Veerakesari 09:38
ಅಮೇರಿಕಾ : ಪಾಪಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಅಮೇರಿಕಾ ಸರ್ಕಾರ ನಡೆಸಿದ ಆನ್ಲೈನ್ ಸಹಿ ಸಂಗ್ರಹಿಸುವ ಅಭಿಯಾನಕ್ಕೆ ವಿಶ್ವದೆಲ್ಲೆಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರಾಂಭಿಸಿದ ಕೇವಲ ಒಂದು ವಾರಗಳ ಒಳಗೆ 1 ಲಕ್ಷ ಗಡಿದಾಟಿದೆ. ಇದರ ಬಗ್ಗೆ ಒಬಾಮ ನೇತೃತ್ವದ ಸರ್ಕಾರ ಪ್ರತಿಕ್ರಿಯೆ ನೀಡಬೇಕಾಗಿದೆ.
ನಿರ್ದಿಷ್ಟ ಗಡುವಿನೊಳಗೆ ಆನ್ ಲೈನ್ ಗೆ ನಿರೀಕ್ಷಿತ ಸಂಖ್ಯೆಯಲ್ಲಿ ಸಹಿ ಸಂಗ್ರವಾದರೆ ಒಬಾಮ ಆಡಳಿತ ಅಂದರೆ ಶ್ವೇತ ಭವನ ಆ ವಿಷಯದ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಶ್ವೇತ ಭವನ ಹಲವು ವಿಚಾರಗಳಲ್ಲಿ ಈ ಹಿಂದೆಯೂ ಇಂತಹ ಆನ್ ಲೈನ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿತ್ತು.
ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ 60 ದಿನಗಳಲ್ಲಿ ಒಬಾಮ ಆಡಳಿತ ಪ್ರತಿಕ್ರಿಯೆ ನೀಡುವ ನಿರೀಕ್ಷೆ ಇದೆ. ಸೆ.21 ರಂದು ಪ್ರಾರಂಭವಾಗಿದ್ದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಕೇವಲ ಆರು ದಿನಗಳಲ್ಲಿ 1 ಲಕ್ಷ ಜನರು ಸಹಿ ಹಾಕಿದ್ದು ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಅಮೆರಿಕ ಕಾಂಗ್ರೆಸ್ ನಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರಾಗಿರುವ ಟೆಡ್ ಪೋ ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಪ್ರವರ್ತಿಸುವ ದೇಶವೆಂದು ಪರಿಗಣಿಸುವ ಮಸೂದೆಯನ್ನು ಮಂಡಿಸಿದ್ದರು.

Post a Comment

Powered by Blogger.