Veerakesari 06:35
ಬೆಂಗಳೂರು: ಅಕ್ಟೊಬರ್ 16, 2016ರಂದು ‘ಕಮ್ಯುನಿಸ್ಟರ ಹಿಂಸಾಚಾರ’ದ ಕುರಿತು ವಿಚಾರ ಸಂಕಿರಣವು ಬೆಂಗಳೂರಿನ ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ 1ರ ತನಕ ನಡೆಯಲಿದೆ. 
ಕೇರಳದಲ್ಲಿ ಅನೇಕ ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಕಮ್ಯುನಿಸ್ಟ್ ಪ್ರೇರಿತ ಸರಣಿ ಹಿಂಸಾಚಾರದ ಕುರಿತು ವಿಚಾರ ಮಂಡನೆ, ಸಂವಾದ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಳೆದ 60 ವರ್ಷದಲ್ಲಿ ಕಮ್ಯುನಿಸ್ಟರ ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರ ಕುರಿತು ಚಿತ್ರಸಹಿತ ಮಾಹಿತಿಯಿರುವ ‘ಆಹುತಿ’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸಂಸದೆ ಮೀನಾಕ್ಷಿ ಲೇಖಿ, ಕಲಾವಿದ ಪ್ರಕಾಶ್ ಬೆಳವಾಡಿ, ಆರೆಸ್ಸೆಸ್ ನ ಅಖಿಲ ಭಾರತೀಯ ಸಹಪ್ರಚಾರ ಪ್ರಮುಖ್ ಜೆ.ನಂದಕುಮಾರ್, ಕಮ್ಯುನಿಸ್ಟರ ಆಕ್ರಮಣಕ್ಕೆ ಒಳಗಾದ ಸದಾನಂದನ್ ಮಾಸ್ಟರ್ ಉಪಸ್ಥಿತರಿರುವರು.
ಬನ್ನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
“ನಮಸ್ತೇ ಸದಾವತ್ಸಲೇ ಮಾತೃಭೂಮಿ, ಪುಣ್ಯ ಭೂಮಿ”

Post a Comment

Powered by Blogger.