ಹರ್ಯಾಣ : ರಸ್ತೆ ಬದಿ ಚಹಾ ಅಂಗಡಿ, ಕೈಯಲ್ಲಿ ಚಾ ಹುಡಿ ಡಬ್ಬ, ಈಕೆಯನ್ನು ನೋಡಿದರೆ ಯಾರೋ ಸಾಮಾನ್ಯ ಚಹಾ ಮಾರೋ ಹುಡುಗಿ ಅಂದ್ಕೊಂಡ್ರ ಇಲ್ಲ ಈಕೆ 23 ವರ್ಷ ವಯಸ್ಸಿನಲ್ಲಿಯೇ ರಾಷ್ಟ್ರೀಯ ಹಾಗೂ ಅಂತರಾಜ್ಯ ವೈಟ್ ಲಿಪ್ಟಿಂಗ್ ನಲ್ಲಿ ಏಳು ಬಾರಿ ಚಿನ್ನ ಗೆದ್ದ ಸಂತೋಷ
ಹರ್ಯಾಣದ ಸೋನಿಪತ್ ನ ಈಕೆ ಭಾರ ಎತ್ತುವಿಕೆಯನ್ನು ಅಭ್ಯಾಸ ಮಾಡೋ ಸಂದರ್ಭದಲ್ಲಿ ತನ್ನ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಳು. ಅದಕ್ಕೆ ಸರಿಯಾದ ಚಿಕಿತ್ಸೆ ಮಾಡಲು ಹಣದ ವ್ಯವಸ್ಥೆ ಇಲ್ಲದ ಕಾರಣ ವೈಟ್ ಲಿಪ್ಟಿಂಗ್ ನಲ್ಲಿ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಭಾರತದ ಕೀರ್ತಿ ಹೆಚ್ಚಿಸಬೇಕೆಂದುಕೊಂಡಿದ್ದ ತನ್ನ ಕನಸನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.
ಕಡುಬಡತನದ ಕುಟುಂಬದಿಂದ ಬಂದ ಈಕೆ ಚಿಕಿತ್ಸೆ ಏನು ಒಂದೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಹೀಗಾಗಿ ತನ್ನ ತಂದೆಯ ಟೀ ಸ್ಟಾಲಲ್ಲಿ ತಂದೆಗೆ ಸಹಾಯಮಾಡುತ್ತಾ ದಿನದೂಡುತ್ತಿದ್ದಾಳೆ. ಇವಳ ತಂದೆ ತಾಯಿಗೂ ಈಕೆ ಕ್ರೀಡೆಯಲ್ಲಿ ಹೆಸರು ಮಾಡಬೇಕೆಂದು ಆಸೆ ಇದೆ ಹೀಗಾಗಿ ಹರ್ಯಾಣ ಸರ್ಕಾರ ಈಕೆಯ ಚಿಕಿತ್ಸೆಯ ಖರ್ಚುವೆಚ್ಚಗಳನ್ನು ನೋಡಿಕೊಂಡು ಈಕೆಗೆ ಉತ್ತಮ ಕೋಚ್ ಸೌಲಭ್ಯ ಕೊಡಿಸಬೇಕು ಎಂದು ಅವರ ಆಶಯ.
ಇದೇ ರೀತಿ ಅದೆಷ್ಟೋ ಕ್ರೀಡಾಪಟುಗಳು ತಮ್ಮಲ್ಲಿ ಪ್ರತಿಭೆ ಇದ್ದರೂ ಹಣಕಾಸಿನ ತೊಂದರೆಯಿಂದ ತೆರೆಮರೆಯಲ್ಲಿ ಸರಿದು ಹೋಗುತ್ತಾರೆ. ಆದರೆ ಈಕೆಗೆ ಆ ರೀತಿ ಆಗದಿರಲಿ ಆದಷ್ಟು ಬೇಗ ಹರ್ಯಾಣ ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಸಂತೋಷಳ ಮುಖದಲ್ಲಿ ಮತ್ತೆ ಮಂದಹಾಸ ಮೂಡುವ ಹಾಗೆ ಮಾಡಲಿ.
Post a Comment