Veerakesari 10:57
ಅಮೇರಿಕಾ : ಕಳೆದ ವಾರ ಅಮೇರಿಕಾದ ದ ಶಾಪಿಂಗ್ ಮಾಲ್ ನಲ್ಲಿ ಮುಸ್ಲಿಂ ಜಿಹಾದಿಗಳು ನಡೆಸಿದ್ದ ಭೀಕರ ದಾಳಿ ಖಂಡಿಸಿ, ಘಟನೆ ನಡೆದ ಸ್ಥಳದಿಂದ 90 ಮೈಲಿ ದೂರದಲ್ಲಿರುವ “ಲೋನ್ಸ್ ಡೇಲ್” ಎಂಬಲ್ಲಿ  ಹೊಟೆಲ್ ಮಾಲಕನೋರ್ವ ತನ್ನ ರೆಸ್ಟೋರೆಂಟ್ ಮೆನುಬೋರ್ಡ್ ನಲ್ಲಿ “ಮುಸ್ಲಿಮ್ಸ್ ಗೆಟ್ ಔಟ್” ಫಲಕ ಹಾಕಿದ್ದು ಈಗ ವಿಶ್ವದಾದ್ಯಂತ ಸುದ್ದಿಯಾಗಿದೆ.
ಮಿನ್ನೋಸೋಟಾ ಸೆಂಟ್ ಕ್ಲೌವ್ಡ್  ಶಾಪಿಂಗ್ ಮಾಲ್ ಗೆ ನುಗ್ಗಿದ್ದ ಜಿಹಾದಿ ದಾಳಿಕೋರ ಶಾಪಿಂಗ್ ಮಾಲ್ ನಲ್ಲಿ ಸಿಕ್ಕಸಿಕ್ಕವರಿಗೆ ಮನಸೋ ಇಚ್ಚೆ ಇರಿದಿದ್ದ. ಈ ಬೀಕರ ದಾಳಿಯಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದ ಆಕ್ರೋಷಗೊಂಡ ಟ್ರೀಟ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲಿಕ  ಡ್ಯಾನ್ ರ್ಯೂಡಿಂಗರ್ ತನ್ನ ಹೋಟಲ್ ಹೊರಗಡೆ “ಮುಸ್ಲಿಂ ಗೆಟ್ ಔಟ್” ಎಂದು ಬರೆದು ಹಾಕಿದ್ದ. ಆತನ ಈ ಕ್ರಮಕ್ಕೆ ವಿಶ್ವದಾದ್ಯಂತ ಮುಸ್ಲೀಮರಿಂದ ವಿರೋಧ ವ್ಯಕ್ತವಾಗಿದ್ದರು ಸ್ಥಳೀಯ ಸರ್ಕಾರ ಆತನ ಪರವಾಗಿ ನಿಂತಿದೆ. ಆತನಿಂದ ಯಾವುದೇ ಕಾನೂನು ಉಲ್ಲಂಗನೆಯಾಗಿಲ್ಲ ,ಆತನಿಗೆ ವಾಕ್ ಸ್ವಾತಂತ್ರ್ಯ ಇದೆ ಎಂದು ಹೇಳಿತ್ತು.
ತನ್ನ ವಿವಾದಾತ್ಮಕ ಬರವಣಿಗೆ ಕುರಿತು ಡ್ಯಾನ್ ರ್ಯೂಡಿಂಗರ್ ಅವರು, 
” ನಾನು ಯಾವುದೇ ನಿರ್ಧಿಷ್ಟ ಮುಸ್ಲಿಂ ಸಮುದಾಯದ ಕುರಿತು ಈ ಮಾತು ಹೇಳಿಲ್ಲ, ಹಾಗೆಯೇ ನಾನು ಉಗ್ರರನ್ನು ಹೋಟಲ್ ಒಳಗೆ ಬಿಟ್ಟುಕೊಳ್ಳಲು ಬಯಸೋದಿಲ್ಲ. ಜಗತ್ತಿನಾದ್ಯಂತ ಮುಸಲ್ಮಾನರಿಂದಾಗುತ್ತಿರುವ ರಕ್ತಪಾತದಿಂದ ಬೇಸತ್ತಿದ್ದೇನೆ. ಮುಸಲ್ಮಾನ ಉಗ್ರರಿಗೆ ನನ್ನ ಹೋಟಲ್ ಒಳಗೆ ಪ್ರವೇಶವಿಲ್ಲ ” ಎಂದಿದ್ದಾರೆ.
ಈ ಘಟನೆ ನಂತರ ಅಮೆರಿಕದ ಮಸೀದಿಯೊಂದು ಡ್ಯಾನ್ ರ್ಯೂಡಿಂಗರ್ ಅವರನ್ನು ಮಸೀದಿಗೆ ಭೇಟಿ ನೀಡಿ ಇಸ್ಲಾಂ ಕುರಿತು ಅಧ್ಯಯನ ನಡೆಸುವಂತೆ ಆಹ್ವಾನಿಸಿತ್ತು. ಆದರೆ ಡ್ಯಾನ್ ರ್ಯಾಡಿಂಗರ್ ಗೆ ಭಯೋತ್ಪಾದಕನಾಗಲು ಇಷ್ಟವಿಲ್ಲದ ಕಾರಣ ಮಸೀದಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

Post a Comment

Powered by Blogger.