Veerakesari 09:42
ಕ್ರಾಂತಿಕಾರಿ ಭಗತ್ ಸಿಂಗ್ ರವರ 109 ನೇ ಜನ್ಮದಿನಾಚರಣೆಯ ಶುಭಾಶಯಗಳು
ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಹೀಗೆ ಬೇರ್ಯಾರು ಹೇಳಿದ್ದಲ್ಲ ಸ್ವತಂತ್ರದ ಕಿಡಿ ಯುವಕರ ಕಿಚ್ಚು   ಸರ್ದಾರ್ ಭಗತ್ ಸಿಂಗ್
ಇಂತಹ ಕ್ರಾಂತಿಯ ಕೀಡಿಯ ಬಗ್ಗೆ ಒಂದಿಷ್ಟು 
ತನ್ನ ಇಪ್ಪತ್ತಮೂರನೆ ವಯಸ್ಸಿಗೆ ದೇಶಕ್ಕಾಗಿ ನಗುನಗುತ್ತಾ ನೇಣು ಹಗ್ಗಕ್ಕೆ ಕೊರಳುಪೊಣಿಸಿದ ವೀರ.
ಸಿಂಗ್ ಹುಟ್ಟಿದ ದಿನವೇ ಅತನ ಚಿಕ್ಕಪ್ಪಂದಿರರು ಸ್ವಾಂತಂತ್ರ್ಯ ಹೋರಾಟದಲ್ಲಿ ಜೈಲುಪಾಲಾಗಿದ್ದ ಅಜಿತ್ ಸಿಂಗ್ ಮತ್ತು ಸ್ವರ್ಣ ಸಿಂಗ್ ರು ಬಿಡುಗಡೆಯಾದ ದಿನವಿದು.
ವಿದ್ಯಾರ್ಥಿ ಯಾಗಿದ್ದಾಗಲೆ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕ್ಕಿದ್ದ ಈ ದೇಶದ ಸ್ಪೂರ್ತಿ.
ತನ್ನ ಹನ್ನೆರಡನೆ ವಯಸ್ಸಿನಲ್ಲಿ ಜಲಿಯನ್ ವಾಲಬಾಗ್ ನ ದುರಂತ ನಡೆದ ಸ್ಥಳದ ರಕ್ತ ಸಿಕ್ತವಾದ ಮಣ್ಣನ್ನು ತಂದು ಪ್ರತಿದಿನ ಪೂಜಿಸುತ್ತಿದ್ದ ಕ್ರಾಂತಿಯ ಕಿಡಿ ಇದೆ ಮುಂದೆ ಅವರ ಸ್ವಾತಂತ್ರ್ಯ ದ ಹೋರಾಟದ ಕಿಚ್ಚಾಯಿತು.
ತನಗೆ ಬಾಲ್ಯ ವಿವಾಹ ಮಡುತ್ತಾರೆಂದು ತಿಳಿದ ಮೇಲೆ ಮನೆಯಿಂದ ಪರಾರಿಯಾಗಿ ಬಾಲ್ಯವಿವಾಹ ವಿರೋಧಿ ಎಂದು ಸಾಬೀತು ಪಡಿಸಿದ ಧೀಮಂತ.
ನನನ್ನು ಸುಡಬಹುದು ತುಂಡರಿಸಬಹುದು ಅದರೆ ನನ್ನ ಚಿಂತನೆ, ಸ್ಪೂರ್ತಿಯನ್ನು ನಾಶಪಡಿಸಲಾಗದು ಎಂದು ಹೇಳಿದ್ದ ಭಗತ್
ಭಾರತೀಯ ಹೋರಾಟಗಾರರ ಇನ್ ಕ್ವಿಲಾಬ್ ಜಿಂದಾಬಾದ್ ಮೊದಲು ಘೋಷಣೆ ಮಾಡಿದ್ದು ಈ ಮಹಾಪುರುಷನೇ.
ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಐದು ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಿದ್ದರು.(ಪಂಜಾಬಿ, ಹಿಂದಿ,ಬಂಗಾಳಿ,ಉರ್ದು, ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತ ಸಾದಿಸಿದ್ದರು)
ದಿಲ್​ಸೇ ನಿಕಲೇಗೀ ನ ಮರ್​ಕರ್ ಭೀ ವತನ್ ಕೀ ಉಲ್​ಫತ್ 
ಮೇರೀ ಮಿಟ್ಟೀಸೇ ಭೀ ಖುಷ್​ಬೂ ಏವತನ್ ಆಯೆಗೀ
ಅರ್ಥ
ನನ್ನ ಸಾವಿನ ನಂತರವೂ ನನ್ನ ಹೃದಯವು ನನ್ನ ತಾಯಿ ನಾಡಿನ ಪರಿಮಳವನ್ನೇ ಹೊರಸೂಸುತ್ತದೆ. ನನ್ನ ಮಣ್ಣಿನಿಂದ ಈ ತಾಯಿನಾಡಿನ ಸುವಾಸನೆಯೇ ಹೊರಹೊಮ್ಮುವುದು ಎಂದು ಘಂಟಾಘೋಷವಾಗಿ ಬ್ರಿಟಿಷ್ ಅಧಿಕಾರಿಗೆ ಹೇಳಿದ್ದ ಭಗತ್ 
ದೇಶಕಂಡ ಇಂತಹ ಅದ್ಭುತ ಸ್ವಾತಂತ್ರ್ಯ ಹೋರಾಟಗಾರನ 109ನೇ ಜನಮದಿನವಿಂದು .
(ಯುಗದ್ರಷ್ಟ ಭಗತ್ ಸಿಂಗ್’ ಎಂಬ ಪುಸ್ತಕದಿಂದ)
ಸ್ವಾತಂತ್ರ ಹೋರಾಟದ ಕೀಚ್ಚಾಗಿದ್ದ  ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ಗೆ ಕೋಟಿ ಕೋಟಿ ನಮನಗಳು

Post a Comment

Powered by Blogger.