ಮಹಾರಾಷ್ಟ್ರ : ಉರಿಯಲ್ಲಿ 19 ಯೋಧರ ಸಾವಿಗೆ ಕಾರಣವಾದ ಉಗ್ರ ದಾಳಿಯಲ್ಲಿ ಪಾಪಿ ಪಾಕಿಸ್ತಾನ ಬೆಂಬಲಿತ ಉಗ್ರರ ಕೈವಾಡವಿರುವುದರಿಂದ ರಾಜ್ ಠಾಕ್ರೆಯ “ಮಹಾರಾಷ್ಟ್ರ ನವನಿರ್ಮಾಣ ಸಮಿತಿಯು” ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ನಟರಿಗೆ ಭಾರತ ತೊರೆಯಲು ಎರಡು ದಿನಗಳ ಗಡುವು ನೀಡಿತ್ತು.
ತಮ್ಮ ಆಜ್ಞೆಯನ್ನು ಧಿಕ್ಕರಿಸಿ ಯಾರಾದರೂ ಚಿತ್ರೀಕರಣದಲ್ಲಿ ಪಾಲ್ಗೊಂಡರೆ ಅಂತಹ ಚಿತ್ರೀಕರಣ ನಡೆಯುವ ಜಾಗಕ್ಕೆ ದಾಳಿ ಮಾಡುವುದಾಗಿ ಬಹಿರಂಗವಾಗಿ ಎಚ್ಚರಿಸಿತ್ತು. ಇದಕ್ಕೆ ಹೆದರಿ ಅನೇಕ ಪಾಪಿಸ್ತಾನ ನಟರು ರಾತ್ರೋ ರಾತ್ರಿ ಗಂಟು ಮೂಟೆ ಕಟ್ಟಿಕೊಂಡು ಓಡಿಹೋಗಿದ್ದರು.
ಜೀ ಎಂಟರ್ಟೈನ್ಮೆಂಟ್ ಒಡೆತನದ (ZEEL) “ಜಿಂದಗಿ”( Zindagi) ಹಿಂದಿ ಮನೋರಂಜನ ಚಾನಲ್ ತನ್ನ ಎಲ್ಲಾ ಪಾಕಿಸ್ತಾನಿ ಪ್ರದರ್ಶನಗಳನ್ನು ಸ್ಥಗಿತಗೊಳಿಸಿದೆ ಅದರ ಜೊತೆ ಎಲ್ಲಾ ಪಾಕಿಸ್ತಾನೀ ನಟರನ್ನು ತಮ್ಮ ಚಾನಲ್ ನ ಶೋಗಳಿಂದ ಹೊರಹಾಕಿದೆ.
ಎಸ್ಸೆಲ್ ಗ್ರೂಪ್ ಹಾಗೂ ಜೀ ಮೀಡಿಯಾ ದ ಅಧ್ಯಕ್ಷ ಸುಭಾಷ್ ಚಂದ್ರ ಗೋಯಿಲ್ ಸಾಮಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಬರೆದಿದ್ದಾರೆ.
ಈ ಹಿಂದೆ ಈ ಮಾಧ್ಯಮ ಪಾಪಿಸ್ತಾನ, ಟರ್ಕಿ ಹಾಗೂ ಈಜಿಪ್ಟಿನ ಅನೇಕ ಕಾರ್ಯಕ್ರಮಗಳನ್ನು ಹಿಂದಿಗೆ ಡಬ್ ಮಾಡಿ ಮರುಪ್ರಸಾರ ಮಾಡುತ್ತಿದ್ದರು. ಎಮ್ ಎನ್ ಎಸ್ ಹಿಂದಿ ಚಿತ್ರ ನಿರ್ದೇಶಕರಿಗೆ ” ನಿಮಗೆ ಹೊರ ದೇಶದ ನಟರೇ ಯಾಕೆ ಬೇಕು..??? ಭಾರತದಲ್ಲೇ ಉತ್ತಮ ನಟರಿದ್ದಾರೆ ಅವರನ್ನು ಬೆಂಬಲಿಸಿ” ಎಂದಿದ್ದಾರೆ.“ಯುಎನ್ ನಲ್ಲಿ ಮಿಯಾ ಶರೀಪ್ ರ ದುರದೃಷ್ಟಕರ ನಿಲುವು, ನಾವು ಜಿಂದಗಿ ಚಾನಲ್ ನಲ್ಲಿ ಬರೋ ಎಲ್ಲಾ ಪಾಕಿಸ್ತಾನಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಹಾಗೂ ಎಲ್ಲಾ ಪಾಕಿಸ್ತಾನಿ ನಟರನ್ನು ವಜಾಗೊಳಿಸುತ್ತಿದ್ದೇವೆ”
Post a Comment