Veerakesari 10:33
ಉತ್ತರ ಕನ್ನಡ :  ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಪ್ರಯತ್ನಗಳನ್ನು ಮಾಡುತ್ತಿದೆ. 2008 ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಗೋಕರ್ಣ ಕ್ಷೇತ್ರದ ನಿರ್ವಹಣೆ ಮತ್ತು ಅಧಿಕಾರವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿದ್ದರು, ಅಲ್ಲದೆ ಈ ವಿಷಯದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದೆಂದು ಆದೇಶ ಹೊರಡಿಸಿದ್ದರು. ಆದರೆ ನಮ್ಮ ಲೂಟಿಕೋರ ಕಾಂಗಿಗಳು ಈಗ ಆ ಆದೇಶ ರದ್ದು ಪಡಿಸಿ ಗೋಕರ್ಣ ಕ್ಷೇತ್ರವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.
ಸರ್ಕಾರ ಸುಪರ್ದಿಗೆ ತೆಗೆದುಕೊಂಡರೆ ಯಾರಿಗೆ ಲಾಭ…???
ಸರ್ಕಾರ ಗೋಕರ್ಣ ಕ್ಷೇತ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ ದೇವಾಲಯಕ್ಕೆ, ಭಕ್ತಾಧಿಗಳಿಗೆ ಯಾವುದೇ ಲಾಭವಿಲ್ಲ. ಲಾಭ ಕೇವಲ ಅಲ್ಪಸಂಖ್ಯಾತರು ಅಂತ ಅನ್ನಿಸಿಕೊಂಡಿರುವವರಿಗೆ. ಈಗಾಗಲೇ ಸುಪರ್ದಿಗೆ ತೆಗೆದುಕೊಂಡ ಅನೇಕ ದೇವಾಲಯಗಳ ಸ್ಥಿತಿ ಎಲ್ಲರಿಗೂ ತಿಳಿದೇ ಇದೆ, ಭಕ್ತಾದಿಗಳು ದೇವಾಲಯದ ಅಭಿವೃದ್ದಿಗೆ, ಜೀರ್ಣೋದ್ಧಾರಕ್ಕೆ ಹಾಕೋ ಹಣವನ್ನು ನಮ್ಮ ಮಾನಗೆಟ್ಟ ಸರ್ಕಾರಗಳು ದೇವಾಲಯಕ್ಕೆ ಬಳಸೋ ಬದಲು ಅಲ್ಪಸಂಖ್ಯಾತರ ತೀರ್ಥ ಯಾತ್ರೆಗೆ ಬಳಸುತ್ತದೆ. 
“ಹೀಗಾಗಿ ಗೋಕರ್ಣವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಿಂದ ರಕ್ಷಿಸುವುದೂ ಹಿಂದೂಗಳಾದ ನಮ್ಮ ಕರ್ತವ್ಯ”
ದೇವಾಲಯ ಭಕ್ತಾದಿಗಳ ಆಸ್ತಿ ಅದು ಸರ್ಕಾರದ ಸ್ವತ್ತಲ್ಲ ಅದರ ಹಣ ದೇವಾಲಯದ ಅಭಿವೃದ್ಧಿಗೆ ಬಳಸಬೇಕು. ಹಾಗಾಗಿ ಮಠ ಆಡಳಿತ ನಡೆಸುವುದರಿಂದ ಯಾರಿಗಾದರು ತೊಂದರೆ ಇದ್ದರೆ ದೇವಳದ ಭಕ್ತಾದಿಗಳೆಲ್ಲ ಸೇರಿ ದೇವಾಲಯದ ಹೆಸರಿನಲ್ಲಿ ಹೊಸ ಟ್ರಸ್ಟ್ ಓಪನ್ ಮಾಡಿ ಅದಕ್ಕೆ ನಂಬಿಕಸ್ತ ಜನರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರ ಕೈಗೆ ದೇವಾಲಯದ ಆಡಳಿತ ವಹಿಸಬೇಕು. ಆದರೆ ಸರ್ಕಾರ ಈ ವಿಷಯದಲ್ಲಿ ತಲೆ ಹಾಕುವ ಅವಶ್ಯಕತೆ ಇಲ್ಲ . 
ಕೈಲಾಗದ ಸರ್ಕಾರಗಳು…?
ಸರ್ಕಾರಕ್ಕೆ ನಿಜವಾಗಿಯೂ ಧೈರ್ಯ ಅಂತ ಇದ್ದರೆ ಅದು ಮೊದಲಿಗೆ ಮಸೀದಿ, ಚರ್ಚುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿ, ಆ ಹಣ ಸರಿಯಾದ ಒಳ್ಳೇ ಕೆಲಸಗಳಿಗೆ ಬಳಸಲಿ, ಆಗಲಾದರೂ ಸ್ವಲ್ಪ ಮಟ್ಟಿಗೆ ಭಯೋತ್ಪಾದನಾ ಕೃತ್ಯಗಳು,  ಮತಾಂತರದಂತಹ ಪಿಡುಗುಗಳು ಕಡಿಮೆಯಾಗಬಹುದು.

Post a Comment

Powered by Blogger.