Veerakesari 10:19
ಇರಾಕ್ :  ಪ್ರತಿಷ್ಟಿತ ವಿದೇಶಿ ಸುದ್ದಿ ಮಾದ್ಯಮವೊಂದರ ಪ್ರಕಾರ ಐಸಿಸ್ ಪ್ರಾಬಲ್ಯವಿರುವ ಉತ್ತರ ಇರಾಕಿನ ಮೊಸೂಲ್ ನಗರದಲ್ಲಿ ಉಗ್ರರು ತಮ್ಮ ಭದ್ರತೆಯ ದೃಷ್ಟಿಯಿಂದ ಮಹಿಳೆಯರು ಬುರ್ಕಾ ತೊಡುವುದನ್ನು ನಿಶೇದಿಸಿದ್ದಾರೆ. ಹಿಂದೆ ಇದೇ ಉಗ್ರರು ಬುರ್ಕಾ ಧರಿಸದ ಮಹಿಳೆಯರನ್ನು ಹೊಡೆದು ಕೊಂದು ಹಾಕುತ್ತಿದ್ದರು.
ಸಮಯಗಳಿಂದ ಐಸಿಸ್ ಹಿಂಸೆಯಿಂದ ರೋಸಿ ಹೋಗಿರುವ ಮಹಿಳೆಯರ ಗುಂಪೊಂದು ಬುರ್ಕಾ ಧರಿಸಿಕೊಂಡು ಅನೇಕ ಐಸಿಸ್ ನಾಯಕರ ಮೇಲೆ ದಾಳಿ ಮಾಡಿ ಕೊಂದುಹಾಕಿತ್ತು.ಇದರಿಂದ ಭಯಬೀತರಾಗಿರುವ ಜಿಹಾದಿ ಉಗ್ರರು ಮೊಸೂಲ್ ನಗರದಲ್ಲಿರುವ ಯಾವುದೇ ಕಟ್ಟಡಗಳಿಗೆ ಬುರ್ಕಾ,ಹಿಜಾಬ್ ಧರಿಸಿದ ಮಹಿಳೆಯರಿಗೆ ಪ್ರವೇಶದಿಂದ ನಿಶೇಧ ಹೇರಿದೆ.ಬುರ್ಕಾದ ಬದಲು ಹೊಸ ವಸ್ತ್ರ ಸಂಹಿತೆಯನ್ನು ಉಗ್ರರು ಜಾರಿಗೆ ತಂದಿದ್ದು ಕೈಗವಸುಗಳು (Gloves) ಹಾಗೂ ಮುಖ ಮುಚ್ಚಲು ತೆಳುವಾದ ಪಾರದರ್ಶಕ ಬಟ್ಟೆಗಳನ್ನು ಬಳಸಲು ಆದೇಶಿಸಿದೆ.ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಐಸಿಸ್ ಮಹಿಳೆಯರ ವಿಚಾರದಲ್ಲಿ ತುಂಬಾ ಕಟುವಾಗಿದೆ. ಇತ್ತೀಚೆಗೆ ಬಂದ ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ ಐಸಿಸ್ ಉಗ್ರರು ಲೆಕ್ಕವಿಲ್ಲದಷ್ಟು ಮಹಿಳೆಯರಿಗೆ ಲೈಂಗಿಕ ಶೋಷಣೆಗಳನ್ನು ಕೊಟ್ಟಿದ್ದಾರೆ, ಐಸಿಸ್ ಪ್ರಾಬಲ್ಯದ ಪ್ರದೇಶಗಳಲ್ಲಿ ಮಹಿಳೆಯರ ಮಾರಾಟ ಎಗ್ಗಿಲ್ಲದೆ ನಡೆಯುತ್ತೆ,ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ.ಹುಡುಗಿಯರು ವಿದ್ಯಾಭ್ಯಾಸ ಮಾಡುವಂತಿಲ್ಲ, ಅನಾರೋಗ್ಯವಿದ್ದರೂ ಮಹಿಳೆಯರು ಆಸ್ಪತ್ರೆಗೆ ಹೋಗುವ ಹಾಗಿಲ್ಲ.
“ಇದರಿಂದ ಅನೇಕ ಮಹಿಳೆಯರು ತಮ್ಮನ್ನು ತಾವೇ ಕೊಲ್ಲೋವಷ್ಟು ರೋಸಿ ಹೋಗಿದ್ದಾರೆ ,ಎಲ್ಲಾ ಮಹಿಳೆಯರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ” ಎಂದು ವರದಿ ಪ್ರಕಟಿಸಿದೆ.
ಅನೇಕ ಸಂಪ್ರದಾಯವಾದಿ ದೇಶಗಳು ಈಗಾಗಲೇ ಉಗ್ರವಾದಕ್ಕೆ ಹೆದರಿ ಬುರ್ಕಾವನ್ನ ನಿಶೇದಿಸಿದೆ. ಮುಸಲ್ಮಾನರು ಇದರ ವಿರುದ್ದ ಪ್ರತಿಭಟಿಸಿದ್ದಾರೆ,ಸರ್ಕಾರ ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದಿದ್ದಾರೆ. ಆದರೆ ಸರ್ಕಾರಗಳು ದೇಶದ ಭದ್ರತೆಯ ದೃಷ್ಟಿಯಿಂದ ಇವರ ಮಾತುಗಳಿಗೆ ಮಣ್ಣನೆ ಕೊಟ್ಟಿಲ್ಲ.
2015 ಚೀನಾ ಸರ್ಕಾರ ಚೀನಾದ ಕ್ಷಿನ್ಜಿಯಾಂಗ್ ನಗರದಲ್ಲಿ ಮುಸಲ್ಮಾನ ಮಹಿಳೆಯರು ಬುರ್ಕಾ ದರಿಸುವುದನ್ನು ನಿಶೇದಿಸಿತು, ಈ ಪ್ರದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದ್ದ ಕಾರಣ ಸರ್ಕಾರ ಈ ದಿಟ್ಟ ನಿಲುವನ್ನು ಕೈಗೊಂಡಿತ್ತು.
ಫ್ರಾನ್ಸ್ ಕೂಡ ಮುಖ ಮುಚ್ಚುವ ಬಟ್ಟೆಗಳನ್ನು 2011 ರಲ್ಲಿ ನಿಶೇದಿಸಿತ್ತು. ಬೆಲ್ಜಿಯಂ, ಬ್ರಸೆಲ್ ಕೂಡ ಇದೇ ಸಮಯದಲ್ಲಿ ಮುಖ ಮುಚ್ಚೋ ಬುರ್ಕಾಗಳಿಗೆ ನಿಷೇಧ ಹೇರಿತ್ತು.
ಇರಾನ್ ಮತ್ತು ಸೌದಿ ಅರೇಬಿಯಾದಲ್ಲಿ ಬುರ್ಕಾ ಧರಿಸುವುದು ಖಡ್ಡಾಯವಾಗಿದೆ. ಆದರೆ ಅನೇಕ ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಮುಖ ಮುಚ್ಚೋ ಬುರ್ಕಾಗಳಿಗೆ ದೇಶದ ಭದ್ರತೆ ದೃಷ್ಟಿಯಿಂದ ನಿಶೇಧ ಹೇರೋ ಬಗ್ಗೆ ಚರ್ಚೆ ನಡೀತ ಇದೆ.
ಸಿರಿಯಾ ಸರ್ಕಾರ 2010 ರಲ್ಲಿ ವಿಶ್ವವಿದ್ಯಾಲಯಗಳಲ್ಲಿ ಶಾಲುಗಳಿಗೆ ನಿಶೇದ ಹೇರಿತ್ತು.2015 ರಲ್ಲಿ ಬುರ್ಕಾ ನಿಶೇದದ ಬಗ್ಗೆ ನಿರ್ಧಾರ ಕೈಗೊಂಡ ತುನೀಸಿಯಾ (Tunisia) ದೇಶದಲ್ಲಿ ನಡೆದ ಪ್ರತಿಭಟನೆಗಳಿಂದ ಅದು ರದ್ದುಗೊಂಡಿತ್ತು.
ಮಂಗಳೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಸಮಾನ ವಸ್ತ್ರ ಸಂಹಿತೆಗಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟವನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

Post a Comment

Powered by Blogger.