಸಿಸ್ ಶಸ್ತ್ರಾಸ್ತ್ರ ಕರೀದಿಸುತ್ತದೆ.ಇಂತಹ ಫೋಟೋಗಳು ಹಿಂದೆಯೂ ಅನೇಕ ಮೊಬೈಲ್ ಗಳಲ್ಲಿ ಕಂಡು ಬಂದಿದೆ” ಎಂದರು
ಹೌದು ಇಸ್ಲಾಮಿಕ್ ಉಗ್ರಸಂಘಟನೆ ಐಸಿಸ್ ಇಂತಹ ಕೃತ್ಯ ನಡೆಸುತ್ತಿರುವುದು ಮೊದಲನೇ ಬಾರಿಯಲ್ಲ. ಸಿರಿಯಾದಲ್ಲಿ ಸಿಕ್ಕ ಸಿಕ್ಕ ಯುವತಿಯರನ್ನು ಅತ್ಯಾಚಾರ ಮಾಡಿ ನಂತರ ಅವರನ್ನು ಉಳಿದ ಮುಸಲ್ಮಾನ ದೇಶಗಳಿಗೆ ಮಾರುತ್ತಾರೆ.
“ಜಿನಾನ್” ಅನ್ನು ಉತ್ತರ ಇರಾಕಿನ ಹಳ್ಲಿಯೊಂದರಿಂದ ಅಪಹರಿಸಲಾಗಿತ್ತು, ಐಸಿಸ್ ಉಗ್ರರು ಆಕೆಯ ಹಳ್ಳಿಯ ಮೇಲೆ ದಾಳಿಮಾಡಿ ಆಕೆಯನ್ನು ಅಪಹರಿಸಿ ಆಕೆಗೆ ಚಿತ್ರಹಿಂಸೆ ನೀಡಿತ್ತು, ಆಕೆಯಷ್ಟೇ ಅಲ್ಲ ಆಕೆಯ ಜೊತೆ ಇನ್ನೂ ಅನೇಕ ಯುವತಿಯರನ್ನು ದೊಡ್ಡ ಕೋಣೆಯಲ್ಲಿ ಬಂದಿಯಾಗಿ ಇಡಲಾಗಿತ್ತು. ಅಲ್ಲಿ ಕೇವಲ ಇರಾಕಿ, ಸಿರಿಯನ್ನರು ಅಷ್ಟೇ ಅಲ್ಲ ಸೌದಿ ಹಾಗೂ ವಿದೇಶಿ ಮಹಿಳೆಯರೂ ಇದ್ದರು.
“ಐಸಿಸ್ ಇಸ್ಲಾಮಿಕ್ ಉಗ್ರರ ಕರಾಳ ಮುಖ”
Post a Comment