
* ಪಾಕಿಸ್ಥಾನಕ್ಕೆ ನೇರವಾಗಿ ಹೇಳುತ್ತಿದ್ದೇನೆ, ನಿಮ್ಮ ಬಳಿ POK ಇದೆ ಸಂಭಾಳಿಸಲಾಗುತ್ತಿಲ್ಲ, ನಿಮ್ಮಬಳಿ ಬಾಂಗ್ಲಾದೇಶವಿತ್ತು ಸಂಭಾಳಿಸಲಾಗಲಿಲ್ಲ, ಸಿಂಧ್, ಬಲೂಚಿಸ್ಥಾನ ನಿಮ್ಮ ಬಳಿ ಇವೆ ಅವುಗಳನ್ನು ಸಂಭಾಳಿಸಲಾಗುತ್ತಿಲ್ಲ, ಕಾಶ್ಮಿರದ ಬಗ್ಗೆ ದ್ವೇಷದ ಮಾತುಗಳನ್ನಾಡಿ ಕಾಶ್ಮಿರದ ಜನರನ್ನು ಮರಳು ಮಾಡಲಾಗುತ್ತಿದೆ.
* ಜನ ಸಂಘ, ಬಿಜೆಪಿ ಕಾರ್ಯಕರ್ತರು ಇಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ, ಇನ್ನೂ ಪಡುತ್ತಿದ್ದಾರೆ. ಬಿಜೆಪಿ ಇಲ್ಲಿ ಆಡಳಿತದಲ್ಲಿಲ್ಲ ಆದರೂ ಕಾರ್ಯಕರ್ತರು ಇನ್ನೂ ನಮ್ಮ ಬೆಂಬಲಕ್ಕಿದ್ದಾರೆ.
* ಹಿಂದುಸ್ಥಾನದ ಯಾವತ್ತೂ ಉಗ್ರಗಾಮಿಗಳ ಎದುರು ತಲೆ ತಗ್ಗಿಸಿಲ್ಲ ಇನ್ನೂ ತಗ್ಗಿಸುವುದಿಲ್ಲ. ಉಗ್ರಗಾಮಿಗಳ ವಿರುದ್ಧ ನಮ್ಮ ಹೋರಾಟ ಹೀಗೇ ಮುಂದುವರೆಯುತ್ತದೆ.
* ನಮ್ಮ ಹುತಾತ್ಮ ಸೈನಿಕರು ದೇಶ ರಕ್ಷಣೆಗಾಗಿ ಪ್ರಾಣ ತೆತ್ತಿದ್ದಾರೆ, ಅವರ ಬಗ್ಗೆ ಹೆಮ್ಮೆ ಇದೆ.
* ಉಗ್ರವಾದ ಸಮಾಜಕ್ಕೆ ಮಾರಕ, ಎಲ್ಲರು ಜೊತೆಗೂಡಿ ಅದನ್ನು ನಾಶಪಡಿಸಬೇಕು.
* 18 ಜನ ಸೈನಿಕರ ಪ್ರಾಣದ ಬೆಲೆ ಬೇಗನೆ ತೆರಳಿದ್ದೀರಿ, ಅವರ ಪ್ರಾಣದ ಬಲಿದಾನ ನಾವು ಭಾರತೀಯರು ಸರಳವಾಗಿ ಮರೆಯುವುದಿಲ್ಲ.
* ಏಷ್ಯಾದಲ್ಲಿ ನಿಮ್ಮದು (ಪಾಕಿಸ್ತಾನ) ಟೆರರಿಷ್ಟ್ ಹುಟ್ಟುಹಾಕುವ ದೇಶವಾಗಿದೆ.ಏಷ್ಯಾದಲ್ಲಿ ಎಲ್ಲೆ ಉಗ್ರ ದಾಳಿ ಆದರು ಮೊದಲು ಕೇಳಿ ಬರೋದು ಇದೇ ದೇಶದ ಹೆಸರು.
* ಪಾಕಿಸ್ಥಾನದ ಜನರಿಗೆ ಕೇಳುತ್ತೇನೆ, 1947ರ ಮೊದಲ ಸಂಯುಕ್ತ ಭಾರತವಿತ್ತು, ನಿಮ್ಮ ಪೂರ್ವಜರೆಲ್ಲರು ಭಾರತಕ್ಕೆ ನಮನ ಸಲ್ಲಿಸಿದ್ದಾರೆ,
* ಪಾಕಿಸ್ಥಾನದ ಯುವಕರೇ ಕೇಳುತ್ತಿದ್ದೇನೆ,ನಿಮ್ಮ ನಾಯಕರುಗಳ ಕೇಳಿ, ಭಾರತದಿಂದಲೇ ಸಾಫ್ಟವೇರ್ ಇಂಜಿನೀಯರರನ್ನು ರಪ್ತುಗೊಳಿಸುತ್ತಿದ್ದಾರೆ, ಪಾಕಿಸ್ಥಾನ ಟೆರರಿಷ್ಟ್ ಗಳನ್ನು ರಪ್ತುಗೊಳಿಸುತ್ತಿದೆ,
* ಪಾಕಿಸ್ಥಾನದ ಯುವಕರೇ…ಬನ್ನಿ ಸಿದ್ಧರಾಗಿ ಯುದ್ಧಕ್ಕೆ, ಹೋರಾಡೋಣ, ಬಡತನ , ಅನಕ್ಷರಸ್ಥೆಯನ್ನು, ನೀರುದ್ಯೋಗಿಯನ್ನು ಕಿತ್ತೊಗೆಯಲು ಯುದ್ಧ ಮಾಡೋಣ ಯಾವ ದೇಶದ ಯುವಕರು ಗೆಲ್ಲುತ್ತಾರೆ ನೋಡೊಣ,
* ಪಾಕಿಸ್ಥಾನದ ನಾಯಕರೇ, ನಿಮ್ಮ ದೇಶ ಎಷ್ಯಾದಲ್ಲಿ ಟೆರರಿಷ್ಟರನ್ನು ಉತ್ಪಾದಿಸುವ ಎಕೈಕ ರಾಷ್ಟ್ರವಾಗಿದೆ
* ಜಗತ್ತಿನಲ್ಲಿ ನಿಮ್ಮ ಬೆಂಬಲಕ್ಕೆ ಯಾರು ನಿಲ್ಲದಂತೆ ನೋಡಿಕೊಂಡು, ನಿಮ್ಮನ್ನು ಒಂಟಿಯನ್ನಾಗಿ ಮಾಡುತ್ತೇವೆ,
* 18ಜನ ಹುತಾತ್ಮ ಸೈನಿಕರ ಬಲಿದಾನ ಅಷ್ಟು ಸರಳವಾಗಿ ಮರೆಯುದಿಲ್ಲ.
Post a Comment