ಮಂಗಳೂರು : ಪೆರುವಾಜೆ ಕಾಲೇಜಿನಲ್ಲಿ ನಡೆದಿದ್ದು ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಭೆ. ಆದರೆ ಆರ್ ಎಸ್ ಎಸ್ ಶಾಖೆ ಎಂದು ಕರಾವಳಿಯಾದ್ಯಂತ ಸುದ್ದಿಯಾಗಿತ್ತು.
ಬೆಳ್ಳಾರೆ,ಪೆರುವಾಜೆ ಯ ಶಿವರಾಮ ಕಾರಂತ ಕಾಲೇಜು ಒಂದಾಲ್ಲೊಂದು ವಿಷಯಗಳಿಂದ ಚರ್ಚಾ ವಿಷಯವಾಗಿ ಪ್ರಖ್ಯಾತಿ ಪಡೆಯುತ್ತಿದೆ.
ಹೌದು ಮತ್ತೊಮ್ಮೆ ಕಾಲೇಜು ಯುವಕರು ನಡೆಸಿದ ಶೃದ್ದಾಂಜಲಿ ಸಭೆ ಯ ಫೋಟೊವನ್ನು ಆರ್ ಎಸ್ ಎಸ್ ಶಾಖೆ ಎಂದು ಬಿಂಬಿಸಿ ಕಳೆದ ಎರೆಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಕರಾವಳಿಯ ಪತ್ರಿಕೆಗಳು ನಿಜ ಎನ್ನುವ ರೀತಿಯಲ್ಲಿ ಬಿತ್ತರಿಸಿದವು.
ಅಲ್ಲಿ ನಿಜವಾಗಿ ನಡೆದಿದ್ದೇನು ಎಂಬುದನ್ನು ಯಾರು ಗಮನಿಸ ಹೋಗಲಿಲ್ಲ ಯಾರ ಜೊತೆ ಕೇಳಲು ಇಲ್ಲ .ನಾವು ಕೂಡ ಸುದ್ದಿಯನ್ನು ನಿಜ ಎಂದು ನಂಬಿ ನಮ್ಮ ಪೇಜ್ ನಲ್ಲಿ ಬಿತ್ತರಿಸಿದ್ದೆವು ಆದರೆ ತಕ್ಷಣ ಅದೇ ಕಾಲೇಜು ವಿದ್ಯಾರ್ಥಿಯೋರ್ವ ನಮ್ಮ ಪೇಜ್ ಗೆ ಸಂದೇಶ ಕಳುಹಿಸಿ ಅದು ಆರ್ ಎಸ್ ಎಸ್ ಶಾಖೆ ನಡೆಸಿದ್ದು ಅಲ್ಲ ಉರಿಯಲ್ಲಿ ಮೃತಪಟ್ಟ ಸೈನಿಕರಿಗೆ ನಡೆಸಿದ ಶ್ರದ್ದಾಂಜಲಿ ಸಭೆ ಎಂದಾಗ ನಾವು ಪೋಸ್ಟ್ ತಕ್ಷಣ ಮುಖಪುಟದಿಂದ ತೆಗೆದು ಹಾಕಿದ್ದೆವು.
ನಂತರ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ವಿಚಾರಿಸಿದಾಗ ಅವನು ಹೇಳಿದ್ದು. ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರ ಮರಣವನ್ನು ಹೊಂದಿದ ನಮ್ಮ ವೀರ ಯೋಧರಿಗೆ ಕಾಲೇಜಿನಲ್ಲಿ ಕೇಸರಿ ವಿದ್ಯಾರ್ಥಿಗಳಿಂದ ೨೦/೦೯/೨೦೧೬ ರ ಸಂಜೆ ಶ್ರಧ್ದಾಂಜಲಿಯನ್ನು ನಡೆಸಲಾಯಿತು ಎಂದು.
ಕಾಲೇಜಿನ ವಿದ್ಯಾರ್ಥಿಗಳ ಒಗ್ಗಟ್ಟನ್ನು ಸಹಿಸಲಾಗದ ಕೆಲ ಪತ್ರಿಕೆಗಳು ಸತ್ಯ ಗೊತ್ತಾದ ಮೇಲೂ ಮನಸ್ಸೋ ಇಚ್ಚೆ ವರದಿ ಪ್ರಕಟಿಸುತ್ತಿರುವುದು ದುರದೃಷ್ಟಕರ.

Post a Comment