Veerakesari 11:00
ಚಿತ್ರದುರ್ಗ ದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ್ ವತಿಯಿಂದ ಪ್ರತಿಷ್ಟಾಪಿಸಲಾಗಿರುವ ಹಿಂದೂ ಮಹಾ ಗಣಪತಿಯ ವಿಸರ್ಜನಾ  ಶೋಭಾಯತ್ರೆ ನಾಳೆ ಬೆಳಿಗ್ಗೆ ಯಿಂದ ಶುರುವಾಗಲಿದೆ.
ಶೋಭಯಾತ್ರೆಯ ಪ್ರಮುಕ ಆಕರ್ಷಣೆಗಳು 
ವಿವಿಧ ಮಠಾಧೀಶರುಗಳು ಭಾಗವಹಿಸಲಿದ್ದಾರೆ.
ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ ವೀರ ಯೋಧರ ಬಗೆಗಿನ ಸ್ತಬ್ದಚಿತ್ರ.
ಮಹರಾಷ್ಟ್ರದ 120 ಜನರ ನಾಸಿಕ್ ಬ್ಯಾಂಡ್.
20 ಕ್ಕಿಂತಲೂ ಹೆಚ್ಚು ಕಲಾತಂಡಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಲಿದ್ದಾರೆ.
ಮೂರು ಲಕ್ಷಕ್ಕು ಅಧಿಕ ಭಕ್ತಾಧಿಗಳು ದೇಶ ವಿದೇಶ ಹೊರ ರಾಜ್ಯಗಳಿಂದ ಭಾಗವಹಿಸುವ ನಿರೀಕ್ಷೆಯಿದೆ.
ಲಕ್ಷಂತಾರ ಭಕ್ತರಿಗೆ ಪ್ರಸಾದ ಹಂಚಲು ಪೈಪೋಟಿ
ಬಿ.ಡಿ ರಸ್ತೆಬದಿಗಳಲ್ಲಿ ಮೊದಲಿಗೆ ಪ್ರಾರಂಭವಾಗುವ ಮೇರವಣಿಗೆ, ಕೆ.ಎಸ್.ಆರ್.ಟಿಸಿ. ಡಿಪೋ ಬಳಗದಿಂದ ಕೋಸಂಬರಿ, ಐಸಿರಿ ಬೀಡಾ ಸ್ಟಾಲ್‌ನ ಹನುಮಂತಪ್ಪನಿಂದ ಪುಳುಯೋಗರೆ, ಆನಂತರ ಹಳೇ ನಗರಸಭೆ ಹತ್ತಿರ ಐಶ್ವರ್ಯ ಗ್ರೂಪ್, ಮಧುವೈನ್ಸ್, ಹಾಗೂ ಗಣೇಶ್ ಸ್ನೇಹಿತರಿಂದ ಟಮೋಟೋ ಬಾತ್, ಹೊಸ ನಗರಸಭೆ ಹತ್ತಿರ ಬೆಟ್ಟದ ಮಲ್ಲಪ್ಪ, ಮಂಜುನಾಥ್, ಅಪ್ಪಾಜಿ ಸ್ನೇಹಿತರಿಂದ ಪುಳುಯೋಗರೆ ಜೊತೆಗೆ ಮಾರ್ವಾಡಿ ಯುವಕರಿಂದ ನೀರಿನ ಬಾಟಲಿ, ಐಸ್‌ಕ್ರೀಮ್ ಹೀಗೆ ಬಂದಂತ ಭಕ್ತರಿಗೆ ದಾಣಿವಾರಿಸಲು ಭಕ್ತರು ತಮ್ಮ ತಮ್ಮ ಇತಿಮಿತಿಯಲ್ಲಿ ಪ್ರಸಾದ ನೀಡುವಲ್ಲಿ ಮುಂದಾಗಲಿದ್ದಾರೆ.
ಶೋಭಾಯಾತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಬಿಗಿ  ಬಂದುಬಸ್ತ್ , ಹತ್ತಕ್ಕಿಂತಲು ಹೆಚ್ಚು ಡ್ರೋನ್ ಗಳ ಬಳಕೆಯಾಗಲಿದೆ ಎಂಬ ನಿರೀಕ್ಷೆಯಿದೆ.
ಶೋಭಾಯಾತ್ರೆಯ ಮುನ್ನದಿನವಾದ ಇಂದು ಸಾವಿರಾರು  ಭಕ್ತರಿಂದ  ಬೈಕ್ ರ್ಯಾಲಿ
ಚಿತ್ರದುರ್ಗ ನಗರ ಈಗಾಗಲೇ  ಕೇಸರಿ ಪತಾಕೆಗಳಿಂದ ಕಂಗೊಳಿಸುತ್ತಿದೆ .

Post a Comment

Powered by Blogger.